ಕಿಡಿಗೇಡಿಗಳು ಅಟ್ಟಹಾಸ ಮೆರೆಯೋದಾರೆ ಪೊಲೀಸ್ ಇಲಾಖೆ ಯಾಕೆಬೇಕು? ಉಸ್ತುವಾರಿ ಸಚಿವರು ಬದುಕಿದ್ದಾರೋ ಸತ್ತಿದ್ದಾರೋ?ಚೆನ್ನಬಸಪ್ಪ ಕಿಡಿ

ಸುದ್ದಿಲೈವ್/ಶಿವಮೊಗ್ಗ

ಹೊಸಮನೆಯ 3 ನೇ ತಿರುವಿನಲ್ಲಿ ಕಿಡಿಗೇಡಿಗಳಿಂದ ವಾಹನಗಳು ಜಖಂಗೊಂಡಿದ್ದು ಸ್ಥಳಕ್ಕೆ   ಶಾಸಕ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನೀಡಿದ್ದಾರೆ. ಈ ವೇಳೆ ಸ್ಥಳೀಯರೆ ಶಾಸಕರನ್ನ ಕರೆದುಕೊಂಡು ಬಂದು ದೇವಸ್ಥಾನದ ಎದುರಿನ ಜಾಗದಲ್ಲಿ ಲಾಟ್ ಗಟ್ಟಲೆ ಬಿಯರ್ ಬಾಟೆಲ್ ಗಳು ತೋರಿಸಿದ್ದಾರೆ.

ಮಾಧ್ಯಮಗಳಿಗೆ ಮನನ ಮಾತನಾಡಿದ ಅವರು ನಿನ್ನೆ ರಾತ್ರಿ ದೊಡ್ಡ ಗುಂಪು ವಾಹನಗಳನ್ನು ಜಖಂ ಮಾಡಿದೆ. ಮಚ್ಚು ಲಾಂಗ್ ನಲ್ಲಿ ಹೊಡೆದಿದ್ದಾರೆ. ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ.ಗಾಂಜಾ ಸೇವನೆ ಮಾಡಿ ಈ ರೀತಿ ಮಾಡಿದ್ದಾರೆ. ಬರ್ತಡೇ ಆಚರಣೆ ವೇಳೆ ಈ ರೀತಿ ಮಾಡಿದ್ದಾರೆ ಎಂದಿದ್ದಾರೆ.

ನಾಗರೀಕರು ಭಯಭೀತರಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಈ ರೀತಿ ನಡೆಯುತ್ತಿದೆ. ರಕ್ಷಣಾ ಇಲಾಖೆ ಗಂಭೀರ ಗಮನ ಕೊಟ್ಟಿಲ್ಲ. ಆನಂದಪುರದಲ್ಲಿ ತಲ್ವಾರು ಇಟ್ಟುಕೊಂಡು ಓಡಾಡ್ತಾರೆ.ಲಾ ಅಂಡ್ ಆರ್ಡರ್ ನಿಯಂತ್ರಣದಲ್ಲಿದೆ ಅಂತ ಸಚಿವರು ಗೃಹಸಚಿವರು ಹೇಳ್ತಾರೆ.

ಗೃಹ ಸಚಿವರನ್ನು ನೇರವಾಗಿ ಪ್ರಶ್ನೆ ಮಾಡ್ತೇನೆ.. ಗಾಂಜಾ ಸೇವನೆಯಿಂದ ‌ಈ ರೀತಿ ಆಗ್ತಿದೆ ಅಂದರೆ ಹೊಣೆ ಯಾರು? ಗೃಹ ಇಲಾಖೆ ಜವಾಬ್ದಾರಿ ಹೊಣೆ ಹೊರಬೇಕು. ಈ ರೀತಿ‌ಗೂಂಡಾ ವರ್ತನೆಗೆ ಕಡಿವಾಣ ಹಾಕದಿದ್ದರೆ ನಾಗರೀಕರೇ ಗೂಂಡಾ ವರ್ತನೆ ಕೈಗೊಳ್ಳಬೇಕಾಗ್ತದೆ ಎಂದು ಎಚ್ಚರಿಸಿದ್ದಾರೆ.

ಆತ್ಮ ರಕ್ಷಣೆಗೆ ಕಾನೊನು ಕೈಗೆ ಕೊಳ್ಳಬೇಕಾಗುತ್ತದೆ. ಶಿವಮೊಗ್ಗ ‌ಜಿಲ್ಲೆಯ ರಕ್ಷಣಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಕುಸಿದು ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೋ ಇಲ್ವಾ ಗೊತ್ತಿಲ್ಲ.ಉಸ್ತುವಾರಿ ಸಚಿವರು ಏನು ಮಾಡ್ತಿದ್ದಾರೆ. ನಾಗರಿಕರನ್ನು ಭಯಭೀತರಾಗುವ ಕೆಲಸ ನಡೆದಿದೆ ಎಂದು ಗುಟುರ್ ಹಾಕಿದ್ದಾರೆ.

ಗೃಹ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಶಿವಮೊಗ್ಗ ಶಾಂತಿಯುತವಾಗಿ ಇರಬೇಕಾ ಬೇಡ್ವಾ?ನಿಮ್ಮ ಉದ್ದೇಶವಾದರೂ ಏನು ಅಂತಾ ಹೇಳಿ. ಈ ರೀತಿಯಾದರೆ ಗೃಹ ಇಲಾಖೆ ಏಕೆ ಬೇಕು? ಪೊಲೀಸ್ ಇಲಾಖೆ ಏನು ಮಾಡ್ತಿದೆ

ಸಿಸಿ ಕ್ಯಾಮರಾ ಇದೆ ಆದರೂ ಪೊಲೀಸರು ಪರಿಶೀಲನೆ ನಡೆಸಿಲ್ಲ. ರಕ್ಷಣಾಧಿಕಾರಿಗಳು ಬೇಜವಾಬ್ದಾರಿತನ ನಿಲ್ಲಿಸಬೇಕು. ಪರಮೇಶ್ವರ್ ಅವರೇ‌ ನಿಮ್ಮ ಬಗ್ಗೆ ಗೌರವ ಇದೆ. ಶಿವಮೊಗ್ಗಕ್ಕೆ ಬನ್ನಿ ಏನೇನು ಸಿಗುತ್ತದೆ ತೋರಿಸುತ್ತೇನೆ. ಪರಮೇಶ್ವರ್ ಅವರು ಶಿವಮೊಗ್ಗಕ್ಕೆ ಬಂದು ನೋಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ-https://suddilive.in/archives/15797

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close