ಅನಾಥವಾಗಿದ್ದ ಕನ್ನಡ ಶಾಸನಕ್ಕೆ ದೊರೆಯಿತು ಮುಕ್ತಿ

ಸುದ್ದಿಲೈವ್/ಶಿವಮೊಗ್ಗ

ಉತ್ತರ ಪ್ರದೇಶ ರಾಜ್ಯದಲ್ಲಿರುವ ಕಾಶಿಯಲ್ಲಿ ಶಿವಪ್ಪನಾಯಕನ ಆಡಳಿತದ ವೇಳೆಯಲ್ಲಿ ನಿರ್ಮಾಣಗೊಂಡಿದ್ದು ಎನ್ನಲಾದ ಶಾಸನ ಕಂಬಕ್ಕೆ ಮುಕ್ತಿ ದೊರೆತಿದೆ. ಕಾಲು ಸಂಕವಾಗಿ  ಮಾರ್ಪಾಟುಗೊಂಡಿದ್ದ ಶಾಸನವನ್ನ ವ್ಯವಸ್ಥಿತವಾಗಿ ಸ್ಥಾಪನೆಗೊಂಡಿದೆ.

ಕಾಶಿಯ ಕಪಿಲದಾರ ಸರೋವರದ ಬಳಿ ಕನ್ನಡದ ಶಾಸನ ಪತ್ತೆಯಾಗಿದ್ದು, ಕೆಳದಿಯ ಶಿವಪ್ಪನಾಯಕನ ಕಾಲದಲ್ಲಿ ಈ  ಶಾಸನ ನಿರ್ಮಿಸಲಾಗಿತ್ತು. ಆ ಶಾಸನವನ್ನ ಸಾಗರದ ವಕೀಲ ಪ್ರವೀಣ್ ವಾರಣಾಸಿಗೆ ಭೇಟಿ ನೀಡಿದಾಗ  ಪತ್ತೆಯಾಗಿತ್ತು.

ಕೆಳದಿಯ ಶಿವಪ್ಪನಾಯಕನ ಕಾಲದ ನಡೆದಾಡುವ ಕಾಲು ಸಂಕವಾಗಿ ಶಾಸನವನ್ನ ಅಲ್ಲಿನ ಸ್ಥಳೀಯರು ಬಳಸಿಕೊಂಡಿದ್ದರು. ಇದರಿಂದ ಶಾಸನ ಕಂಬ ಅನಾಥ ಸ್ಥಿತಿಯಲ್ಲಿತ್ತು. ಶಿಲಾ ಶಾಸನದ ಮೇಲೆ ಶಿವಪ್ಪ ನಾಯಕನ ಕಾಲದ ಕನ್ನಡದ ಬರಹವಿತ್ತು. ಕಪಿಲ ಸರೋವರದಲ್ಲಿ ಈ ಶಾಸನ ಅನಾಥವಾಗಿ ಬಿದ್ದಿದ್ದು ಒಡಾಡುವ ಸಂಕವಾಗಿ ಬಳಕೆಯಾಗುತ್ತಿದ್ದ ಬಗ್ಗೆ ಸುದ್ದಿಲೈವ್ ವಿಸ್ತೃತವಾಗಿ ವರದಿ ಬಿತ್ತರ ಮಾಡಿತ್ತು.

ಕರ್ನಾಟಕ ಸರ್ಕಾರ ಇದರ ಸಂರಕ್ಷಣೆ ಮಾಡಲು ಕನ್ನಡಿಗ ವಕೀಲ ಪ್ರವೀಣ್ ಸಾಗರ್ ಆಗ್ರಹಿಸಿದ್ದರು. ವರದಿ ಬೆನ್ನಲ್ಲೇ ಶಿಲಾ ಶಾಸನ ವ್ಯವಸ್ಥಿತವಾಗಿ ಕಾಶಿ ಜಗದ್ಗುರುಗಳು(kashi Jagadguru) ಸ್ಥಾಪನೆ ಮಾಡಿಸಿದ್ದಾರೆ.

ಕಾಶಿಯ ಜಂಗಮವಾಡಿ ಮಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಾಗವತ್ಪಾದರು, ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಇದರ ಸ್ತಾಪನೆ ಮಾಡಿಸಿದ್ದಾರೆ. ಕಾಶಿಯ ಜಗದ್ಗುರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಠದ ಸಿಬ್ಬಂದಿಗಳು ವ್ಯವಸ್ಥಿತವಾಗಿ ಶಿಲ ಶಾಸನವನ್ನು ಸ್ಥಾಪನೆ ಮಾಡಿದ್ದಾರೆ.

ಕೊನೆಗೂ ಶಿವಪ್ಪನಾಯಕನ ಶಾಸನಕ್ಕೆ ಕಾಶಿಯಲ್ಲಿ  ಸೂಕ್ತ ನೆಲೆ ಸಿಕ್ಕಿದೆ. ಕಾಲುಸಂಕವಾಗಿ ಜನರು ನಡೆದಾಡುತ್ತಿದ್ದ ಶಿಲಾಶಾಸನ ಇದೀಗ ಸೂಕ್ತ ಸ್ಥಳದಲ್ಲಿ ಸ್ಥಾಪಿಸಿ ಸ್ವಚ್ಛಗೊಳಿಸಲಾಗಿದೆ. ಕೆಳದಿ ಸಾಮ್ರಾಜ್ಯದ ಮೊದಲ ಆಡಳಿತಗಾರ ಚೌಡಪ್ಪ ನಾಯಕ, ಕ್ರಿ.ಶ 1499 ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಕೆಳದಿ ರಾಜರು ಆಳ್ವಿಕೆ ಆರಂಭ ಮಾಡಿದ್ದರು.

ನಂತರ ಕ್ರಿ.ಶ.1565ರಲ್ಲಿ ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾದಾಗ ಕೆಳದಿ ಅರಸರು ಸ್ವಾತಂತ್ರ್ಯ ಪಡೆದರು. ಈ ಸಾಮ್ರಾಜ್ಯದ ಪ್ರಮುಖ ಆಡಳಿತಗಾರರು ಹಿರಿಯ ವೆಂಕಟಪ್ಪ ನಾಯಕ, ಶಿವಪ್ಪ ನಾಯಕ ಮತ್ತು ಕೆಳದಿ ಚೆನ್ನಮ್ಮ, 1763 ರಲ್ಲಿ ಹೈದರ್ ಅಲಿ ಕೆಳದಿಯನ್ನು ಸೋಲಿಸಿದಾಗ ಅವರ ಆಳ್ವಿಕೆ ಕೊನೆಗೊಂಡಿತ್ತು.

ಇದನ್ನೂ ಓದಿ-https://suddilive.in/archives/15686

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket