Girl in a jacket

ಯಡಿಯೂರಪ್ಪ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಹಿಂದುತ್ವದ ಅಲೆ ಜೋರಾಗಿ ಬೀಸುತ್ತಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಅಪ್ಪ ಮಕ್ಕಳ ಕೈಯಲ್ಲಿ‌ ಪಕ್ಷವಿದೆ ಎಂದು ಜನಸಾಮಾನ್ಯರು‌ ಮಾತನಾಡುತ್ತಾರೆ. ಸಾಮೂಹಿಕ ನಾಯಕತ್ವಕ್ಕೆ ಮಂಗಳ ಹಾಡಿದ್ದಾರೆ. ಪುತ್ರ ರಾಘವೇಂದ್ರ ಸೋಲುತ್ತಾನೆ ಎಂಬ ಭಯದಿಂದ ಯಡಿಯೂರಪ್ಪ ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ 9 ಬಾರಿ ಎಂಎಲ್ಎ, 4 ಬಾರಿ ಸಿಎಂ 1 ಬಾರಿ ಎಂಪಿ, ಅವರ ಮಗ ರಾಘವೇಂದ್ರ 3 ಬಾರಿ ಎಂಪಿ ಆದರೂ. ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ನಿವಾರಣೆ ಮಾಡಲಿಲ್ಲ. ಭದ್ರಾವತಿಯ ಕಾರ್ಖಾನೆ ಪುನರ್ ಆರಂಭಿಸಿಲ್ಲ. ಹೀಗಾಗಿ ಶಿವಮೊಗ್ಗ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.

ಗೆದ್ದು ಜನರ ಋಣ ತೀರುಸುತ್ತೇನೆ ಎಂದಿರುವ ಮಾಜಿ ಡಿಸಿಎಂ ಮತ ಪಡೆದು ಜನರಿಗೆ ಮೋಸ ಮಾಡುವುದಿಲ್ಲ. ಸುಮ್ಮನೇ ಭರವಸೆ ಕೊಡಲ್ಲ ಗೆದ್ದ ಮೇಲೆ ಪ್ರಧಾನಿ ಮೋದಿ ಅವರ ಕಾಲಿಗೆ ಬಿದ್ದಾದರೂ ಶಿವಮೊಗ್ಗದ ಜನರ ಕೆಲಸ ಮಾಡಿಸುತ್ತೇನೆ ಎಂದರು.

ಅನೇಕ‌ ಹಳ್ಳಿಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿಲ್ಲ. ಟೇಬಲ್ ಹಾಕಲು ಆಗಲ್ಲ ಎಂದವರು ರಾಷ್ಟ್ರ ಭಕ್ತ ಬಳಗದ ಶಕ್ತಿ ಹೋಗಿ ನೋಡಿ ಬರಲಿ ಎಂದು ಶಾಸಕ ಆರಗ ಜ್ಞಾನೇಂದ್ರ ವಿರುದ್ದ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಜಾತಿ ರಾಜಕೀಯ ಮಾಡುತ್ತಿದ್ದಾರೆ. ಮೋದಿ ಅವರ ಮನೆ ಆಸ್ತಿನಾ.
ಸಂಘ ಪರಿವಾರದ ಅನೇಕರು ನನ್ನ ಪರವಾಗಿ ಸಿದ್ದಾಂತಕ್ಕೆ ಬೆಂಬಲ ನೀಡುತ್ತಿದ್ದಾರೆ. ಜನರು ಯಡಿಯೂರಪ್ಪ ನೋಟು ಈಶ್ವರಪ್ಪ ಗೆ ಓಟು ಅಂತಾ ಮತದಾರರು ಹೇಳುತ್ತಾರೆ.

ಯಡಿಯೂರಪ್ಪ ಅವರು ಕಾಂಗ್ರೆಸ್ ನವರೊಂದಿಗೆ ಆಂತರಿಕ ಒಪ್ಪಂದ ಮಾಡಿಕೊಂಡು ಚುನಾವಣೆ ಮಾಡುತ್ತಿದ್ದಾರೆ. ಮುಂದೆ ಬಹಿರಂಗವಾಗಿ ಮೈತ್ರಿ‌ಮಾಡಿಕೊಳ್ಳಬಹುದು ಎಂಬ ಅನುಮಾನವಿದೆ ಎಂದರು.

ಹಾಸನ ಸಂಸದ ಪ್ರಜ್ಬಲ್ ರೇವಣ್ಣ ಪ್ರಕರಣ ಹೊರಬಂದಿರುವ ಹಿನ್ನೆಲೆ ಜೆಡಿಎಸ್ ನೊಂದಿಗೆ ಮೈತ್ರಿ ಮುಕ್ತಾಯವಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ್ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಇವರೆಲ್ಲಾ ಜಾತಿ ರಾಜಕೀಯ ಮಾಡುತ್ತಾರೆ. ಸಿದ್ದಾಂತ ಇವರ ಬಳಿಯಿಲ್ಲ ಎಂದರು.
ಶಿವಮೊಗ್ಗ ಕ್ಷೇತ್ರದಿಂದ 2ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ಶಿಕಾರಿಪುರ ಕ್ಷೇತ್ರದಲ್ಲಿ 25 ಸಾವಿರ ಲೀಡ್ ಸಿಗಲಿದೆ ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಒಂದೇ ಅಲ್ಲ. ಇನ್ನೂ ಬಹಳ ಜನರ ಪ್ರಕರಣಗಳು ಹೊರಗೆ ಬರಹುದು ಎಂದು ಈಶ್ವರಪ್ಪ‌ ಮಾರ್ಮಿಕವಾಗಿ ನುಡಿದರು.

ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ತಿ.ನಾ. ಶ್ರೀನಿವಾಸ್, ವಿಶ್ವಾಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತಿಯಲ್ಲಿದ್ದರು.

ಇದನ್ನೂ ಓದಿ-https://suddilive.in/archives/14292

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು