ಸುದ್ದಿಲೈವ್/ಶಿವಮೊಗ್ಗ
ಕ್ರಿಕೆಟ್ ಪ್ರೇಮಿಗಳಿಗೆ ಇಂದು ಮತ್ತೊಂದು ರಸದೌತಣದ ಪಂದ್ಯಾವಳಿ ನಡೆಯಲಿದೆ. ಮೊನ್ನೆ ಚೆನ್ನೈ ಸೂಪರ್ ಕಿಂಗ್ ವಿರುದ್ಧ ಆರ್ ಸಿಬಿ ತಂಡ ರೋಚಕ ಜಯ ಸಾಧಿಸುತ್ತಿದ್ದಂತೆ ಆರ್ ಸಿಬಿಯ ಫ್ಯಾನ್ ಗಳು ಮತ್ತೆ ಕಪ್ ಗೆಲ್ಲುವ ಕನಸು ಶುರು ಹಚ್ಚಿಕೊಂಡಿದ್ದಾರೆ.
ಈ ಬಾರಿ ಕಪ್ ನಮ್ದೆ ಎನ್ನುತ್ತಿರುವ ಆರ್ ಸಿ ಬಿ ತಂಡಕ್ಕೆ ಎಲಿಮನೇಟರ್-1 ಎಂಬ ಪಂದ್ಯಾವಳಿ ನಡೆಯಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಮನಮೋಹಕ ಪಂದ್ಯ ನಡೆಯಲಿದೆ.
ಈಗಾಗಲೇ ನಿನ್ನೆ ಸನ್ ರೈಸಸ್ ಹೈದರಾಬಾದ್ ಮತ್ತು ಕಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಪಂದ್ಯಾವಳಿಯಲ್ಲಿ ಕೆಕೆಆರ್ ಗೆದ್ದು ಫನಲ್ ತಲುಪಿದೆ. ಇಂದು ಯಾರು ಎಲಿಮನೇಟರ್ ಪಂದ್ಯದಲ್ಲಿ ಗೆಲ್ತಾರೋ ಅವರ ವಿರುದ್ಧ ಎಸ್ ಆರ್ ಹೆಚ್ ಸೆಣಸಲಿದೆ. ಅಲ್ಲಿ ಗೆದ್ದವರು ಕೆಕೆಆರ್ ವಿರುದ್ಧ ಆಡಲಿದ್ದಾರೆ.
ಅದರಂತೆ ಶಿವಮೊಗ್ಗದಲ್ಲಿ ಆರ್ ಸಿಬಿ ಗೆದ್ದು ಬರಲಿ ಎಂದು ಫ್ಯಾನ್ಸ್ ಶುಭಹಾರೈಸಿದ್ದಾರೆ. ಆರ್ ಸಿಬಿಯ ಹೊಸ ಅಧ್ಯಾಯ, ಈ ಬಾರಿ ಕಪ್ ನಮ್ದೆ ಎಂದು ಹಾರೈಸುತ್ತಿದ್ದಾರೆ. ಶಿವಮೊಗ್ಗ ಕಿಕೆಟ್ ಅಕಾಡಮಿಯವ ವಿದ್ಯಾರ್ಥಿಗಳು ಮಾತ್ರ ಗೆದ್ದು ಬಾ ಆರ್ ಸಿ ಬಿ ಎಂದು ಶುಭಹಾರೈಸಿದ್ದಾರೆ. ಶಿವಮೊಗ್ಗದಲ್ಲಿ ಆರ್ ಸಿ ಬಿ ತಂಡಕ್ಕೆ ಯುವ ಸಮೂಹ ಗೆಲುವಿನ ಕಿಕ್ಕೇರಿಸಿದೆ.
ಅದರಂತೆ ಕಮಲ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು ಶಿವಮೊಗ್ಗದ
ವಿದ್ಯಾರ್ಥಿನಿಯರು ಆರ್‌ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ. ಕಪ್ಪು ಗೆಲ್ಲಲಿ ಎಂದು ಹಾರೈಸಿದರು… ವಿರಾಟ್ ಕೊಹ್ಲಿ, ಮಹಮ್ಮದ್ ಸಿರಾಜ್ ಗೆ ಜೈಕಾರ ಹಾಕಿದ್ದಾರೆ. ಇದು ಆರ್‌ಸಿಬಿಯಾ ಹೊಸ ಅಧ್ಯಾಯ ಎಂದು ಘೋಷಣೆ ಕೂಗಿದ್ದಾರೆ.
ವಿದ್ಯಾರ್ಥಿನಿ ಸಿಂಚನ ತನ್ನ ಕೈಯ ಮೇಲೆ ವಿರಾಟ್ ಕೊಹ್ಲಿಯ ಜರ್ಸಿ ನಂಬರ್ 18 ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ಇದನ್ನೂ ಓದಿ-https://suddilive.in/archives/15284