ಶಿವಮೊಗ್ಗ ಪೊಲೀಸರಿಗೆ ಮಾಜಿ ಡಿಸಿಎಂ ಹಿತವಚನವೇನು?

ಸುದ್ದಿಲೈವ್/ಶಿವಮೊಗ್ಗ

ಮಂಗಳೂರಿನಲ್ಲಿ ರಸ್ತೆ ನಡುವೆ ನಮಾಜ್ ಪ್ರಕರಣ, ಲವ್ ಜಿಹಾದ್ ಕುರಿತು ಮಾಜಿ ಡಿಸಿಎಂ ಈಶ್ವರಪ್ಪ ಸರ್ಕಾರಕ್ಕೆ ತರಾಟೆ ತೆಗೆದುಕೊಂಡರೆ, ಶಿವಮೊಗ್ಗದಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ವಿರುದ್ಧ ಮಾಜಿ ಡಿಸಿಎಂ ಈಶ್ವರಪ್ಪ‌ ಪೊಲೀಸರಿಗೆ ಟಿಪ್ಸ್ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ನಮಾಜ್ ಪ್ರಕರಣದಲ್ಲಿ ಪೊಲೀಸರು ಪ್ರಮಾಣಿಕತನ ಮೆರೆದರೂ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿರುವುದು ಸರ್ಕಾರದ ತುಷ್ಠೀಕರಣದ ನೀತಿಯ ಮುಂದುವರಿಕೆಯಾಗಿದೆ ಎಂದರು.

ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಮಾಜ್ ಮಾಡಲಾಗಿದೆ. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದರು. ಆದರೆ ಇನ್ ಸ್ಪೆಕ್ಟರ್ ನ್ನ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಇದು ಮುಸ್ಲೀಂ ಸರ್ಕಾರ ಎಂದು ಘೋಷಿಸಿದರು. ಈ ರೀತಿ ನಡೆದುಕೊಂಡರೆ ಕಾನೂನು ಸುವ್ಯವಸ್ಥೆ ಉಳಿಯತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚನ್ನಗಿರಿ ವಿಷಯದಲ್ಲೂ ಸರ್ಕಾರ ಎಡವಿದೆ ಎಂದು ಹೇಳಿದರು.

ಲವ್ ಜಿಹಾದ್ ಗೆ ಶುವಮೊಗ್ಗದಲ್ಲೂ ಹೆಲ್ಪ್ ಲೈನ್

ಇದರ ವಿರುದ್ಧ ಹೋರಾಟ ನಡೆಸಿದರೆ ಸಿದ್ದರಾಮಯ್ಯರಿಗೆ ಹಿಂದೂ ಸಂಘಟನೆ ವಿರುದ್ಧ ಮಾತನಾಡುತ್ತಾರೆ. ಪ್ರಮೋದ್ ಮುತಾಲಿಕ್ ಲವ್ ಜಿಹಾದ್ ವಿರುದ್ಧ ಹೆಲ್ಪ್ ಲೈನ್ ಆರಂಭಿಸಿದ್ದಾರೆ. ಇದನ್ನ ಸ್ವಾಗತಿಸುವೆ. ನನ್ನ ಅವಶ್ಯಕತೆ ಅವರಿಗಿದ್ದರೆ ಈ ವಿಷಯದಲ್ಲಿ ಸಹಾಯ ಮಾಡುವೆ. ಶಿವಮೊಗ್ಗದಲ್ಲೂ ಈ ಹೆಲ್ಪ್ ಲೈನ್ ಆರಂಭಿಸುವ ಕುರಿತು ಚಿಂತಿಸುವುದಾಗಿ ಘೋಷಿಸಿದರು.‌ ಆದರೆ ಮಂಗಳೂರಿನಲ್ಲಿ ರಸ್ತೆ ಮಧ್ಯೆ ನಮಾಜ್ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲಾಗಿದೆ ಎಂದು ಮಾಧ್ಯಮ ಪ್ರಕಟಿಸಿದೆ. ಸರ್ಕಾರದ ನಡೆ ಇದರಲ್ಲಿ ಸರಿಯಿಲ್ಲವೆಂದರು.

ಗಾಂಜಾ‌, ಗೋವಿನ ವಿಚಾರದಲ್ಲಿ ಪೊಲೀಸರು ಪ್ರಮಾಣಿಕರಾಗಿ ನಡೆದುಕೊಳ್ಳಲಿ

ಮುಸ್ಲೀಂರ ಮತ ಎಷ್ಟು ಬೇಕಾದರೂ ತೆಗೆದುಕೊಳ್ಳಲಿ ಆದರೆ ಈ ರೀತಿಯ ನಡೆ ಸರಿಯಲ್ಲ. ಶಿವಮೊಗ್ಗದ ಹೊಸಮನೆಯಲ್ಲಿ ನಡೆದ ಘಟಬೆಯ ಬಗ್ಗೆ ನಾತನಾಡಿದ ಈಶ್ವರಪ್ಪ ಪ್ರಕರಣ ಗಾಂಜಾ ನಶೆಯಲ್ಲಿ ನಡೆದಿರುವ ಬಗ್ಗೆ ಅನುಮಾನವಿದೆ. ಪೊಲೀಸ್ ಇಲಾಖೆಗೂ ಗಾಂಜಾ ಅಫೀಮು ಮಾರುವ ವ್ಯಕ್ತಿಗಳ ನಡುವೆ ಎಲ್ಲಿಯ ವರೆಗೆ ಸಂಬಂಧವಿರುತ್ತದೆಯೋ ಇದು ಬಗೆಹರೆಯಲ್ಲ. ಎಸ್ಪಿ ಸಂಬಂಧವಿಲ್ಲ ಎಂದು ಘೋಷಿಸಲಿ ನೋಡೋಣ ಎಂದು ಸವಾಲು ಹಾಕಿದರು.

ಪೊಲೀಸರು ಎಲ್ಲಿಯವರೆಗೂ ಗಾಂಜಾ, ಮಟ್ಕಾ ಹಣ ಒಸಿ ಹಣ ಮುಟ್ಟದಿಲ್ಲವೋ ಅಲ್ಲಿಯ ವರೆಗೆ ಉದ್ದಾರವಾಗೊಲ್ಲ. ಶಾಲಾಕಾಲೇಜಿನಲ್ಲಿ ಗಾಂಜಾ ಅಫೀಮು ಎಷ್ಟು ಓಡಾಡುತ್ತದೆ ಗೊತ್ತಿಲ್ಲವಾ‌ ಪೊಲೀಸರಿಗೆ? ಎಲ್ಲಿ ತಿನ್ನಬೇಕೋ ಅಲ್ಲಿ ತಿನ್ನಲಿ, ಈ ವಿಷಯದಲ್ಲಿ ಮಾಡಬಾರದು. ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಆತ ನಷೆಯಲ್ಲಿ ಹಲ್ಲೆ ಮಾಡಲು ಮತ್ತೆ ಆತನ ವಿರೋಧಿಯನ್ನ ಹುಡುಕಿಕೊಂಡು ಹೋಗುತ್ತಾನೆ.

ಹಾಗಾಗಿ ಪೊಲೀಸರು ಗೋವಿನ ವಿಚಾರದಲ್ಲಿ, ಗಾಂಜಾ ವಿಚಾರದಲ್ಲಿ ಪ್ರನಾಣಿಕರಾಗಿ ಮೆರೆಯಲಿ ಎಂದು ಬುದ್ದಿವಾದ ಹೇಳಿದರು.

ಇದನ್ನೂ ಓದಿ-https://suddilive.in/archives/15875

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket