ಸುದ್ದಿಲೈವ್/ಶಿವಮೊಗ್ಗ
ಜೀ ವಾಹಿನಿಯಲ್ಲಿ ಬಿತ್ತರವಾಗುತ್ತಿರುವ ಹಮ್ ದೋ ಹಮಾರೆ ಭಾರಾ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ಅಕ್ಲಾಹುವಿನ ಬಗ್ಗೆ ಮತ್ತು ಕುರಾನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಸಿನಿನಾವನ್ನ ಬಿಡುಗಡೆ ಮಾಡದಂತೆ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಇಂದು ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಸ್ಜಿದ್ ನ ಅಧ್ಯಕ್ಷ ಮುನಾವರ್‌ಪಾಷ ಮಾತನಾಡಿ, ಹಮ್ ದೋ ಹಮ್ ಭಾರದ ಸಿನಿಮಾ ಟ್ರೈಲರ್ ನಲ್ಲಿ ಕುರಾನ್ ಶರೀಫ್ ರಲ್ಲಿ ಸೂರೆ ಎ ಬಕರ ಉಪದೇಶಗಳು ಹಾಗೂ ಸಂದೇಶಗಳ ಕುರಿತಂತೆ ತಪ್ಪು ಅಪಾರ್ಥ ಸೃಷ್ಠಿಸಿ ಪ್ರಚೋದನಾತ್ಮಕ ಹೇಳಿಕೆ ನೀಡುವಂತೆ ಮಾಡಲಾಗಿದೆ ಎಂದು ದೂರಿದರು.
ಪ್ರಚೋದನಾತ್ಮಕ ಹೇಳಿಕೆ ನೀಡುವ ಮೂಲಕ ಸಮಾಜದ ಸಾಮರಸ್ಯ ಹಾಳು ಮಾಡಲಾಗುತ್ತಿದೆ.ಇಸ್ಲಾಂ ಧರ್ಮದ ಬಗ್ಗೆ ಇರುವ ಭಾವನೆಗೆ ಮತ್ತು ನಂಬಿಕೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆ ಮಾಡದಂತೆ ಮುನಾವರ ಪಾಷ ಮನವಿ ಮಾಡಿಕೊಂಡಿದ್ದಾರೆ.
ರಾಷ್ಟ್ರಪತಿಗಳಿಗೆ, ಪ್ರಧಾನಮಂತ್ರಿಗಳಿಗೆ, ರಾಜ್ಯದರಾಜ್ಯಪಾಲರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜ್ಯದ ಗೃಹ ಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಿವಮೊಗ್ಗದ ಡಿಸಿ ಮತ್ತು ಎಸ್ಪಿ ಅವರಿಗೆ ಮನವಿ ಮಾಡಿಕೊಙಡಿರುವ ಇವರು, ಸಿನಿಮಾ ಬಿಡುಗಡೆಯಾಗದಂತೆ ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಅಖಿಲ ಭಾರತ ಚಿತ್ರೀಕರಣ ಮತ್ತು ವಾಣಿಜ್ಯ ಮಂಡಳಿ ಚೆನ್ನೈ ಹಾಗೂ ಮಹಾರಾಷ್ಟ್ರ, ಹಿಂದಿ ಚಲನಚಿತ್ರ ಹಾಗೂ ವಾಣಿಜ್ಯ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಮತ್ತು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರ ವಿರುದ್ಧ ಕ್ರಮ ಜರುಗಿಸಬೇಕು. ಮತ್ತು ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಸ್ಜೀದ್ ಕಮಿಟಿಯ ಕಾರ್ಯದರ್ಶಿ ಅಶ್ರಫ್ ಅಹಮದ್, ಸತ್ತಾರ್ ಬೇಗ್, ವಕೀಲರಾದ ನಯಾಜ್ ಅಹಮದ್ ಖಾನ್, ಖಾಜಿ ಅಶ್ರಫ್ ಹುಸೇ್ ಸಾಬ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/15572