ಸುದ್ದಿಲೈವ್/ಶಿವಮೊಗ್ಗ
ಹೊಸಮನೆ ಬಡಾವಣೆಯ ಪ್ರಸಿದ್ಧ ದೊಡ್ಡಮ್ಮ ಜಲ ದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಹಾಗೂ ಕೆಂಡಾ ರ್ಚನೆ ಮಹೋತ್ಸವ ಇಂದು ಅತ್ಯಂತ ಸಡಗರ ಸಂಭ್ರಮದಿAದ ನಡೆಯಿತು.
ದೊಡ್ಡಮ್ಮ ಜಲದುರ್ಗಮ್ಮ ಗಂಗಮ್ಮ ದೇವರ ಉತ್ಸವವನ್ನು ಅದ್ದೂರಿಯಾಗಿ ಮಂಟಪ ದಿಂದ ಹೊಸಮನೆ ಬಡಾ ವಣೆಯ ದೊಡ್ಡಮ್ಮ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕರೆತರಲಾ ಯಿತು.
ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸಿ ದ್ದವು. ಮಹಿಳೆಯರು ಅತ್ಯಂತ ಸಂಭ್ರಮದಿAದ ಮೆರವಣಿ ಗೆಯಲ್ಲಿ ಭಾಗವಹಿಸಿದ್ದರು.
ನಗರದ ಹೊಸಮನೆ ಬಡಾ ವಣೆಯಲ್ಲಿನ ಸುಮಾರು 150 ವರ್ಷಗಳ ಇತಿಹಾಸವಿರುವ ದೇವಸ್ಥಾನ 24 ಮನೆ ಸಾಧುಶೆಟ್ಟಿ ಜನಾಂದವರ ಕುಲದೇವತೆ ಯಾದ ಜಲದುರ್ಗಮ್ಮ ದೇವಿಯ ಜಾತ್ರಾ ಮಹೋ ತ್ಸವದ ಅಂಗವಾಗಿ ವಿಶೇಷ ನಿಯಮಗಳೊಡನೆ ಇಂದು ಕೆಂಡಾದರ್ಚನೆ ನಡೆಯಿತು.
ಶ್ರೀದೊಡ್ಡಮ್ಮ ಜಲದುರ್ಗಮ್ಮ ದೇವಿಯ ಕೆಂಡಾದರ್ಚನೆ ಮಹೋತ್ಸವಕ್ಕೆ ಕಲತ್ ಗಿರಿಯಿಂದ ಪಾದಯಾತ್ರೆಯ ಮೂಲಕ ಜಲದುರ್ಗಮ್ಮ ಮತ್ತು ಗಂಗೆಯನ್ನು ಕುಲಬಾಂಧವರ ಸಹಕಾರ ಮತ್ತು ಭಕ್ತಿಯಿಂದ ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ತರಲಾಯಿತು.
ಜಾತ್ರೆಯ ಅಂಗವಾಗಿ ದೇವಸ್ಥಾನದಲ್ಲಿ ಚಂಡಿಕಾ ಯಾಗ, ಮಹಾಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆ ಯಿತು. ಎಲ್ಲರ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಕೆಂಡದಾರ್ಚನೆ ಮಹೋತ್ಸವ ದಲ್ಲಿ ರಾಜ್ಯದ ನಾನಾ ಕಡೆ ಯಿಂದ ಬಂದ ಭಕ್ತರು ಭಾಗವಹಿಸಿದ್ದರು.
ಇದನ್ನೂ ಓದಿ-https://suddilive.in/archives/15309