ಲಾಟರಿ ಸುರೇಶ್ ಗೆ ಜಾಮೀನು-ಆತನ ಮೇಲಿನ ಆರೋಪಗಳೇನು?

ಸುದ್ದಿಲೈವ್/ಶಿವಮೊಗ್ಗ

ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಸುರೇಶ್ ಯಾನೆ ಲಾಟರಿ ಸೂರಿಗೆ ಜಾಮೀನು ದೊರೆತಿದೆ. ಅಕ್ರಮ ಬಡ್ಡಿ ವ್ಯವಹಾರದ ಆರೋಪವೆತ್ತಿರುವ ಲಾಟರಿ ಸೂರೇಶ್ ಮನೆಯ ತಪಾಸಣೆಗೆ ಬಂದಿದ್ದ ಸಹಕಾರಿ ಸಂಘಗಳ ಅಧಿಕಾರಿ ಮೇಲೆ ಸೂರೇಶ್ ಹಲ್ಲೆ ನಡೆಸಿದ್ದ ಆರೋಪದ ಮೇರೆಗೆ ಬಂಧನವಾಗಿತ್ತು.

ನಿನ್ನೆ ಸಿದ್ದರೂಢ ನಗರದಲ್ಲಿ ಲಾಟರಿ ಸುರೇಶ್ ಮನೆಯಿದೆ. ಮನೆಯ ಆವರಣದಲ್ಲಿ ಕಚೇರಿಯಿದೆ. ನಿನ್ನೆ ಸಾಗರದ ಸಹಕಾರ ಸಂಘಗಳ ಸಹಾಯಕ ಅಧಿಕಾರಿ ಸಿ ಗೋಪಾಲ್ ಅವರು ತಮ್ಮ ಸಿಬ್ಬಂದಿ ಹಾಗೂ ಪೊಲೀಸ್ ರವರೊಂದಿಗೆ ಲಾಟರಿ ಸೂರಿಯ ಮನೆಯ ಮೇಲೆ ಅಕ್ರಮ‌ಬಡ್ಡಿ ವ್ಯವಹಾರದ ಆರೋಪದ ಮೇರೆಗೆ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಮನೆಯ ಹೊರಭಾಗದಲ್ಲಿ ಲಾಟರಿ ಸುರೇಶ್ ನಿಂತಿದ್ದಾಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಲೇವಾದೇವಿ/ಗಿರವಿ ವ್ಯವಹಾರ ಮಾಡುತ್ತಿರುವವರ ದಾಳಿ ನಡೆಸುವಂತೆ ಆದೇಶ ಪತ್ರ ಬಂದಿದೆ. ಅದರಂತೆ ದಾಳಿ ನಡೆಸಲು ಬಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ದಾಖಲೆಗಳನ್ನ ಪರಿಶೀಲಿಸುತ್ತೇವೆ ಎಂದು ಕೇಳಿಕೊಂಡಿದ್ದಾರೆ.

ದಾಖಲೆ ಪರಿಶೀಲನೆಗೆ ಮುಂದಾದ ಅಧಿಕಾರಿಗಳಿಗೆ ಲಾಟರಿ ಸೂರಿ ನೀವು ಏನು ದಾಖಲೆ ಪರಿಶೀಲಿಸುವುದು, ನಿಮ್ಮ ಬಳಿ ವಾರೆಂಟ್ ಇದೆಯಾ ಎಂದು ವಾದಕ್ಕೀಳಿದಿದ್ದಾನೆ. ಏಕಾಏಕಿ ಸುರೇಶ್ ಅಧಿಕಾರಿಯ ಎಡಕೆನ್ನೆಗೆ ಹೊಡೆದಿದ್ದಾನೆ. ಈ ವೇಳೆ ಓಲ್ಡ್ ಟೌನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇರೆಗೆ ದೂರು ದಾಖಲಾಗಿತ್ತು.

ನಿನ್ನೆ ನ್ಯಾಯಾಲಯದಲ್ಲಿ ಆತನ ಮೆಡಿಕಲ್ ವರದಿಯ ಮೇಲೆ ಜಾಮೀನು ಮಂಜೂರು ಆಗಿದೆ ಎಂದು ತಿಳಿದು ಬಂದಿದೆ. ಲೇವಾದೇವಿಯ ಹಾವಳಿಯ ಬಗ್ಗೆ ಶಿವಮೊಗ್ಗ ಪೊಲೀಸ್ ಅಧೀಕ್ಷಕರಿಗೆ ದೂರುಗಳು ಹೆಚ್ಚಾಗಿ ಬಂದಿರುವ ಮೇರೆಗೆ ದಾಳಿ ನಡೆಯುತ್ತಿವೆ. ಲೇವಾದೇವಿಯ ಸಂಬಂಧ ಮಹಿಳೆಯೋರ್ವರು ಆತ್ಮಹತ್ಯೆಯ ಪ್ರಕರಣವೂ ನಡೆದಿತ್ತು. ಇದರಿಂದಾಗಿ ಲಾಟರಿ ಸೂರಿಯ ಮನೆಯ ಮೇಲೆ ನಡೆದ ದಾಳಿ ಮಹತ್ವದಾಗಿದೆ.

ಲೇವಾದೇವಿಗಳ ಅಥವ ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಸಾರ್ವಜನಿಕರ ಬಳಿ ದೂರುಗಳಿದ್ದರೆ ಹತ್ತಿರದ ಪೊಲೀಸ್ ಠಾಣೆ ಅಥವಾ 112 ಸಂಪರ್ಕಿಸಲು ಕೋರಲಾಗಿದೆ.

ಇದನ್ನೂ ಓದಿ-https://suddilive.in/archives/14981

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close