Girl in a jacket

ಯಾಸಿನ್ ಖುರೇಶಿ ಸತ್ತಿಲ್ಲ-ಎಸ್ಪಿ ಸ್ಟಷ್ಟನೆ

ಸುದ್ದಿಲೈವ್/ಶಿವಮೊಗ್ಗ

ನಗರದ ಲಷ್ಕರ್ ಮೌಲಾದಲ್ಲಿ ನಿನ್ನೆ ನಡೆದ ಗ್ಯಾಂಗ್ ವಾರ್ ನಲ್ಲಿ ಜನತಾ ಮಟನ್ ಸ್ಟಾಲ್ ನ ಮಾಲೀಕ ರೌಡಿಶೀಟರ್ ಯಾಸಿನ್ ಖುರೇಶಿ ಮೇಲೆ ಭೀಕರವಾಗಿ ಹಲ್ಲೆ ಆಗಿತ್ತು. ನಂತರ ನಡೆದ ಘಟನೆಯಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದರು. ಆದರೆ ಯಾಸಿನ್ ಸತ್ತಿದ್ದಾನೆ ಎಂದು ಕೆಲವೊಂದು ಕಡೆ ಪ್ರಚಾರವಾಗಿದೆ. ಆದರೆ ಎಸ್ಪಿ ಮಿಥುನ್ ಕುಮಾರ್  ಯಾಸಿನ್ ಖುರೇಶಿ ಸತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

15 ಜನರಿಂದ 20 ಜನರ ತಂಡ ಯಾಸಿನ್ ಮೇಲೆ ಬಂದು ಅಟ್ಯಾಕ್ ಮಾಡಿತ್ತು ಈ ಅಟ್ಯಾಕ್ ನಲ್ಲಿ ಯಾಸಿನ್ ಬದುಕುಳಿದಿದ್ದ ಆದರೆ ಆತನ ಸ್ಥಿತಿ ಚಿಂತಾ ಜನಕವಾಗಿತ್ತು ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು.

ಇನ್ನೊಂದೆಡೆ ಆತನ ಕಡೆಯ ಗುಂಪು ಆತನನ್ನು ಹೊಡೆಯಲು ಬಂದವರ ಮೇಲೆ ಅಟ್ಯಾಕ್ ಮಾಡಿ ಇಬ್ಬರನ್ನು ಮಾರಕಾಸ್ತ್ರಗಳಿಂದ ತಳಿಸಿ ಅವರ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದರು.

ಸ್ಥಳದಲ್ಲೇ ಇಬ್ಬರು ಮರಣ ಹೊಂದಿದ್ದರು.

ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿಶೀಟರ್ ಯಾಸಿನ್ ಖುರೇಶಿ ಸ್ಥಿತಿ ಚಿಂತಾ ಜನಕವಾಗಿದ್ದು ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.

ಇತ್ತ ಕಡೆ ಶಿವಮೊಗ್ಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಆತ ಸತ್ತಿಲ್ಲ ಆತ ಬದುಕಿದ್ದಾನೆ ಕೆಲವು ಮಾಧ್ಯಮಗಳಲ್ಲಿ ಆತ ಸತ್ತಿದ್ದಾನೆ ಎಂದು ಸುದ್ದಿ ಬಿತ್ತರವಾಗುತ್ತಿದೆ ಆತ ಇನ್ನೂ ಸತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/14504

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು