ನಿನ್ನೆ ಜಿಲ್ಲಾ ಬಿಜೆಪಿ ಕೋರ್ ಕಮಿಟಿಯಲ್ಲಿ ನಡೆದಿದ್ದು ಏನು?

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಗೆ ಟಿಕೇಟ್ ಹಂಚಿಕೆ ವಿಷಯದಲ್ಲಿ ಶಿವಮೊಗ್ಗದಲ್ಲೂ ಅಸಮಾಧಾನ ಹೊರಬಿದ್ದಿದೆ. ಎಲ್ಲವೂ ಸರಿಯಿಲ್ಲವೆಂಬ ವಿಷಯ ಪಕ್ಷದ ಪಡಸಾಲೆಯಿಂದಲೇ ಹೊರಬೀಳುತ್ತಿದೆ.

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಡಾ.ಸರ್ಜಿ ಹೆಸರು ಹೊರ ಬೀಳುತ್ತಿದ್ದಂತೆ ಉಡುಪಿ ಮಾಜಿ ಶಾಸಕ ರಘುಪತಿ ಭಟ್ಟರು ಆಕ್ಷೇಪಿಸಿದ್ದರು. ಅವರನ್ನ ಬೆಂಬಲಿಸಿ ಮತ್ತೋರ್ವ ಆಕಾಂಕ್ಷಿ ವಿಕಾಸ ಪುತ್ತೂರು ಸಹ ಬೆಂಬಲಿಸಿ ಪೋಸ್ಟ್ ಮಾಡಿದ್ದರು.

ಅದರ ಬೆನ್ನಲ್ಲೇ ನಿನ್ನೆ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಆಕ್ಷೇಪಗಳು ಕೇಳಿ ಬಂದಿವೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೇಟ್ ನೀಡಬೇಕೋ ಅಥವಾ ನಿನ್ನೆ ಮೊನ್ನೆ ಬಂದವರಿಗೆ ಟಿಕೇಟ್ ಕೊಡಬೇಕೋ ಎಂಬ ಆಕ್ಷೇಪ ಕೇಳಿ ಬಂದಿದೆ.

ಪಕ್ಷಕ್ಕಾಗಿ ದುಡಿದವರು ಎಲ್ಲಿಗೆ ಹೋಗ ಬೇಕು ಎಂದು ಆಕ್ಷೇಪಿಸಲಾಗಿದೆ. ಎಂಎಲ್ ಸಿ ಮತ್ತು ಶಾಸಕರ ಎದುರೇ ಈ ಆಕ್ಷೇಪಗಳು ಕೇಳಿ ಬಂದಿದೆ. ಆದರೆ ಟಿಕೇಟ್ ಒನ್ನೆ ಹಂಚಿಕೆಯಾದ ನಂತರ ಮತ್ತೊಮ್ಮೆ ಹಂಚಲು ಶಿಸ್ತಿನ ಪಕ್ಷದಲ್ಲಿ ಅವಕಾಶವಿದೆಯಾ ಎಂಬ ಅನುಮಾನ ಹೆಚ್ಚಾಗಿದೆ.

ಇದನ್ನೂ ಓದಿ-https://suddilive.in/archives/14670

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close