ಅಕ್ರಮ ಗೋಮಾಂಸ ಮಾರಾಟದ ಅಡ್ಡದ ಮೇಲೆ ದಾಳಿ

ಸುದ್ದಿಲೈವ್/ಶಿವಮೊಗ್ಗ

ದನದ ಕಾಲು, ಲಿವರ್, ಚರ್ಬಿಗಳ ಒಟ್ಟು 48‌ಕೆಜಿ ಗೋಮಾಂಸ ಪತ್ತೆಯಾಗಿದ್ದು, ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡಲು ಮುಂದಾಗಿದ್ದ ಇಬ್ಬರು ಯುವಕರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಆಜಾದ್ ನಗರದ 2 ನೇ ತಿರುವಿನಲ್ಲಿ ದನದ ಮಾಂಸ ಮಾರಾಟ ಮಾಡಲು ಮೊಹಮದ್ ಯಾಕೂಬ್ ಖುರೇಶಿಯವರಿಗೆ ಸೇರಿದ ಹಳೆಯ ಮಳಿಗೆಯಲ್ಲಿ ಹಸುಗಳನ್ನ ಖರೀದಿಸಿ ಹಣಕ್ಕಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯ ಹಿನ್ನಲೆಯಲ್ಲಿ ಕಡಿದ ದನದ ಚರ್ಬಿ, ಲಿವರ್, ಕಾಲಿನ ಭಾಗಗಳು ಮತ್ತು ತೊಡೆಗಳು ಪತ್ತೆಗಳಾಗಿವೆ. ಮೊಹಮದ್ ಮತೀನ್ ಉಲ್ಲಾ ಯಾನೆ ವಸೀಮ್ ಮತ್ತು ಮೊಹಮ್ಮದ ಶರೀಫುಲ್ಲಾ ಖುರೇಷಿಯನ್ನ ಬಂಧಿಸಲಾಗಿದೆ.

ಪತ್ತೆಯಾದ ಒಟ್ಟು 48 ಕೆಜಿ ಮಾಂಸದಲ್ಲಿ ಗೋಮಾಂಸಗಳೇ ಎಂಬುದನ್ನ ಪಶುವೈದ್ಯಾಧಿಕಾರಿಗಳು ದೃಢಪಡಿಸಿದ ಮೇರೆಗೆ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಮಾಂಸ ಮತ್ತು ಇತರೆ ಸಾಮಾಗ್ರಿಗಳನ್ನ ಸೀಜ್ ಮಾಡಲಾಗಿದೆ.

ಇದನ್ನೂ ಓದಿ-https://suddilive.in/archives/15502

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close