ಸುದ್ದಿಲೈವ್/ಶಿವಮೊಗ್ಗ
16580 ಕ್ರಮ ಸಂಖ್ಯೆಯ ಶಿವಮೊಗ್ಗ-ಯಶವಂತಪುರ ಇಂಟರ್ ಸಿಟಿ ರೈಲು 45 ಕ್ಕೂ ಹೆಚ್ಚು ಗಂಟೆಗಳ ಕಾಲ ತಡವಾಗಿ ಸಂಚರಿಸುತ್ತಿದೆ. ಇದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ.
ಇಂದು ಮಧ್ಯಾಹ್ನ 3-45 ಕ್ಕೆ ಸರಿಯಾಗಿ ಯಶವಂತ್ ಪುರ ಇಂಟರ್ ಸಿಟಿ ರೈಲು ಶಿವಮೊಗ್ಗ ರೈಲ್ವೆ ಸ್ಟೇಷನ್ ಬಿಡಬೇಕಿತ್ತು. ಆದರೆ ತರೀಕೆರೆಯ ಬಳಿಯ ಶಿವಪುರದಲ್ಲಿ ಧಾರಾಕಾರದ ಮಳೆಗೆ ರೈಲು ತಡವಾಗಿ ಸಂಚರಿಸುತ್ತಿದೆ.
4-30 ಕ್ಕೆ ಒಂದು ವೇಳೆ ರೈಲು ಶಿವಮೊಗ್ಗ ಸ್ಟೇಷನ್ ಬಿಡಲಿಲ್ಲವೆಂದರೆ ಇನ್ನೂ ಒಂದು ಗಂಟೆ ತಡವಾಗಬಹುದು ಎಂದು ಹೇಳಲಾಗುತ್ತಿದೆ. ಶಿವಪುರದಲ್ಲಿ ಭಾರಿ ಮಳೆ ಗಾಳಿಗೆ ಮರವೊಂದು ಧರೆಗೆ ಉದುರಿದೆ.
ಧರೆಗೆ ಉದುರಿದ ಮರ ರೈಲ್ವೆ ಹಳಿಯ ಮೇಲೆ ಉರುಳಿದ್ದು ಕೇಬಲ್ ಕಟ್ಟಾಗಿದೆ. ಪರಿಣಾಮ ಇವೆಲ್ಲಾ ಸಿದ್ಧತೆ ಆಗಲು ಸಮಯ ಬೇಕಾಗಿರುವುದರಿಂದ ರೈಲು ತಡವಾಗಿ ಸಂಚರಿಸಲಿದೆ ಇದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ-https://suddilive.in/archives/14524
Tags:
ರಾಜ್ಯ ಸುದ್ದಿಗಳು