ವಿದ್ಯುತ್ ಪ್ರವಹಿಸಿ ಎಮ್ಮೆ ಸಾವು

ಸುದ್ದಿಲೈವ್/ಸೊರಬ

ಕುಡಿಯುವ ನೀರಿನ ಸಂಪರ್ಕದ ಮೇನ್ಸ್ ವಯರ್ ತುಳಿದು ವಿದ್ಯುತ್ ಪ್ರವಹಿಸಿ ಎಮ್ಮೆಯೊಂದು ಮೃತಪಟ್ಟ ಘಟನೆ ತಾಲೂಕಿನ ಮಳಲಗದ್ದೆಯಲ್ಲಿ ಮಂಗಳವಾರ ನಡೆದಿದೆ.

ಮಳಲಗದ್ದೆ ಗ್ರಾಮದಲ್ಲಿನ ಕುಡಿಯುವ ನೀರಿನ ಡೂಮುಗೆ ಸಂಪರ್ಕ ಕೊಟ್ಟಿರುವ ವಿದ್ಯುತ್ ವೈಯರ್ ನೆಲದ ಮೇಲೆ ಬಿದ್ದಿದೆ. ಮೇಯಲು ಹೋದ ಎಮ್ಮೆ ವೈಯರ್ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಎಮ್ಮೆ ಸ್ಥಳದಲ್ಲೆ ಮೃತ ಪಟ್ಟಿದೆ.

ಉಳವಿ ಗ್ರಾಪಂ ಅಧ್ಯಕ್ಷರು ಹಾಗೂ ಮಳಲಗದ್ದೆ ಸದಸ್ಯರಿಗೆ ಮತ್ತು ನೀರುಗಂಟಿಗೆ ವೈಯರ್ ಬಿದ್ದಿರುವ ಬಗ್ಗೆ ಹಲವರು ಬಾರಿ ಗಮನಕ್ಕೆ ತಂದರು ಸರಿಪಡಿಸದೆ ನೀರ್ಲಕ್ಷ್ಯ ವಹಿಸಿದ್ದಾರೆ. ಎಮ್ಮೆಯ ಸಾವಿಗೆ ಇವರೆ ಕಾರಣ ಎಂದು ಮೃತ ಎಮ್ಮೆಯ ಮಾಲಿಕ ಮಳಲಗದ್ದೆಯ ಜಗದೀಶ್‍ ಹೊಸಮನಿ ಆರೋಪಿಸಿದ್ದಾರೆ.

ವರದಿ-ದತ್ತ ಸೊರಬ

ಇದನ್ನೂ ಓದಿ-https://suddilive.in/archives/15225

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close