ಬುಡಕ್ಕೆ ನೀರು ಹರಿದಿದೆ, ಸಿಡಿದೇಳುತ್ತಾರೋ, ಮೂರು ದಿನಕ್ಕೆ ಮಲಗುತ್ತಾರೋ?

ಸುದ್ದಿಲೈವ್/ಶಿವಮೊಗ್ಗ

ಪ್ರತೀ ವರ್ಷ ಅಥವಾ ಇತ್ತೀಚೆಗೆ ಎರಡು ವರ್ಷಗಳಿಗೊಮ್ಮೆ ಪೂರ್ವ ಮುಂಗಾರು ಮಳೆಯ ಆರ್ಭಟಕ್ಕೆ ಶಿವಮೊಗ್ಗ ನಗರ ತಗ್ಗು ಪ್ರದೇಶಗಳು ಜಲಾವೃತವಾಗುತ್ತವೆ. ಇದೇ ಪರಿಸ್ಥಿತಿ ಮುಂಗಾರು ಮಳೆಯಲ್ಲೂ ಮುಂದುವರಿಯುತ್ತೆ.

ಮುಂಗಾರು ಕ್ಷೀಣಿಸಿದರೆ ಮಧ್ಯ ಕಾಲ ಅಂದ್ರೆ ಆಗಸ್ಟ್-ಸೆಪ್ಟೆಂಬರ್ ಮಳೆಗೆ ಶಿವಮೊಗ್ಗ ನಗರ ನಲುಗುತ್ತೆ. ಪ್ರತೀ ವರ್ಷ ಮಳೆ ಹಾನಿಯಾದಾಗಲೂ ನಗರಕ್ಕೆ ಸೂಕ್ತ ವ್ಯವಸ್ಥೆ ಸಾಧ್ಯವಾಗಿಲ್ಲ. ಮುಂದಾಲೋಚನಾ ಕ್ರಮಗಳು ಸಿದ್ಧವಾಗಿಲ್ಲ. ಶಿವಮೊಗ್ಗ ಆಯುಕ್ತರು ವರದಿಗಳನ್ನ ತರಿಸಿಕೊಂಡು ಮರು ವರ್ಷಕ್ಕೆ ಸಿದ್ಧವಾಗೋದಿಲ್ಲ.

ಪ್ರತೀ ವರ್ಷ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಾಂಕ್ರೀಟೀಕರಣ ಮುಂದುವರಿಯುತ್ತಲೇ ಇರುತ್ತದೆ. ಏರಿಯಲ್ ವ್ಯೂ ಅಭಿವೃದ್ಧಿ ತುಂಗಾ ನದಿ ದಡಕ್ಕೆ ಕಾಂಕ್ರೀಟ್ ಎರಕ ಹೊಯ್ದಿದೆ ಆದರೆ ಕೊಳಚೆ ನೀರು ತುಂಗಾ ಸೇರುವಂತೆ ಮಳೆ ನೀರು ಸರಾಗವಾಗಿ ಸೇರೋದಿಲ್ಲ. ಭೌಗೋಳಿಕವಾಗಿಯೂ ಕೂಡ ಶಿವಮೊಗ್ಗ ಏರು-ಕುಸಿ ನೆಲವಾಗಿರೋದ್ರಿಂದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನ ಪ್ರತೀ ವರ್ಷ ಈ ಸಮಸ್ಯೆ ಅನುಭವಿಸುತ್ತಲೇ ಇರುತ್ತಾರೆ. ನೂರಾರು ಕೋಟಿ ಸ್ಮಾರ್ಟ್ ಸಿಟಿ ಫಂಡ್ ಏನಾಯ್ತು.? ಜನ ತೆರಿಗೆ ಕೊಟ್ಟ ಹಣ ದಸರಾ ಉತ್ಸವ ಆಗೋಯ್ತಾ.?

ರಾಜಕಾರಣಕ್ಕೆ‌ ಬಂದರೆ ಶಿವಮೊಗ್ಗ ಹೊಂದಾಣಿಕೆಗೆ ಕುಖ್ಯಾತಿ‌‌. ಬಹುಕಾಲ ಬಿಜೆಪಿ ಪ್ರಭುತ್ವದಲ್ಲೇ ಇದ್ದ ನಗರ, ಶಾಸಕ, ಸಂಸದರ ಅಭಿವೃದ್ಧಿಗೆ ಧ್ಯೋತಕ. ಕಾಂಗ್ರೆಸ್ ಬಂತು ಇಲ್ಲಿರೋ ಅಧಿಕಾರಿಗಳೇ ಬದಲಾಗಲಿಲ್ಲ. ಸ್ಮಾರ್ಟ್ ಸಿಟಿ ತನಿಖೆ ಮಾಡಿಸ್ತೀನಿ ಎಂದು ಗೆದ್ದ ಉತ್ಸಾಹದಲ್ಲಿದ್ದ ಜಿಲ್ಲಾ ಮಂತ್ರಿ ಮಧು ಬಂಗಾರಪ್ಪ ಇನ್ನೂ ಚುನಾವಣಾ ನೀತಿ ಸಂಹಿತೆಯಾಚೆ ಇದ್ದಾರೆ.

ಒಟ್ಟಲ್ಲಿ ಸಂಸತ್ ಚುನಾವಣೆಗೆ ವೋಟ್ ಹಾಕಿ ಬಂದು ಕೂತಿದ್ದ ಜನರ ಬುಡಕ್ಕೆ ನೀರು ಹರಿದಿದೆ. ಸಿಡಿದೇಳದ ಹೊರತು ಶಾಶ್ವತ ಪರಿಹಾರವಿಲ್ಲ. ಅಭಿವೃದ್ಧಿ ಪರಿಸರ ವಿರುದ್ಧವಾಗಿದ್ದರೆ ತಗೆದುಕೊಂಡು ಏನು ಮಾಡಬೇಕು?

ಇದನ್ನೂ ಓದಿ-https://suddilive.in/archives/15154

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close