Girl in a jacket

ಸಚಿವ ಮಹಾದೇವಪ್ಪನವರು ರಾಜೀನಾಮೆ ನೀಡಲಿ-ಶಾಸಕ ಚೆನ್ನಬಸಪ್ಪ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಸರ್ಕಾರದ ಕೆಲ ಇಲಾಖೆಗಳಲ್ಲಿ ಆಗಿರುವ ಭ್ರಷ್ಠಾಚಾರದ ಸಂಗತಿಯನ್ನ ಬಿಜೆಪಿ ಅನೇಕ ಬಾರಿ ಹೇಳಿಕೊಂಡು ಬರುತ್ತಿದೆ . ಮತ್ತೊಂದು ಸಂಗತಿ ನಡೆದಿದ್ದು, ಕೊಲೆಗಟುಕ ಸರ್ಕಾರ ಎಂದು ಬಿಂಬಿತವಾಗಿದೆ ಎಂದು ಶಾಸಕ ಚೆನ್ನಬಸಪ್ಪ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಖಿ ನಿಗಮದಲ್ಲಿ ಅಧೀಕ್ಷಕರಾಗಿದ್ದ ಚಂದ್ರಶೇಖರ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡು ಮೂಲಕ ಸಚಿವರ ಬಗ್ಗೆಯೂ ಕೂಡ ಅನುಮಾನ ವ್ಯಕ್ತವಾಗುತ್ತಿದೆ. ಸಚಿವ ಮಹದೇವಪ್ಪ ರಾಜೀನಾನೆ ನೀಡಬೇಕು. ಸೂಕ್ತವಾಗಿ ಪ್ರಕರಣ ತನಿಖೆ ಆಗಬೇಕು.

187 ಕೋಟಿ 33 ಲಕ್ಷ ರೂ. ಬಿಡುಗಡೆಯಾಗಿದ್ದು, ಎಸ್ ಸಿ ಸಮುದಾಯದ ಅಭಿವೃಧಧಿ ಆಗಬೇಕು. ಸಮಾಜ ನಡೆದುಕೊಂಡ ರೀತಿ ಇಲಾಖೆ ನಡೆದುಕೊಂಡಿದೆ. 187 ಕೋಟಿ ಬೇರೆ ಬೇರೆ ಅಕೌಂಟ್ ಗೆ ಹಂಚಿಕೆಯಾಗಿದ್ದು ಈ ಹಿನ್ನಲೆಯಲ್ಲಿ ಆತ್ಮಹತ್ಯೆ ನಡೆದಿದೆ ಎಂದು ದೂರಿದರು.

7 ಪುಟಗಳ ಹಣಗಳನ್ನ ಸ್ಪಷ್ಟವಾಗಿ ವರಘಾಯಿಸಲಾಗಿದೆ. 2023 ರಿಂದ 2024 ರ ವರೆಗೆ ರಾಜ್ಯದ ಖಜಾನೆಯಿಙದ 187 ಕೋಟಿ ಹಣವನ್ನ ಅಧಿಕಾರಿಗಳ ಹೆಸರಿನಲ್ಲಿ ಹಣ ಹಂಚಿಕೆಯಾಗಿದೆ. ಸಂಗಡಿಗರು ಎಂದಿದ್ದಾರೆ. ಅವರನ್ನ ಹುಡುಕಬೇಕು.

ಯೂನಿಯನ್ ಬ್ಯಾಂಕ್ ನ ಮುಖ್ಯಾಧಿಕಾರಿ ಸ್ಮೃತಿ ಸ್ಮಿತ ಹೆಸರನ್ನ ಉಲ್ಲೇಖಿಸಲಾಗಿದೆ. ಬೇರೆ ಅಕೌಂಟ್ ಮಾಡುವ ಮೂಲಕ ಅವ್ಯವಹಾರವಾಗಿದೆ. 85 ಕೋಟಿ ಹಣ ಅವ್ಯವಹಾರ ನಡೆದಿದೆ. 187 ಕೋಟಿ ಹಣವನ್ನ ತನಿಖೆಗೆ ಒಳಪಡಿಸಬೇಕು. ಉನ್ನತಮಟ್ಟದ ತನಿಖೆಯಾಗಿ ಸಂಬಂಧ ಪಟ್ಟ ಸಚಿವರ ಹೆಸರು ಉಲ್ಲೇಕವಾಗದೆ ಇರಬಹುದು ಆದರೆ ತಕ್ಷಣಕ್ಕೆ ಸಚಿವರು ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಅನೇಕ ಇಲಾಖೆಯಲ್ಲಿ ಮೇಲಧಿಕಾರಿಗಳು ನಡರದುಕೊಂಡಿಲ್ಲ ಎಂದು ಆತ್ಮಹತ್ಯೆ ನಡೆದ ಅನೇಕ ಪ್ರಕರಣ ನಡೆದಿದೆ. ಚಂದ್ರಶಾಎಖರ್ ಅವರ ಸಾವಿಗೆ ನ್ಯಾಯ ಸಿಗಬೇಕು.‌ ತನಿಖೆಗೆ ಒಳಪಡಿಸಬೇಕು. ರಕ್ಷಣ ಇಲಾಖೆ ಎಫ್ಐಆರ್ ದಾಖಲಾಗಿದೆ. ಸಂಗಡಿಗರು ಎಂಬ ಪದ ಪ್ರಯೋಗ ನಡೆದಿದೆ. ತಕ್ಷಣ ತನಿಖೆ ಆಗಬೇಕು. ಸಚಿವರ ಹೆಸರು ಉಲ್ಲೇಖವಾಗಿದೆಯಾ ಎಂಬ ಪರಿಶೀಲನೆ ನಡೆಯಬೇಕು. ಸಚಿವರ ಹೆಸರು ಉಲ್ಲೇಕವಾಗದಿದ್ದರೆ ಮತ್ತೊಂದು ದಿಕ್ಕುತಪ್ಪಿಸುವ ಪ್ರಕರಣಚಾಗಲಿದೆ ಎಂದರು.

ಸರ್ಕಾರ ಸತ್ತುಹೋಗಿದೆ. ಮೊದಲು ಶಾಸಕನಾಗಿ ಎರಡು ತಿಂಗಳಲ್ಲಿ ಹೇಳಿದ್ದೆ. ಆನಂದಪುರದಲ್ಲಿ ಯುವಕರು ಲಾಂಗು ಹಿಡಿದು ಓಡಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಲಿದ್ದೇನೆ. ಅಧಿಕಾರಿಯ ಸಾವಿನ ಪ್ರಕರಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ .ಮೇಘರಾಜ್ ಜಗದೀಶ್, ಚಂದ್ರಶೇಝರ್, ಶ್ರೀನಾಗ್ ಬೊಮ್ಮನ್ ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/15559

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close