ತಂಬಾಕು ಮಾರಾಟದ ಅಂಗಡಿಗೆ ಧಿಡೀರ್ ಶಾಸಕರ ದಿಡೀರ್ ಭೇಟಿ, ಪರಿಶೀಲನೆ

ಸುದ್ದಿಲೈವ್/ಸಾಗರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ಗುಟ್ಕ, ಪಾನ್, ಸಿಗರೇಟ್ ಮಾರುತ್ತಿದ್ದ ಅಂಗಡಿಗೆ ಧಿಡೀರ್ ಭೇಟಿಕೊಟ್ಟ ಶಾಸಕ ಗೋಪಾಲ ಕೃಷ್ಣ ಬೇಳೂರು ಭೇಟಿ ನೀಡಿ ತಂಬಾಕು ಮಾರಾಟದ ವಿರುದ್ಧ ಸಮರ ಸಾರಿದ್ದಾರೆ.

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾಗಿರುವ ಗೋಪಾಲಕೃಷ್ಣ ಬೇಳೂರು ರವರು ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮುಂಭಾಗದಲ್ಲಿ ಗುಟ್ಕ, ಪಾನ್, ಸಿಗರೇಟ್ ಮಾರುತ್ತಿದ್ದ ಅಂಗಡಿಗೆ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಅಂಗಡಿ ಕಾಲೇಜಿಗೆ 100 ಮೀಟರ್ ಒಳಗೆ ಇರುವುದರಿಂದ ತಂಬಾಕು ಮಾರಾಟಕ್ಕೆ ಅವಕಾಶವಿಲ್ಲ. ಹಾಗಾಗಿ ಹಾಲಿ ಅಂಗಡಿ ಮಾರಾಟಗಾರನಿಗೆ ತೆರವುಗೊಳಿಸಲು ತಾಕೀತು ಮಾಡಿದ್ದಾರೆ.

ಶಾಲಾ-ಕಾಲೇಜು ಸಮೀಪಗಳಲ್ಲಿ ಗುಟ್ಕ, ಪಾನ್ , ಸಿಗರೇಟ್ ಮಾರುವುದು ಅಪರಾದ ಇವೆಲ್ಲವೂ ಮಕ್ಕಳ ಶೈಕ್ಷಣಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವುದು ಇವೆಲ್ಲವೂ ಸಮಾಜಕ್ಕೆ ಮಾರಕ ಎಂಬ ಕಾರಣಕ್ಕೆ ಶಾಸಕರ ಭೇಟಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ-https://suddilive.in/archives/14996

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close