Girl in a jacket

ಮತ್ತೊಮ್ಮೆ ಮೈಕೊಡವಿಕೊಂಡು ಮೇಲೆದ್ದ ಇಲಾಖೆ ಅಧಿಕಾರಿಗಳು-ಕುತೂಹಲಕ್ಕೆ ಕಾರಣವಾದ ದಾಳಿಗಳು

ಸುದ್ದಿಲೈವ್/ಶಿವಮೊಗ್ಗ

ಅಕ್ರಮ ಮರಳುಗಾರಿಕೆ ವಿರುದ್ಧ ಕೊನೆಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕೊನಗೂ ಎಚ್ಚೆತ್ತುಕೊಂಡಿದ್ದಾರೆ.

ನಿನ್ನೆ ಸಂಜೆ ಪಿಳ್ಳಂಗೆರೆ, ರಿಪ್ಪನ್ ಪೇಟೆ, ಹೊಳೆಹೊನ್ನೂರು, ಬೇಡರ ಹೊಸಳ್ಳಿ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಬಳಸುತ್ತಿದ್ದ ಲಾರಿ, ಟ್ರ್ಯಾಕ್ಟರ್ ಮತ್ತು ಜೆಸಿಬಿಗಳನ್ನ ವಶಪಡಿಸಿಕೊಂಡು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವರ್ಷ ಅಕ್ರಮ‌ಮರಳು ಗಾರಿಕೆ ವಿರುದ್ಧ ಶಿವಮೊಗ್ಗ ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ಇದು ಎರಡನೇ ಪ್ರಕರಣವಾಗಿದೆ. ಇಲಾಖೆಗೆ ಅನೇಕ ದೂರುಗಳು ಬಂದರೂ ಸಹ ಮೈಕೊಡವಿಕೊಂಡು ಏಳದವರು ದಿಡೀರ್ ಎಂದು ಏಕಕಾಲಕ್ಕೆ ಕ್ರಮಕ್ಕೆ ಮಂದಾಗಿರುವುದು ಕುತೂಹಲ ಮೂಡಿಸಿದೆ.

ಹೊಳೆಹೊನ್ನೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ದೂರು ದಾಖಲಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ ಸಂಚಲನ ಮೂಡಿಸಿರುವ ಕಾರ್ಯಾಚಾರಣೆ ನಡೆಸಿದ್ದಾರೆ. ಸಂಚಲನ ಮೂಡಿಸುವ ಕಾರ್ಯಾಚರಣೆಯ ನಡುವೆಯೂ ಸಾರ್ವಜನಿಕರು ಹಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿನ ಇಲಾಖೆ ಏನು ಮಾಡುತ್ತಿತ್ತು? ಉಳಿದ ಕಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿಲ್ಲವಾ?ಉಳಿದ ಭಾಗಗಳಲ್ಲಿ ದಾಳಿ ನಡೆಸಲು ಇನ್ನಷ್ಟು ದಿನ ಬೇಕು? ವರ್ಷದಲ್ಲಿ ಇಲಾಖೆ ಪ್ರಕರಣ ದಾಖಲಿಸುವ ಕೋಟಗಳು ಎಷ್ಟು?  ಹೀಗೆ ಸಾಲು ಸಾಲಿನ ಪ್ರಶ್ನೆಗಳಿಗೆ ಇಲಾಖೆ ಉತ್ತರ ಕೊಡುತ್ತಾ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/15934

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live