Girl in a jacket

ತ್ರಿಬ್ಬಲ್ ಮರ್ಡರ್ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ತ್ರಿಬ್ಬಲ್ ಮರ್ಡರ್ ವಿಚಾರದಲ್ಲಿ ಪೊಲೀಸರಿಗೆ ಕೊಲೆಯಾಗುವ ಮುಂಚೆನೆ ಮಾಹಿತಿ ಗೊತ್ತಿತ್ತು ಎಂಬ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಮಾಹಿತಿ ಪಡೆದು ಮಾತನಾಡುವೆ ಎಂದಿರುವುದು ಕುತೂಹಲ ಮೂಡಿಸಿದೆ.

ಶಿವಮೊಗ್ಗದಲ್ಲಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೂರು ಕೊಲೆಗಳ ಬಗ್ಗೆ ಮಾಧ್ಯಮಗಳು ಎತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು ಕಾನೂನು ಕ್ರಮ‌ಕೈಗೊಳ್ಳುತ್ತದೆ. ಎಸ್ಪಿ ಅದರ ಬಗ್ಗೆ ಕ್ರಮ ಜರುಗಿಸಲಿದ್ದಾರೆ ಎಂದರು.

ಫ್ಲೈಟ್ ಹತ್ತುವ ಮುನ್ನ ಎಸ್ಪಿ ಅವರಿಂದ ಪಡೆಯಲಾಗುವುದು. ಪಿನ್ ಟು ಪಿನ್ ಮಾಹಿತಿ ಇದೆ. ಎಸ್ಪಿ ಅವರಿಗು ಮಾಧ್ಯಮದವರಿಗೂ ಮಾಹಿತಿ ನೀಡಲು ಸೂಚಿಸಿರುವೆ ಎಂದ ಮಧು ಬಂಗಾರಪ್ಪನವರಿಗೆ, ಮಾಧ್ಯಮಗಳು ಮೂರು ಕೊಲೆಯಾಗಿರುವ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ಇತ್ತು. ಇದು ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿ ಎಂಬ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ ತಿಳಿದುಕೊಳ್ಳಬೇಕು ಎಂದು ಹೇಳಿರುವ ಹೇಳಿಕೆ ಅಚ್ಚರಿ ಹುಟ್ಟಿಸಿದೆ. ಶಿವಮೊಗ್ಗದ ಪೊಲೀಸರಿಗೆ ಈ ಮೊದಲೆ ಮಾಹಿತಿ ನೀಡಲಾದರೂ ಸಹ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ಪ್ರಶ್ನೆಗಳು ಎತ್ತಲಾಗುತ್ತಿದೆ ಎಂದು ಸಚಿವರ ಗಮನಕ್ಕೆ ತರಲಾಗಿದೆ.

ಶಿವಮೊಗ್ಗದ ಶಾಸಕರು ಈ ಪ್ರಕರಣದಲ್ಲಿ ಸಹ ಪೊಲೀಸರ ನಿರ್ಲಕ್ಷ ತನ ಎದ್ದು ತೋರಿತ್ತಿದೆ ಎಂದು ಶಾಸಕ ಚೆನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು‌. ಆದರೆ ಈ ಬಗ್ಗೆನೂ ನಾನು ಬೇರೆ ರೀತಿ ಮಾತನಾಡ ಬೇಕಾಗುತ್ತದೆ ಎಂದು ಸಚಿವರು ಹೇಳಿರುವುದು ಅಚ್ಚರಿ ಮೂಡಿಸಿದೆ.

ಓರ್ವ ಸಚಿವ ಮಾಹಿತಿ ಪಡೆದುಕೊಂಡು ಬಂದು ಸುದ್ದಿಗೋಷ್ಠಿ ನಡೆಸಬೇಕೋ ಅಥವಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಪಡೆಯಲಾಗುವುದು ಎಂದು ಹೇಳಬೇಕೋ ಎಂಬುದು ಮಾಧ್ಯಮದವರನ್ನೇ ಗೊಂದಲಕ್ಕೆ ಬೀಳಿಸುವಂತೆ ಮಾಡಿದೆ. ಓರ್ವ ಜನಪ್ರತಿನಿಧಿ ಕಾನೂನು ಸುವ್ಯವಸ್ಥೆಯಲ್ಲಿ ನಿರ್ಲಕ್ಷ ತೋರಿರುವ ಬಗ್ಗೆ ಅಗತ್ಯ ಬಿದ್ದರೆ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಹೇಳಿದ್ದಾರೆ.

ಓರ್ವ ಶಾಸಕ ಪ್ರಕರಣವನ್ನ ರಾಗಿಗುಡ್ಡದೊಂದಿಗೆ ಹೋಲಿಸಿ ಮಾತನಾಡಿರುವುದು ಸಚಿವ ಮಧು ಬಂಗಾರಪ್ಪನವರಿಗರ ಪ್ರಕರಣದ ತೀವ್ರತೆ ಬಗ್ಗೆ ಮಾಹಿತಿ ಕೊರತೆ ಇದೆ ಎಂಬುದು ಸ್ಪಷ್ಟಪಡಿಸುತ್ತದೆ. ಇದು ಜನ ಸಾಮಾನ್ಯರ ಮೇಲೆ ಬೀರುವ ಪರಿಣಾಮವಾಗಿದೆ.

ತ್ರಿಬ್ಬಲ್ ಮರ್ಡರ್ ಪ್ರಕರಣವನ್ನ ರಾಗಿಗುಡ್ಡದ ಪ್ರಕರಣಕ್ಕೆ ಹೋಲಿಸಿರುವುದು ಎಷ್ಟು ಸರಿ ಎಂಬುದು ಇಲ್ಲಿ ಪ್ರಶ್ನೆಯಾಗಲಿದೆ. ಕಾನೂನು ಸುವ್ಯವಸ್ಥೆ ಕೊಲಾಪ್ಸ್ ಆಗಿದ್ದರೆ ಅದರ ಬಗ್ಗೆ ಆಕ್ಷನ್ ತೆಗೆದುಕೊಳ್ಳಲಾಗುವುದು ಎಂಬ ಸಚಿವರ ಹೇಳಿಕೆ ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಸುದ್ದಿಗೋಷ್ಠಿ ನಡೆಸಿ ತಾನು ಹೇಳಿದ್ದೇ ಫೈನಲ್ ಎಂದು ಪ್ರತ್ರಕರ್ತರು ಬರೆದುಕೊಳ್ಳಬೇಕೆಂಬ ದಾಟಿ ಸರಿಯಲ್ಲ.

ಇದನ್ನೂ ಓದಿ-https://suddilive.in/archives/14602

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು