ಸುದ್ದಿಲೈವ್/ಭದ್ರಾವತಿ
ತಾಲೂಕಿನ ಬಾಬಳ್ಳಿಯ ಸಮೀಪ ನಡೆಯುತ್ತಿದ್ದ ಜಾತ್ರ ಮಹೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತರ ಮೇಲೆ ಹೆಜ್ಹೇನೊಂದು ದಾಳಿ ನಡೆಸಿರುವ ಘಟನೆಯೊಂದು ನಡೆದಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಬಾಬಳ್ಳಿಯಲ್ಲಿ ಗಂಗಾ ಪೂಜೆ ಮಾಡಲು ಹೋಗಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆದಿದ್ದು ಹಲವರನ್ನ ಶಿವಮೊಗ್ಗ ಹಾಗೂ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭದ್ರಾವತಿಯಲ್ಲಿ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗುತ್ತಿತ್ತಷ್ಟೆ ಅಲ್ಲದೆ, ಪೂರ್ವ ವಿಧಿವಿಧಾನಗಳನ್ನ ನಡೆಸಲಾಗುತ್ತಿತ್ತು. ಅದರಂತೆ ಬಾಬಳ್ಳಿಯ ನಿವಾಸಿಗಳು ಗಂಗೆ ಪೂಜೆ ಮಾಡಲು ಹೊರಟಿದ್ದರು. ಈ ವೇಳೆ ಹೆಜ್ಜೇನು ದಾಳಿನಡೆಸಿದೆ.
ಎರಡು ವರ್ಷದ ಮಗುವಿನಮೇಲೂ ಹೆಜ್ಜೇನು ದಾಳಿ ನಡೆಸಿದ್ದು ಈ ಮಗುವನ್ನ ಬಾಲಕನೋರ್ವ ರಕ್ಷಣೆ ಮಾಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ-https://suddilive.in/archives/15342