ಸುದ್ದಿಲೈವ್/ಶಿವಮೊಗ್ಗ
ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಡೋನೆಷನ್ ಹಾವಳಿ ತಪ್ಪಿಸುವಂತೆ, ಪ್ರವೇಶಾತಿ ಮಾಡಿಕೊಳ್ಳಲು ಎನ್ ಎಸ್ ಯುಐ ಆಗ್ರಹಿಸಿ ಮನವಿ ಸಲ್ಲಿಸಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುತ್ತಲೇ ಡೋನೆಷನ್ ಹಾವಳಿ ಶುರುವಾಗಿದ್ದು, ವಿದ್ಯಾರ್ಥಿಗಳು ಪದವಿ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಪಡೆಯಲು ಲಕ್ಷಾಂತರ ರೂ. ಡೋನೆಷನ್ ಪಾವತಿಸಬೇಕಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ವಹಿಸಿ ಡೋನೆಷನ್ ಹಾವಳಿ ತಪ್ಪಿಸಲು ಕಠಿಣ ಆದೇಶ ಹೊರಡಿಸಬೇಕು ಎಂದು ಸಂಘಟನೆ ಮನವಿ ಸಲ್ಲಿಸಿದೆ.
ಸರ್ಕಾರ ನಿಗಧಿಪಡಿಸುವ ಕಡಿಮೆ ಶುಲ್ಕವನ್ನೇ ಪಡೆದುಕೊಳ್ಳುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಬೇಕು. ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸರ್ಕಾರ ಅನೇಕ ರೀತಿಯಲ್ಲಿ ಸೌಲಭ್ಯ ಒದಗಿಸುತ್ತದೆ. ಶುಲ್ಕದಲ್ಲಿ ವಿನಾಯಿತಿ ನೀಡಿದರೆ ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಬಡವರಿಗೆ ಅನುಕೂಲವಾಗುತ್ತದೆ.
ಸರ್ಕಾರ ನಿಗಧಿಪಡಿಸುವ ಶುಲ್ಕ ಪಡೆಯುವಂತೆ ಸೂಚಿಸಬೇಕು. ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಿಂದ ಹಾಗೂ ಪದವಿ ಪೂರ್ವ ಕಾಲೇಜುಗಳಿಂದ ಪಾಲಕರಿಗೆ ಆಗುವ ಕಿರುಕುಳ ತಪ್ಪಿಸಬೇಕು. ರಾಜ್ಯದಲ್ಲಿ ಡೋನೆಷನ್‌ಗೆ ಕಡಿವಾಣ ಹಾಕಬೇಕು.
ಇನ್ನೊಂದೆಡೆ ಪಿಯುಸಿ ಫಲಿತಾಂಶ ಬಂದು ತಿಂಗಳೂ ಆಗಿಲ್ಲ. ಈಗಾಗಲೇ ಎಲ್ಲ ಖಾಸಗಿ ಕಾಲೇಜುಗಳು ಪ್ರವೇಶಾತಿ ಮುಗಿದಿವೆ ಎನ್ನುತ್ತಿದ್ದಾರೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಪದವಿ ಶಿಕ್ಷಣ ಪ್ರವೇಶಾತಿಯಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ಖಾಸಗಿ ಪದವಿ ಕಾಲೇಜುಗಳು ಹಾಗೂ ಪದವಿಪೂರ್ವ ಕಾಲೇಜುಗಳು ರೋಸ್ಟರ್ ಪದ್ಧತಿ ಅನುಸರಿಸಿ ಪ್ರವೇಶ ಪ್ರಕ್ರಿಯೆ ಆರಂಭಿಸಲು ಆದೇಶಿಸಬೇಕು.
ಇಲ್ಲವಾದರೆ ಜಿಲ್ಲಾ ಎನ್ ಎಸ್ ಯು ಐ ತೀವ್ರ ಹೋರಾಟ ನೆಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು ಈ ಸಂದರ್ಭದಲ್ಲಿ NSUI ಜಿಲ್ಲಾಧ್ಯಕ್ಷ ವಿಜಯಕುಮಾರ್ ಕಾರ್ಯಧ್ಯಕ್ಷ ಕಾಟಿಕೆರೆ ರವಿ ಗ್ರಾಮಾಂತರ ಅಧ್ಯಕ್ಷ ಹರ್ಷಿತ್ ನಗರ ಅಧ್ಯಕ್ಷ ಚರಣ್ ಚಂದ್ರು ಜಿ ರಾವ್ ರವಿ ವರುಣ್ ತೌಫಿಕ್ ತೇಜು ಸುಹಾಸ್ ಅಭಿಷೇಕ್ ಸೃಜನ್ ಫರಾನ್ ಪ್ರಜ್ವಲ್ ಇನ್ನು ಹಲವಾರು ಪಾಲ್ಗೊಂಡಿದ್ದರು.
ಇದನ್ನೂ ಓದಿ-https://suddilive.in/archives/14754