ಈಶ್ವರಪ್ಪನವರ ಪ್ರಕರಣದಲ್ಲಿ ರಾಜೀನಾಮೆಗೆ ಪರಿತಪಿಸಿದ್ದ ಸಿದ್ದರಾಮಯ್ಯ ಈಗ ಮೌನಕ್ಕೆ ಜಾರುದ್ರಾ?ಕೆಬಿಪಿ

ಸುದ್ದಿಲೈವ್/ಶಿವಮೊಗ್ಗ

ಇತ್ತೀಚಿನ ದಿನಗಳಲ್ಲಿ ಸರ್ಕಾರದ ಕಾರ್ಯವೈಖರಿ ಭಯವನ್ನ ಉಂಟುಮಾಡುವ ವಾತಾವರಣ ನಿರ್ಮಿಸಿದೆ ಎಂದು ಜೆಡಿಎಸ್ ಕೋರ್ ಕಮಿಟಿಯ ಕೆಬಿ ಪ್ರಸನ್ನ ಕುಮಾರ್ ಆರೋಪಿಸಿದರು.

ಇದಕ್ಕೆ ಹತ್ತಾರು ಉದಾಹರಣೆಗಳಿವೆ. ಅದಕ್ಕೆ ಉದಾಹರಣೆಯಂತೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಸಾಕ್ಷಿಯಾಗಿದೆ.‌ಅವರ ಡೆತ್ ನೋಟ್ ನಲ್ಲಿ ನಾನು ಹೇಡಿಯಲ್ಲ ಎಂದಿದ್ದಾರೆ. ಅಧೀಕ್ಷಕ ಮಟ್ಟದ ಅಧಿಕಾರಿಗೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಇನ್ನು ಉಳಿದವರ ಪಾಡೇನು ಎಂದು ಪ್ರಶ್ನಿಸಿದರು.

ಜೀವನದಲ್ಲಿ ಹೇಳಿಕೊಳ್ಳಲು ನಿರ್ಮಾಣವಾಗದ ಸ್ಥಿತಿ ನಿರ್ಮಾಣವಾಗಿದೆ. ಸಾಯುವ ಪರಿಸ್ಥಿತಿಯಲ್ಲಿ ವ್ಯಕ್ತಿ ಯಾವ ಭಾವನೆಯಲ್ಲಿ ಮಾತನಾಡುತದತಾನೆ ಎಂಬುದು ಪ್ರಮುಖವಾಗಿದೆ. ಆದರೆ ಸರ್ಕಾರ ಏನೂ ಆಗೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಇದು ಭಯ ಹುಟ್ಟಿಸುವಂತಾಗಿದೆ. ಇದನ್ನ ಖಂಡಿಸುವೆ ಎಂದರು.

ಮಾಜಿ ಡಿಸಿಎಂ ಈಶ್ವರಪ್ಪನವರ ವಿರುದ್ಧ ಆಪಾದನೆ ಬಂದಾಗ‌ಇದೇ ನಮ್ಮ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆಗೆ ಆಗ್ರಹಿಸಿದ್ದರು. ಈಗ ಅವರ ಮೌನಕ್ಕೆ ಜಾರಿದ್ದೇಕೆ? ವಾಲ್ಮೀಕಿ ಅಭಿವೃದ್ಧಿ ನಿಗಮ ನಿರ್ವಹಿಸುವ ಸಚಿವರ ರಾಜೀನಾಮೆ ಪಡೆಯಬೇಕು. ಅಧಿಕಾರದಲ್ಲಿ ಇದ್ದಾಗ ಒಂದು ರೀತಿ ಅಧಿಕಾರ ಇಲ್ಲದ ರೀತಿ ನಿರ್ಮಾಣವಾಗಿದೆ.

ಕಾನೂನು ಸುವ್ಯವಸ್ಥೆ ಕುಸಿದಿದೆ. ಶಾಲೆ ಮಕ್ಕಳು ಸುರಕ್ಷಿತವಾಗಿ ಮನೆಗೆ ಬಂದರೆ ಸಾಕ್ಪ ಎನ್ನುವ ಸ್ಥಿತಿ‌ನಿರ್ಮಾಣವಾಗಿದೆ. ಗ್ಯಾಂಗ್ ವಾರ್ ನಡೆಯುತ್ತೆ. ಗಾಂಜಾ ಹೊಗೆ ಎಲ್ಲಡೆ ಆವರಿಸಿಕೊಂಡಿದೆ. ಅಧಿಕಾರಿಗಳು ಹೆದರಿಕೊಂಡು ಕೆಲಸ ಮಾಡ್ತಾ ಇದ್ದಾರೆ. ಇದು ಇವತ್ತು ಶಿವಮೊಗ್ಗ ನಾಳೆ ಎಲ್ಲಡೆ ನಡೆಯಲಿದೆ. ನಿನ್ನೆ ಚೆನ್ನಮ್ಮ ಪಡೆ ನಿರ್ಮಾಣವಾಗಿದೆ. ಇದು ಸರ್ಕಾರದ್ದಲ್ಲ. ಆದರೆ ಎಸ್ಪಿ ಅವರ ನೇತೃತ್ವದಲ್ಲಿ ನಿರ್ಮಾಣವಾಗಿದೆ. ಇದನ್ನ ಸ್ವಾಗತಿಸುವೆ ಎಂದರು.

ಯಾವುದೇ ವಿಚಾರ ಬಂದರೆರಾಜಕೀಯ ಆಂಗಲ್ ನಲ್ಲಿ ನೋಟುತ್ತಿದೆ ಸರ್ಕಾರ, ಯಾವುದನ್ನೂ ಕಾನೂನು ಪಾಲನೆಗೆ ಬಿಡ್ತಾ ಇಲ್ಲ. ಚಂದ್ರಶೇಖರ್ ಅವರು ಸಚಿವರ ಹೆಸರು ಉಲ್ಲೇಖಿಸಿದ್ದಾರೆ. ಯಾವ ಸಚಿವರು ಎಂದು ಅವರು ಹೇಳಿಲ್ಲ ಎನ್ನುತ್ತಿದ್ದಾರೆ. ನಿಗದಿತ ನಿಗಮಕ್ಕೆ ಹತ್ತು ಸಚಿವರು ಇರ್ತಾರ, ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಸರ್ಕಾರ ಹೇಗೆ ನಡೆದುಕೊಳ್ಳುತ್ತದೆ ನೋಡುತ್ತೇವೆ. ನಿಗಮದ ಅಧ್ಯಕ್ಷರು ಬರಲಿಲ್ಲ. ಸಚಿವರ ನೇರ‌ಹಸ್ತಕ್ಷೇಪವಿದೆ. ಅಧಿಕಾರಿಗಳನ್ನ ನಡೆಸಿಕೊಳ್ಳುವ ರೀತಿ ಇದಲ್ಲ.‌ 187 ಕೋಟಿ ಒಟ್ಟಾರೆ ವ್ಯವಹಾರವಾಗಿದೆ. 85 ಕೋಟಿ ಅವ್ಯವಹಾರದ ವಾಸನೆ ಹೊಡೆದಿದೆ. ಇಲಾಖೆ ಅಧಿಕಾರಿಗಳನ್ನ ಮತ್ತು ಸಂಬಂಧಪಟ್ಟ ಸಚಿವರನ್ನ ತನಿಖೆಗೆ ಒಳಪಡಿಸಬೇಕು.‌ ತನಿಖೆ ನಡೆಸುವ ಮುನ್ನ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಜೆಡಿಎಸ್ ನ ದೀಪಕ್ ಸಿಂಗ್, ಸಿದ್ದಪ್ಪ, ರಮೇಶ್, ರಾಮಕೃಷ್ಣ, ಸಂಗಯ್ಯ, ವಕ್ತಾರ ನರಸಿಂಹ ಗಂಧದ ಮನೆ, ಮಂಜುನಾಥ್, ತ್ಯಾಗರಾಜ್, ದಯಾನಂದ್, ಸುನೀಲ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/15616

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು