ಸುದ್ದಿಲೈವ್/ಶಿವಮೊಗ್ಗ
ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ರಾಜ್ಯಮಟ್ಟದ ಸಮಿತಿಯ ಶ್ರಮದಿಂದ ಈ ಹಿಂದೆ 14 ಜನ ಶರಣಾಗತಿಯಾಗಿ ಮುಖ್ಯವಾಹಿನಿಗೆ ತರಲಾಗಿತ್ತು. ಈಗ ಮತ್ತೆ ಈ ಸಮಿತಿಯನ್ನ 2024 ರಲ್ಲಿ ಮಾರ್ಚ್ ನಲ್ಲಿ ಅಸ್ಥಿತ್ವಕ್ಕೆ ಬಂದಿದೆ ಎಂದು ಸಮಿತಿಯ ಪ್ರಮುಖರಾದ ಡಾ.ಬಂಜೆಗೆರೆ ಜಯಪ್ರಕಾಶ್ ತಿಳಿಸಿದರು.
ಅವರು ಸುದ್ದಿಗೋಷ್ಠಿ ನಡೆಸಿದ ಅವರು ಸೈದ್ದಾಂತಿಕ ಬಿನ್ನಾ ಭಿಪ್ರಾಯವನ್ನ ಬದಿಗೊತ್ತಿ ಬರುವ ಅವಕಾಶವಿಲ್ಲ. ಪ್ರಜಾಸತ್ತಾತ್ಮಕ ಹೋರಾಟ ನಡೆಸಲು ಅವಕಾಶವಿದೆ. ಹೋರಾಟ ನಡೆಸಿದವರಿಗೆ ವಯಸ್ಸಾಗಿದೆ. ಅವರಿಗೆ ಸರ್ಕಾರ ರಕ್ಷಣೆ ನೀಡಲಿದೆ ಎಂದರು.
ಅವರಿಗೆ ದೂರವಾಣಿ ಬಳಸುತ್ತಿರುವುದು ಕೊರತೆ ಇದ್ದಂಗೆ ಇದೆ. ಮಾಧ್ಯಮಗಳನ್ನ ಬಳಸುತ್ತಿದ್ದಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಬೇರೆ ರೀತಿಯ ಸಂಪರಗಕ ಮಾಡಲಾಗುತ್ತಿದೆ. ಸರ್ಕಾರ ನಮ್ಮನ್ನ ಸಂಪರ್ಕಿಸಿ ಅವಕಾಶ ಮಾಡಿಕೊಡಲು ತಿಳಿಸಿದೆ.
ಪಾರ್ವತೀಶ್ ಬಿಳದಾಳೆ ಮಾತನಾಡಿ ಒಂದು ದಶಕದಲ್ಲಿ ನಿರಂತರ ಪ್ರಯತ್ನ ನಡೆಸಿ ಮುಖ್ಯವಾಹಿನಿಗೆ ತರಲಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಮತ ಹೊಂದಿದವರು ಪೊಲೀಸರ ಮೂಲಕ ಹತ್ತಿಕ್ಕಲಾಗುತ್ತದೆ. ಮತ್ತೆ ಅವರಿಗೆ ಬದುಕು ಕಟ್ಟಿಕೊಳ್ಳಲು ಸ್ವಾಗತಾರ್ಹವಿದೆ ಎಂದರು.
ಹಳ ಯೋಜನೆ ಪ್ರಕಾರ 14 ಜನರಿಗೆ ಅನುಕೂಲವಾಗಿದೆ. ಪ್ಯಾಕೇಜ್ ತೆಗೆದುಕೊಳ್ಳದೆ ಮುಖ್ಯವಾಹಿನಿಗೆ ಬಂದಿದ್ದಾರೆ. ಈ ಸಮಿತಿಯಲ್ಲಿ ಡಿಜಿ, ಐಜಿಪಿ, ಇವರು ಉಪ ನಿತ್ದೇಶಕರಾಗಿರುತ್ತಾರೆ.
ಕೌಂಟರ್ ಇಂಟಲಿಜೆನ್ಸಿ ರಾಜ್ಯ ಗುಪ್ತವಾರ್ತೆ ಇವರನ್ನ ಸದಸ್ಯರನ್ನಾಗಿ ಸೇರಿಸಿ ರಾಜ್ಯಮಟ್ಟ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನ ಪುನರ್ ರಚಿಸಿ ಮತ್ತು ಶರಣಾಗತರಾದವರು ವ್ಯಾಪಾರ ಅಥವಾ ವೃತ್ತಿ ನಡೆಸಲು ಒಲವು ತೋರಿದ್ದಲ್ಲಿ ಕೌಶಲ್ಯ ತರಬೇತಿ ಪಡೆಯಲು ಇಚ್ಚಿಸಿದ್ದಲ್ಲಿ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗೆ ದಾಖಲಾದ ನಂತರ ಅವರಿಗೆ ತಿಂಗಳಿಗೆ 5ಸಾವಿರ ರೂ. ಪ್ರೋತ್ಸಾಹ ಧನವನ್ನ 1 ರಿಂದ 2 ವರ್ಷದ ವರೆಗೆ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಜಿಪಂ ಸಿಇಒ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಸದಸ್ಯರಾಗಿರುತ್ತಾರೆ ಮತ್ತು ಎಸ್ಪಿ ಅವರು ಸಂಚಾಲಕರಾಗಿರುತ್ತಾರೆ ಎಂದರು.
ಮಾಧ್ಯಮಗಳಲ್ಲಿ ಸುಬ್ರಹ್ಮಣ್ಯ ಅರಣ್ಯದಲ್ಲಿ ನಾಲ್ಕೈದು ಶಸ್ತ್ರಧಾರಿಗಳ ತಂಡ ಕಾಣಿಸಿಕೊಂಡಿದ್ದು ಪ್ರಚಾರವಾಗಿತ್ತು. ಕೇರಳ ಮತ್ತು ತಮಿಳುನಾಡು ಕರ್ನಾಟಕದ ದಟ್ಟ ಅರಣ್ಯಕ್ಕೆ ನಕ್ಸಲ್ ಶಿಫ್ಟ್ ಆಗಿದ್ದಾರೆ. ಎಂಬ ಶಂಕೆ ಇದೆ. ಕರ್ನಾಕದವರು ನಕ್ಸಲ್ ಗ್ರೂಪ್ ನಲ್ಲಿ 7-8 ಜನ ಇದ್ದಾರೆ. ಅವರನ್ನ ಸಂಪರ್ಕಿಸುವ ಪ್ರಯತ್ನ ಮಾಡಿದೆ. ಸಕಾರಾತ್ಮ ಬಂದಲ್ಲಿ ಸರಿದೂಗಿಸಲಾಗುವುದು ಎಂದರು.
ಹೊರರಾಜ್ಯದವರು ನಮ್ಮ ರಾಜ್ಯದಲ್ಲಿ ಬಂದು ಶರಣಾಗತಿ ಬಯಸಿದರೆ ಅದನ್ನಬೇರೆ ರೀತಿ ನಿಭಾಯಿಸಲಾಗುವುದು ಎಂದರು. ವಕೀಲ ಶ್ರೀಪಾಲ್ ಮಾತನಾಡಿ, ಶರಣಾಗತಿ ಆದವರು ನ್ಯಾಯಾಲಯದಲ್ಲಿ ವಿಳಂಭವಾಗಿ ಅನೇಕ ವರ್ಷ ಜೈಲಿನಲ್ಲಿ ಇರಬೇಕೆಂಬ ಆತಂಕವಿದೆ. ಸಗಪೆಷಲ್ ಕೋರ್ಟ್ ಗಳನ್ನ ರಚಿಸಿ ಪ್ರಕರಣಗಳನ್ನ ಇತ್ಯಾರ್ಥಗೊಳಿಸಲಾಗುವುದು ಎಂದರು.
ವಕೀಲರು, ಮತ್ತು ನ್ಯಾಯಾಲಯದಲ್ಲಿ ಹಣವನ್ನ ಒದಗಿಸಲು ಸಮಿತಿ ಮುಂದಾಗಲಿದೆ ಎಂದರು.
ಇದನ್ನೂ ಓದಿ-https://suddilive.in/archives/14839