ಚರಂಡಿ ಕಟ್ಟೆಗೆ ಡಿಕ್ಕಿ ಹೊಡೆದು ಮಗಚಿ ಬಿದ್ದ ಖಾಸಗಿ ಬಸ್

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರದಲ್ಲಿ ಖಾಸಗಿ ಬಸ್ ವೊಂದು ಪಲ್ಟಿ ಹೊಡೆದಿದೆ. ಕುಮಧ್ವತಿ ಕಾಲೇಜಿನ ಬಳಿಯ ಚರಂಡಿ ಕಟ್ಟೆಗೆ ಡಿಕ್ಕಿ ಹೊಡೆದು ಮಗಚಿ ಬಿದ್ದಿದೆ.

ಈ ಘಟನೆ ಇಂದು ಮಧ್ಯಾಹ್ನ ಸುಮಾರು 2 ಗಂಟೆಯ ಆಸುಪಾಸಿನಲ್ಲಿ ನಡೆದಿದೆ. ಸೊರಬದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ ಬೆಂಗಳೂರು ತಲುಪಿ ವಾಪಾಸ್ ಸೊರಬಕ್ಕೆ ಬರುತ್ತಿದ್ದ ವೇಳೆ ಪಲ್ಟಿ ಹೊಡೆದಿದೆ. ಬಸ್ ನಲ್ಲಿ ಚಾಲಕನನ್ನ ಹೊರತು ಪಡಿಸಿ ಬೇರೆಯಾರೂ ಇಲ್ಲವೆಂದು ತಿಳಿದುಬಂದಿದೆ.

ಬೈಕ್ ವೊಂದನ್ನ ಹಿಂದಕ್ಕೆ ಹಾಕುವ ಯತ್ನದಲ್ಲಿ ಸವಾರ ಬಸ್ ಗೆ ಅಡ್ಡ ಬಂದಿದ್ದು, ಆತನನ್ನ ತಪ್ಪಿಸಲು ಹೋಗಿ ಬಸ್ ಕಟ್ಟೆಗೆ ಹೊಡೆದು ಪಲ್ಟಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಿಕಾರಿಪುರದ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರ ಕೊರ್ಲಹಳ್ಳಿ ಗ್ರಾಮದ ಯುವಕನಾಗಿದ್ದಾನೆ ಎಂದು ತಿಳಿದು ಬಂದಿದೆ ಅಚ್ಚರಿ ಎಂದರೆ ಆತ ಯಾವ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬುದು ತಿಳಿದು ಬಂದಿಲ್ಲ.

ಸೊರಬದ ಬಸ್ ಎಂದು ತಿಳಿದು ಬಂದಿದ್ದು ಸ್ಲೀಪರ್ ಕೋಚ್ ಬಸ್ ಆಗಿದೆ. ಚಾಲಕನಿಗೂ ಪೆಟ್ಟು ಬಿದ್ದಿರುವುದಾಗಿ ತಿಳಿದು ಬಂದಿದೆ. ಬಸ್ ನ ಮುಂದಿನ ವೀಲು ಸಹ ಕಟ್ ಆಗಿ ಕಟ್ಟೆಯ ಆಕಡೆ ಇದ್ದ ಜಮೀನಿಗೆ ಬಸ್ ಮಗಚಿ ಬಿದ್ದಿದೆ.

ಇದನ್ನೂ ಓದಿ-https://suddilive.in/archives/14482

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close