ಸುದ್ದಿಲೈವ್/ಶಿವಮೊಗ್ಗ
ಚುನಾವಣೆ ಮೇಲೆ ಚುನಾವಣೆ ಬರ್ತಾಯಿದೆ. ದೆಹಲಿಯಲ್ಲಿ ಒಂದು ಕಡೆ ಆಯ್ಕೆಯಾದರೆ 6 ಪರಿಷತ್ ಚುನಾವಣೆ ನಡೆಯುತ್ತಿದೆ. ಎಲ್ಲಡೆ ಪ್ರವಾಸ ಮಾಡಿದ್ದೇನೆ. ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುವ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೈರುತ್ಯ ಪದವೀಧರ ಕ್ಷೇತ್ರವೂ ಸೇರಿದಂತೆ ಪರಿಷತ್ ನ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾರ್ಯಕರ್ತರು, ಮುಖ್ಯಮಂತ್ರಿಗಳು ಡಿಸಿಎಂ ಮತ್ತು ಎಲ್ಲಾ ಸಚಿವರು ನಮ್ಮ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುವ ಕೆಲಸ ನಡೆದಿದೆ. ನನ್ನ ಇಲಾಖೆಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನ ಗೆಲ್ಲಿಸಬೇಕಿದೆ ಎಂದರು.
5½ ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ 84 ಸಾವಿರ ಮತದಾರರಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ 24 ಸಾವಿರ ಮತಗಳಿವೆ. ನಮ್ಮ ಪಕ್ಷದ ಅಭ್ಯರ್ಥಿಯನ್ನ ಗೆಲಿಸಲು ಮನವಿ ಮಾಡಿದರು. ಇಂದು ಗೃಹ ಸಚಿವರು ಶಿವಮೊಗ್ಗದ ಮೃತ ಚಂದ್ರಶೇಖರ್ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಲಿದ್ದಾರೆ.
ಮಧ್ಯಾಹ್ನ ಗೃಹ ಸಚಿವ ಪರಂ
ಸಿಎಂ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕುಟುಂಬದ ನಿರ್ವಹಣೆ ಬಗ್ಗೆ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಅವರ ಪರವಾಗಿದೆ. ಇಲಾಖೆ ಅವ್ಯವಹಾರದ ಬಗ್ಗೆ ಗೃಹಸಚಿವರು ಮಾತನಾಡಲಿದ್ದಾರೆ. ನಾಳೆಯಿಂದ ಇಲಾಖೆಯ ಶಾಲೆಗಳು ಅಧಿಕೃತವಾಗಿ ನಡೆಯಲಿದೆ. ಸೇತುಬಂಧು ನಡೆಯಲಿದೆ. ಬೀದರ್ ನಲ್ಲಿ ಸಮವಸ್ತ್ರಗಳ ಬಗ್ಗೆ ಆಕ್ಷೇಪ ಕಂಡು ಬಂದಿದೆ. ನಿವಾರಿಸಲಿದ್ದೇನೆ.
ಸರ್ಕಾರ ಶಾಲೆಗೆ ಬನ್ನಿ
ಸರ್ಕಾರಿ ಶಾಲೆಗೆ ಬನ್ನಿ, 600 ಕರ್ಬಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ. ಫಲಿತಾಂಶ ಕುಸಿದಿದೆ ಎಂಬ ಆರೋಪ ಕಂಡುಬಂದಿದೆ. ಕಾಪಿ ಹೊಡೆಯುವುದು ನಿಂತ ಪರಿಣಾಮ ಫಲಿತಾಂಶ ಕಡಿನೆಯಾಗಿದೆ. ಗ್ರೇಸ್ ಮಾರ್ಕ್ಸ್ 20% ಕೊಡಲಾಗಿತ್ತು ಎನ್ನಲಾಗಿತ್ತು.
ನಾವೇ ಅಧಿಕ ಶಿಕ್ಷಕರ ನೇಮಕ
ಆದರೆ ಗ್ರೇಸ್ ಮಾರ್ಕ್ಸ್ 10% ಕೊಡಲಾಗಿದೆ. ಸುರೇಶ್ ಕುಮಾರ್ ಮಾಡಿದ ಹೊಲಸನ್ನ ನಾವು ಸರಿಪಡಿಸಿದ್ದೇವೆ. ಅವರ ಕಾಲದಲ್ಲಿ 3001 ಟೀಚರ್ಸ್ ನೇಮಕವಾಗಿತ್ತು. ನಾಗೇಶ್ ಇದ್ದಾಗ 1700 ನೇಮಕ ಮಾಡಿದ್ದೇವೆ. ಬಿಜೆಪಿ ಸರ್ಕಾರವಿದ್ದಾಗ ನೋಟೀಫಿಕೇಷನ್ ಆಗಿತ್ತು. ನನ್ನ ಕಾಲದಲ್ಲಿ 12 ಸಾವಿರ ಶಿಕ್ಷಕರನ್ನ ನೇಮಿಸಲಾಗಿದೆ. ಗ್ಯಾರೆಂಟಿ ನಡುವೆಯೂ ಇಷ್ಟು ದೊಡ್ಡ ಮಟ್ಟದಲ್ಲಿ ನೇಮಕ ಮಾಡಲಾಗಿದೆ ಎಂದರು.
2022-23 ರಲ್ಲಿ ದ್ವಿತೀಯ ಪಿಯುಸಿಯಲ್ಲಿ 7 ಲಕ್ಷ ವಿದ್ಯಾರ್ಥಿಗಳು ಎದುರಿಸಿದರು. ಐದು ಲಕ್ಷ ಜನ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಫೇಲ್ ಆದವರು ಮತ್ತು ಕಡಿಮೆ ಅಂಕಪಡೆದವರು 3 ಪರೀಕ್ಷೆ ಎದುರಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರೇಸ್ ಮಾರ್ಕ್ಸ್ ನೀಡುವಲ್ಲಿ ಸಿಎಂ ಗರಂ ಆಗಿರಲಿಲ್ಲ. ಮುಂದಿನ ವರ್ಷದಿಂದ ನಿಲ್ಲಿಸಲಾಗುತ್ತಿದೆ ಎಂದರು.
ಬಹಿರಂಗ ಪರೀಕ್ಷೆ
ಮೇ.7 ರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ಮಾತನಾಡುವೆ. ಸ್ಪೆಷಲ್ ಕ್ಲಾಸ್ ಮತ್ತು ಟ್ಯೂಷನ್ ತಪ್ಪಿಸಲು ಕ್ರಮ ಕೈಗೊಳ್ಳಲು ಪಠ್ಯ ಪುಸ್ತಕದೊಂದಿಗೆ ಪರೀಕ್ಷೆ ಆರಂಭಿಸುವ ಬಗ್ಗೆ ಸಚಿವರು ಸುಳಿವು ನೀಡಿದ್ದಾರೆ. ಖಾಸಗಿ ಶಿಕ್ಷಣ ಇಲಾಖೆ ಶುಲ್ಕ ಹೆಚ್ಚಳದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸರ್ಕಾರಿ ಶಾಲೆ ಕಟ್ಟಡ ಸೋರ್ತಾ ಇವೆ. ಸರಿಪಡಿಸಬೇಕಿದೆ.
ಇನ್ನೊಂದು ಎರಡು ಮೂರು ವರ್ಷಗಳ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಅನುದಾನಿತ ಶಿಕ್ಷಕರ ನೇಮಕ, ಸರ್ಕಾರಿ ಶಾಲೆ ಸರ್ಕಾರ ಶಿಕ್ಷಕರ ನೇಮಕವನ್ನೂಶೀಘ್ರದಲ್ಲಿ ಮಾಡಲಾಗುತ್ತಿದೆ. ಯಾವುದೇ ಆದರೆ ಎಸ್ಪಿ ಅವರಿಗೆ ಜವಬ್ದಾರಿ ನೀಡಿದ್ದೇವೆ. ಕಾನೂನು ಸುವ್ಯವಸ್ಥೆಯಲ್ಲಿ ಬಗ್ಗದಂತೆ ಸೂಚನೆ ನೀಡಲಾಗಿದೆ.
ಎಸ್ಪಿ ಕ್ರಮ ಕೈಗೊಳ್ತಾರೆ
ಚುನಾವಣೆ ನೀತಿ ಸಂಹಿತೆ ಇದೆ. ಹಾಗಾಗಿ ಎಸ್ಪಿ ಅವರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ. ಗಾಂಜಾ ಸ್ವರೂಪದಲ್ಲಿ ಘಟನೆ ನಡೆದಿದ್ದರೆ ಸಹಿಸಲಾಗದು. ಇಲಾಖೆಯ ಸಿಬ್ಬಂದಿ ಇದರಲ್ಲಿ ಭಾಗಿಯಾದರೆ ಅದನ್ನ ಎಸ್ಪಿ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ವಾಲ್ಕೀಕಿ ಅಭಿವೃದ್ಧಿ ಇಲಾಖೆಯ ಹಣ ಬೇರೆ ರಾಜ್ಯದ ಚುನಾವಣೆಗೆ ಬಳಕೆ ಆಗಿರುವ ಬಗ್ಗೆ ಅಮುಮಾನ ವ್ಯಕ್ತಪಡಿಸಿದ್ದಾರೆ. ಮೊದಲು ಆ ಪಕ್ಷದ ಶಾಸಕ ಯತ್ನಾಳ್ ಮತ್ತು ಈಶ್ವರಪ್ಪನವರ ಪ್ರಶ್ನೆಗೆ ಉತ್ತರಿಸಿಲಿ ಎಂದರು.
ಆಯನೂರು ಕಿಡಿ
ಬಿಜೆಪಿಯ ನೈರುತ್ಯ ಪದವೀಧರ ಕ್ಷೇತ್ರ ಅಭ್ಯರ್ಥಿ ಡಾ.ಸರ್ಜಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಮತದಾರರನ್ನ ಸೆಳೆಯಲು ಮದ್ಯವನ್ನ ಹರಿಸಲಾಗುತ್ತಿದೆ. ಕ್ಷೇತ್ರದ ಅಭ್ಯರ್ಥಿಗೆ ಶಿಕ್ಷಾವಂತ ಮತದಾರರು ಬುದ್ದಿಕಲಿಸಬೇಕು. ಶಿಕ್ಷಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಕೆ ಮಂಜುನಾಥ್ ಹೆಸರಿ ಉಳ್ಳವವರನ್ಬೇ ಮತ್ತೊಬ್ಬ ಕೆಕೆ ಮಂಜುನಾಥ್ ಅವರನ್ನ ಕರೆತಂದು ಸ್ಪರ್ಧಿಸಕಾಗುತ್ತಿದೆ. ಬಿಜೆಪಿ ಕೀಳು ಮಟ್ಟದ ಚುನಾವಣೆ ನಡೆಸುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ-https://suddilive.in/archives/15804