ಸುದ್ದಿಲೈವ್/ಶಿವಮೊಗ್ಗ
ಏಪ್ರಿಲ್ ತಿಂಗಳಲ್ಲಿ ಮಾಜಿ ಪತಿಯ ಎರಡನೇ ಪತ್ನಿಯ ಖಾಸಗಿ ಫೋಟೊಗಳನ್ನ ಸಾಮಾಜಿಕ ಜಾಕತಾಣದಲ್ಲಿ ಹರಿಬಿಟ್ಟು ಅವಮಾನ ಮಾಡಿದ್ದ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಘಟನೆ ನಡೆದು ಎರಡು ತಿಂಗಳ ಒಳಗೆ ಮತ್ತೊಂದು ಪ್ರಕರಣ ದಾಖಲಾಗಿದೆ.
ಆಜಾದ್ ನಗರದಲ್ಲಿ ಶಿಕ್ಷಕ ಸಯ್ಯದ್ ಪರ್ವೇಜ್ ರವರ ಮನೆ ಮುಂದೆ ನಿಲ್ಲಿಸಿದ್ದ ಟಾಟಾ ಇಂಡಿಗೋ ಕಾರನ್ನಜಖಂಗೊಳಿಸಿದ ಪ್ರಕರಣ ಹಾಗೂ ಪತಿಯೊಂದಿಗೆ ವಿಚ್ಛೇದನ ಪಡೆದುಕೊಂಡರೂ ಆಸ್ತಿ ವಿಚಾರದಲ್ಲಿ ಮನಸ್ಥಾಪ ಬೆಳೆಸಿಕೊಂಡಿದ್ದ ಶಿಕ್ಷಕಿ ಪತಿಯ ಎರಡನೇ ಪತ್ನಿಯ ಖಾಸಗಿ ಫೊಟೊಗಳನ್ನವೈರಲ್ ಮಾಡಿದ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಈಗ ಅದೇ ಪ್ರಕರಣ ಮತ್ತೆ ಮುಂದು ವರೆದಿದ್ದು ಶಿಕ್ಷಕಿಯು ಮಾಜಿ ಪತಿಯ ಮೇಲೆ ನ್ಯಾಯಾಯದ ಪಾರ್ಕಿಂಗ್ ಪ್ಲೇಸ್ ನಲ್ಲಿ ಹಲ್ಲೆ ನಡೆಸಿರುವುದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಅಜಾದ್ ನಗರದಲ್ಲಿ ಪತಿಗಾಗಿ ಇಬ್ಬರು ಶಿಕ್ಷಕಿಯರು ಬಡಿದಾಡಿಕೊಂಡಿದ್ದರು. ಮೊದಲನೆ ಪತ್ನಿ ಪತಿಯಿಂದ ವಿಚ್ಚೇಧನ ಪಡೆದರೂ, ಹಾಲಿ ಪತಿ ಮತ್ತು ಪತ್ನಿಯ ಇಬ್ಬರ ಫೋಟೊಗಳನ್ನ ಅಶ್ಲೀಲವಾಗಿ ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿತ್ತು.
ಮತ್ತು ಮನೆಯ ಮುಂದೆ ನಿಲ್ಲಿಸಿರುವ ಕಾರನ್ನ ಜಖಂಗೊಳಿಸಿರುವ ಬಗ್ಗೆ ಮತ್ತು ಕುಟುಂಬಕ್ಕೆ ಜೀವಬೆದರಿಕೆ ಹಾಕಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸರ್ಕಾರಿ ಶಾಲೆಯ 40 ವರ್ಷದ ಶಿಕ್ಷಕಿ ಸೈಯದಾ ಸುರಯಾ ಕೌಸರ್ ಈ ಹಿಂದೆ ಮಹಮ್ಮದ್ ಆಸಿಫ್ ಅವರ ಜೊತೆ ಮದುವೆಯಾಗಿದ್ದರು, ಅವರಿಗೆ ಎರಡು ಗಂಡು ಮಕ್ಕಳಿದ್ದಾರೆ. ಆಸೀಫ್ ನೊಟ್ಟಿಗೆ ವಿಚ್ಚೇದನ ಪಡೆದ ನಂತರ ಶಿಕ್ಷಕಿ ಕೌಸರ್ ಮದುವೆಯಾಗಿದ್ದೇ ಸೈಯದ್ ಪರ್ವಿಜ್ ಎಂಬುವರನ್ನ
ಸೈಯದ್ ಪರ್ವಿಜ್ ಸಹ ಈ ಹಿಂದೆ ಹಸಿನಾ ಪರ್ವೀನ್ ಎಂಬುವರನ್ನ ಮದುವೆಯಾಗಿದ್ದು ನಂತರ ವಿಚ್ಛೇಧನ ಪಡೆದಿದ್ದಾರೆ. ಇವರಿಗೂ ಎರಡು ಮಕ್ಕಳು ಇದ್ದಾರೆ. ಸಯ್ಯದ್ ಪರ್ವೆಜ್ ಅವರು ಹಸಿನ ಪರ್ವೀನ್ ಅವರಿಂದ ದಿ:09-02-2024 ರಂದು ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದಾರೆ.
ಮೊನ್ನೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಆಫೀಲ್ ಪ್ರಕರಣಕ್ಕೆ ಹಾಜರಾಗಿದ್ದ ಸಯ್ಯದ್ ಪರ್ವೇಜ್ ತಕಾರು ಅರ್ಜಿ ಸಲ್ಲಿಸಲು ಬಂದಿದ್ದರು. ಅದೇ ವೇಳೆ ಹಸೀನ ಪರ್ವೀನ್ ನ್ಯಾಯಾಲಯದ ಪಾರ್ಕಿಂಗ್ ಬಳಿ ಸಯ್ಯದ್ ಪರ್ವೇಜ್ ವಾಹನ ತೆಗೆಯುವಾಗ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಈ ರೀತಿ ಪದೇ ಪದೇ ಮಾಜಿ ಪತ್ನಿಯಿಂದ ಪರ್ವೇಜ್ ರೋಸತ್ತಿದ್ದಾರೆ.
ಜೀವಬೆದರಿಕೆ ಮತ್ತು ಹಲ್ಲೆ ಮಾಡಿದ್ದರಿಂದ ಪರ್ವೇಜ್ ಮೆಗ್ಗಾನ್ ಗೆ ದಾಖಲಾಗಿದ್ದರು. ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/15858