ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಸಂಜೆ 4-50 ರ ನಂತರ ಸುರಿದ ಮಳೆ ಭೂಮಿ ತಂಪಾಗದಿದ್ದರೂ ಕೊಂಚ ಬಿಸಿಲಿನ ಬೇಗೆಯಿಂದ ರಿಲೀಫ್ ಉಂಟಾಗಿದೆ. ನಿನ್ನೆ ರಾತ್ರಿ 20 ನಿಮಿಷ ಮಳೆಯಾದರೂ ಇಂದು ಬೆಳಿಗ್ಗೆ ಬಿಸಿಲಿನ ಝಳ ಹೆಚ್ಚಾಗಿತ್ತು.
ಮಧ್ಯಾಹ್ನ 3 ಗಂಟೆಯ ನಂತರ ಮತ್ತೆ ಮಳೆ ಮೋಡವಾಗಿ ಮಳೆಯ ವಾತಾವರಣ ನಿರ್ಮಾಣವಾಗಿತ್ತು. ಕಳೆದ ವಾರದಿಂದ ಮಳೆಯ ಮೋಡವಾಗುತ್ತಿದ್ದರು. ಶಿವಮೊಗ್ಗ ನಗರದಲ್ಲಿ ಉತ್ತಮ ಮಳೆಯಾಗಿರಲಿಲ್ಲ.
ಇಂದು ಸಂಜೆ ಗುಡುಗು ಮತ್ತು ಸಿಡಿಲ ಸಮೇತ ಮಳೆಯಾಗಿದೆ. ಈ ಮಳೆ ಸತತ ಅರ್ಧ ಗಂಟೆ ಸುರಿದಲ್ಲಿ ತಂಪಾಗಲಿದೆ. ಇಲ್ಲವಾದಲ್ಲಿ ಮತ್ತೆ ಸುಡುವ ಬಿಸಿಲಿಗೆ ಮೈವೊಡ್ಡುವಂತಾಗುತ್ತದೆ.
ಇದನ್ನೂ ಓದಿ-https://suddilive.in/archives/14856
Tags:
ಸ್ಥಳೀಯ ಸುದ್ದಿಗಳು