ಒಂದುವಾರದೊಳಗೆ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯವೇಕು, ಅವ್ಯವಹಾರ ಸಿಬಿಐ ತನಿಖೆಗೆ ವಹಿಸಬೇಕು-ಬಿವೈ ವಿಜೇಂದ್ರ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ನಾಲ್ಕು ದಿನಗಳು ಕಳೆದಿದ್ದು ಕುಟುಂಬಕ್ಕೆ ಸಾಂತ್ವಾನ ಹೇಳಲು ರಾಜಕೀಯ ನಾಯಕರ ದಂಡೇ ಹರಿದು ಬರುತ್ತಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ‌ ಮರುದಿನವೇ ಶಾಸಕ ಚೆನ್ನಬಸಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿದ್ದರು. ನಿನ್ನೆ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಮಧು ಬಂಗಾರಪ್ಪನವರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

ಇವರ ಬಳಿ ಪತ್ನಿ ಕವಿತ ಪತಿಯನ್ನ‌ ಕಳೆದುಕೊಂಡು ಕುಟುಂಬ ನಿರ್ವಾಹಣೆ ಕಷ್ಟವಾಗಿದೆ, ಆರ್ಥಿಕ ಸ್ಥಿತಿಗಳನ್ನ ಹೇಳಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಹಣಕ್ಕೆ ಸಂಕಷ್ಟವಾಗುತ್ತಿದೆ ಎಂದಿದ್ದಾರೆ. ಎಲ್ಲರೂ ಭರವಸೆ ನೀಡಿದ್ದಾರೆ. ಆಗತ್ಯ ಕ್ರಮಗಳನ್ನ ರಾಜಕೀಯ ನಾಯಕರು ಏನು ಮಾಡಲಿದ್ದಾರೆ ಎಂಬುದು ನಗಣ್ಯವಾಗಿ ಕಂಡು ಬರುತ್ತಿದೆ ಎಂದರು.

ನಂತರ ಸುದ್ದಿಗೋಷ್ಠಿ ನಡೆಸಿದ ಬಿ.ವೈ‌ ವಿಜೇಂದ್ರ, ಪಿ ಚಂದ್ರಶೇಖರ್ ಅವರ ಆತ್ಮಹತ್ಯೆ ರಾಜ್ಯಾದ್ಯಂತ ಸುದ್ದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಡೆತ್ ನೋಟ್ ನಲ್ಲಿ ಅಧಿಕಾರಿಗಳ ಮತ್ತು ಸಚಿವರ ಬಗ್ಗೆ ಉಲ್ಲೇಖಿಸಿ ಆಥಮಹತ್ಯೆ ಮಾಡಿಕೊಂಡಿದ್ದಾರೆ. ನಿಗಮದಲ್ಲಿ ಅವ್ಯವಹಾರ ನಡೆದಿದೆ. ಈ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಎಂದರು.

187.33 ಕೋಟಿ ಹಣ ವ್ಯವಹಾರದಲ್ಲಿ 85 ಕೋಟಿ ಹಣ ಅವ್ಯವಹಾರ ನಡೆದಿದೆ ಕೇವಲ ಮೂರು ನಾಲ್ಕು ಜನ ಅಧಿಕಾರಿಗಳು ಸೇರಿ ಅವ್ಯವಹಾರ ನಡೆಸಯಲು ಸಾಧ್ಯವಿಲ್ಲ. ಇಲಾಖೆಯ ಸಚಿವರಿಂದ ದೂರವಾಣಿ ಕರೆ ಮಾಡಿ ಒತ್ತಡ ಹಾಕಲಾಗಿದೆ. ಮಾನ್ಯ ಸಚಿವ ಡಿ.ನಾಗೇಂದ್ರ ಅನುಮತಿ ಇಲ್ಲದೆ ಪಕ್ಕದ ತೆಲಂಗಾಣ ರಾಜ್ಯಕ್ಕೆ ಹಣ ವರ್ಗಾವಣೆ ಆಗಲು ಸಾಧ್ಯವಿಲ್ಲ ಎಂದು ಆರೋಪಿಸಿದರು.

ಈ ಹಣ ತೆಲಂಗಾಣ ರಾಜ್ಯದ ಚುನಾವಣೆಗೆ ಹಣ ವರ್ಗಾವಣೆ ಆಗಿದೆ. ಇದು ಪಿತೂರಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ವಂದಾಗಿನಿಂದಲೂ ನಾವು ಅನುಮಾನ ವ್ಯಕ್ತಪಡಿಸಿದ್ದೀವಿ. ಬೇರೆ ಬೇರೆ ರಾಜ್ಯಗಳಿಗೆ ರಾಜ್ಯ ಎಟಿಎಂ ಆಗಿದೆ ಎಂದಾಗ ಸಿಎಂ ಮತ್ತು ಡಿಸಿಎಂ ಸಾಕ್ಷಿ ಕೇಳಿದ್ದರು. ಇದು ಒಪನ್ ಅಂಡ್ ಚೆಕ್ ಕೇಸ್ ಆಗಿದೆ ಎಂದು ವಿಜೇಂದ್ರ ಆರೋಪಿಸಿದರು.‌

ರಾಜ್ಯ ಸರ್ಕಾರದ ಸಚಿವರಿಂದ ಹಣ ವರ್ಗಾವಣೆ ಆಗಿದೆ. ಬ್ಯಾಂಜ್ ಅಧಿಕಾರಿಗಳು ಈ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಸಿಎಂ ತಡ ಮಾಡದೆ ತಕ್ಷಣವೇ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಅವ್ಯವಹಾರದಲ್ಲಿ ಅಂತರಾಜ್ಯದ ವ್ಯವಹಾರವಾಗಿದೆ. 25 ಕೋಟಿ ರಿಕವರಿ ಆಗಿದೆ ಎಙದು ಹೇಳಲಾಗುತ್ತಿದೆ. ಸಿಬಿಐ ತನಿಖೆಗೆ ಕೊಡಲೇ ಬೇಕೆಂದು ಆಗ್ರಹಿಸಲಾಗಿದೆ.

ಸಿಐಡಿಗಳು ಪೆನ್ ಡ್ರೈವ್ ಲ್ಯಾಪ್ ಟ್ಯಾಪ್ ತೆಗೆದುಕೊಂಡು ಹೋಗಿದ್ದಾರೆ. ಇದು ಸಿಐಡಿ ತನಿಖೆಯಿಂದ ಸತ್ಯ ಹೊರಬರಲ್ಲ. ಹಾಗಾಗಿ ಸಿಬಿಐಗೆ ಕೊಡಬೇಕು. ಕುಟುಂಬ ನಿರ್ವಹಣೆ ಬಗ್ಗೆ ಮೃತನ ಕುಟುಂಬ ಆಗ್ರಹಿಸಿದೆ 25 ಲಕ್ಷ ರೂ. ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.

ಪ್ರಕರಣದಲ್ಲಿ ಬಂಡತನ ತೋರಬೇಡಿ, ಬಙಡತನ ಬಿಟ್ಟು ಸಚಿವರ ರಾಜೀನಾಮೆ ಪಡೆದು ಒಂದು ವಾರದ ಒಳಗೆ ಸಿಬಿಐಗೆ ತನಿಖೆವಹಿಸಬೇಕು. ಎರಡೂ ಆದೇಶವಾಗದಿದ್ದಲ್ಲಿ ರಾಜ್ಯದ್ಯಂತ ಬಿಜೆಪಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ-https://suddilive.in/archives/15775

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket