ಸುದ್ದಿಲೈವ್/ತೀರ್ಥಹಳ್ಳಿ
ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಸಮೀಪ ಖಾಸಗಿ ಬಸ್ ಒಂದು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿದೆ.
ಇಂದು ಬೆಳಗ್ಗೆ 10.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳಸದಿಂದ ಶಿವಮೊಗ್ಗಕ್ಕೆ ಬರುವ ಖಾಸಗಿ ಬಸ್ ಮಂಡಗದ್ದೆಯ 15 ನೇ ಮೈಲಿಕಲ್ಲಿನ ಬಳಿ ಹೋಗುತ್ತಿರುವ ವೇಳೆ ಬಸ್ ಚಾಲಕ ಎದುರಿಗೆ ಸಾಗುತ್ತಿದ್ದ ವಾಹನವನ್ನ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನ ನಿಯಂತ್ರಣ ತಪ್ಪಿದ ಬಸ್ ಇನ್ನೊಂದು ವಾಹನಕ್ಕೆ ಡಿಕ್ಕಿಯಾಗಿ ರಸ್ತೆ ಪಕ್ಕದ ಮರವೊಂದಕ್ಕೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಮಗುವು ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ. ಇಬ್ಬರ ಪರಿಸ್ಥಿತಿ ಗಂಭೀರವಾಗಿ ಎನ್ನಲಾಗಿದೆ. ಇನ್ನೂ ಘಟನೆಯಲ್ಲಿ ಬಸ್‌ನ ಒಂದು ಬದಿ ಬಹುತೇಕ ನುಜ್ಜುಗುಜ್ಜಾಗಿದೆ.
ಇದನ್ನೂ ಓದಿ-https://suddilive.in/archives/15212
Tags:
ರಾಜಕೀಯ ಸುದ್ದಿಗಳು