ಏನಿದು ಮಂಗೋಟೆ ಸ್ನೇಹಿತರ ವಾಟ್ಸಪ್ ಗ್ರೂಪ್ ನ ಜಟಾಪಟಿ?

ಸುದ್ದಿಲೈವ್/ಹೊಳೆಹೊನ್ನೂರು

ಮಂಗೋಟೆಯ ಗ್ರಾಮದ ಸ್ನೇಹಿತರ ವಾಟ್ಸಪ್ ಗ್ರೂಪ್‌ನಲ್ಲಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಪರ ವಿರೊದ್ದ ವಾಟ್ಸಪ್ ಚಾಟಿಂಗ್ ವಿಚಾರದಲ್ಲಿ ಯುವಕರಿಬ್ಬರು ಹೊಡೆದಾಡಿಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ಮಲ್ಲೇಶ ಗಂಬೀರವಾಗಿ ಗಾಯಗೊಂಡು ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗೋಟೆಯ ಬಿಜೆಪಿ ಬೆಂಬಲಿತ ಯುವಕ ವೀರೇಶ್ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಜೂನ್ ೪ ರಂದು ರಾಜ್ಯಬಿಟ್ಟು ಹೋಗಬೇಕು ಈತನಿಗೆ ಬೆಂಬಲಿಸುವರು ತಾಯಿಗೆ ಹುಟ್ಟಿಲ್ಲ ಎಂದು ವಿಡಿಯೋ ಒಂದನ್ನು ಅಪಲೋಡ್ ಮಾಡಿ ಅಸಭ್ಯ ಮಾತುಗಳಿಂದ ನಿಂದನೆ ಮಾಡಿ ಕಾಂಗ್ರೆಸ್ ಕಾರ್ಯಕರ್ತನಿಗೆ ಬೈದಿದ್ದಾನೆ.

ಗ್ರೂಪ್‌ನಲ್ಲಿ ಅಸಭ್ಯ ಪೊಸ್ಟ್ ನೋಡಿದ ಮಲ್ಲೇಶ್ ಹಾಗೂ ವೀರೇಶ್ ನಡುವೆ ಮಾತಿಗೆ ಮಾತು ಬೆಳೆದಿದೆ. ಬಿಜೆಪಿ ಕಾರ್ಯಕರ್ತ ವೀರೇಶ್ ಕಾಂಗ್ರೇಸ್ ಬೆಂಬಲಿತ ಗ್ರಾಪಂ ಸದಸ್ಯ ಮಲ್ಲೇಶನ ಮೇಲೆ ಹಲ್ಲೆ ಮಾಡಿದ್ದಾನೆ. ಮಲ್ಲೇಶ್ ಹೊಳೆಹೊನ್ನೂರು ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಅಷ್ಠರಲ್ಲೆ ಎರಡು ಪಕ್ಷಗಳ ಮುಖಂಡರು ಇಬ್ಬರು ಯುವಕರನ್ನು ಕರೆದು ರಾಜಿ ಸಂದಾನ ನಡೆಸಿ ಪ್ರಕರಣವನ್ನು ತಣ್ಣಗಾಗಿಸಿ ವಾಪಾಸ್ ಕಳಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/15846

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket