Girl in a jacket

ಬೀಟ್ ಸಭೆನೇ ಈಗ ಜನಸಂಪರ್ಕ ಸಭೆ, ಅಪರಾಧ ಕಡಿವಾಣಕ್ಕೆ ಇಲಾಖೆಯಿಂದ ಖಡಕ್ ಸಭೆಗಳು

ಸುದ್ದಿಲೈವ್/ಶಿವಮೊಗ್ಗ

ವಾರ್ಡ್ ಸಭೆ ಹಿನ್ನಲೆಯಲ್ಲಿ ಇಂದು ಪೊಲೀಸರ ಬೀಟ್ ಸಭೆ ಬದಲಾಗಿದೆ. ಸಭೆಯಲ್ಲಿ ಸೈಬರ್ ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಇಂದು ವಿನೋಬ ನಗರ ಪಿಐ‌ ಚಂದ್ರಕಲಾ ರವರ ನೇತೃತ್ವದಲ್ಲಿ ವಿಜಯ್ ಪಿಎಸ್ಐ ಮತ್ತು ಕು|| ಶಿಲ್ಪಾ ಎನ್, ಪಿಎಸ್ಐ ಹಾಗೂ ಬೀಟ್ ಅಧಿಕಾರಿಗಳು ಠಾಣಾ ವ್ಯಾಪ್ತಿಯ ಸೋಮಿನಕೊಪ್ಪ ಏರಿಯಾದಲ್ಲಿ ಬೀಟ್ ಸಮಿತಿ ಸದಸ್ಯರ ಸಭೆ ಮತ್ತು ನಾಗರೀಕ ಸಮಿತಿ ಸದಸ್ಯರ ಸಭೆ ನಡೆಸಲಾಯಿತು.

ಐಎಂವಿ ಕಾಯ್ದೆ, ಸೈಬರ್ ಕ್ರೈಂ, OTP ವಂಚನೆ ಬಗ್ಗೆ ಮಾಹಿತಿ ನೀಡಿ, ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ / 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.

ಗ್ರಾಮಾಂತರ ಠಾಣೆಯ ಜನಸಂಪರ್ಕ ಸಭೆ

ಅದರಂತೆ, ತ್ಯಾವರೇ ಚಟ್ನಳ್ಳಿ ವಡ್ಡರಹಟ್ಟಿ ಗ್ರಾಮದಲ್ಲಿ  ಸತ್ಯನಾರಾಯಣ ಪಿ ಐ ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆ ರವರ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಾಯಿತು,

1) ಗ್ರಾಮಕ್ಕೆ ನೇಮಕವಾದ ಬೀಟ್ ಸಿಬ್ಬಂದಿ ಮತ್ತು ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರ ದೂರವಾಣಿ ಸಂಖ್ಯೆ ಯನ್ನು ಇಟ್ಟು ಕೊಳ್ಳಲು ಸೂಚಿಸಲಾಯಿತು.  ಯಾವುದೇ ಮಾಹಿತಿ, ಸಮಸ್ಯೆ ಮತ್ತು ಸಹಾಯಕ್ಕಾಗಿ ನೇರವಾಗಿ ಸಂರ್ಕಿಸಿ, 2) ಅಕ್ರಮ ಮದ್ಯ ಮಾರಾಟ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಯಿತು.

ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ದಾಳಿ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. 3) ಸಾರ್ವಜನಿಕರ ತುರ್ತು ಸಹಾಯಕ್ಕಾಗಿ 112 ಸಹಾಯವಾಣಿಯನ್ನು ಅನುಷ್ಠಾನ ಮಾಡಿದ್ದು, ಯಾವುದೇ ಸಮಸ್ಯೆ / ಸಹಾಯಕ್ಕಾಗಿ 112 ಗೆ ಕರೆ ಮಾಡಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ತುಂಗನಗರ ಪೊಲೀಸ್ ಠಾಣ ವ್ಯಾಪ್ತಿಯ ಜನಸಂಪರ್ಕ ಸಭೆ

ಅದರಂತೆ, ಇಂದು ತುಂಗನಗರ ಪೋಲಿಸ್ ಠಾಣಾ ವ್ಯಾಪ್ತಿಯ, ಜೆಪಿ ನಗರದಲ್ಲಿ ಶ್ರೀ ಮಂಜುನಾಥ್ ಪಿ ಐ ತುಂಗನಗರ ಪೋಲಿಸ್ ಠಾಣೆ ರವರ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ನಡೆಸಿ, ಈ ಕೆಳಕಂಡ ಮಾಹಿತಿ ನೀಡಿದರು.

1) ಮಾದಕ ವಸ್ತು ಗಾಂಜಾ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ, ದುಷ್ಪರಿಣಾಮ ಬೀರಲಿದ್ದು, ಗಾಂಜಾ ಮಾರಾಟ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಗಾಂಜಾ ಮಾರಾಟದ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

2) ಯಾವುದೇ ಸಮಸ್ಯೆ ಉದ್ಭವವಾದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಆಗ *ಸಮಸ್ಯೆಯನ್ನು ಮೂಲದಲ್ಲಿಯೇ* ಬಗೆಹರಿಸಬಹುದು. ಇದರಿಂದ *ಸಮಸ್ಯೆ ದೊಡ್ಡದಾಗದಂತೆ ತಡೆಯಲು ಸಾಧ್ಯವಾಗಲಿದೆ.*

3) ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡುವುದರಿಂದ ಅಪರಾಧವನ್ನು ತಡೆಯಲು ಮತ್ತು ಅಪರಾಧ ನಡೆದಾಗ ಶೀಘ್ರವಾಗಿ ಪತ್ತೆ ಹಚ್ಚಲು ಸಹಾಕಾರಿಯಗಲಿದೆ, ಆದ್ದರಿಂದ ಎಲ್ಲರು ತಮ್ಮ ಮನೆ ಮತ್ತು ಅಂಗಡಿಗಳಿಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಯಿತು.

4) ಸಂಚಾರ ಮತ್ತು ರಸ್ತೆ ಸುರಕ್ಷತಾ ನಿಯಮಗಳು, ಪೋಕ್ಸೊ ಕಾಯ್ದೆ, ಸೈಬರ್ ಕ್ರೈಂ, ಆನ್ ಲೈನ್ ವಂಚನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜೆಪಿ ನಗರದ ಸಾರ್ವಜನಿಕರು, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/15926

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live