ಸುದ್ದಿಲೈವ್/ಶಿವಮೊಗ್ಗ
ಮತಗಟ್ಟೆ 120 ದುರ್ಗಿಗುಡಿ ಶಾಲೆಯ ಮುಂಭಾಗದಲ್ಲಿ ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಬೆಳಿಗ್ಗೆ ಮತಯಂತ್ರ ಕೆಟ್ಟುಹೋದ ಪರಿಣಾಮ 7 ಗಂಟೆಗೆ ನಡೆಯ ಬೇಕಿದ್ದ ಮತದಾನ 7-30 ರ ಸಮಯಕ್ಕೆ ಆರಂಭವಾಗಿತ್ತು.
ಈ ವೇಳೆ ಅಧಿಕಾರಿಗಳು ಮತದಾನ ಮುಗಿಯುವ ಸಮಯಕ್ಕಿಂತ ಹೆಚ್ಚುವರಿ ಅರ್ಧಗಂಟೆ ಹೆಚ್ಚುವರಿಯಾಗಿ ನೀಡುವುದಾಗಿ ಭರವಸೆ ನೀಡಿದ್ದ ಚುನಾವಣೆ ಅಧಿಕಾರಿಗಳು ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳುತ್ತಿದ್ದಂತೆ ಶಾಲೆಯ ಮುಂಭಾಗದ ಗೇಟಿನಬಾಗಿಲು ಹಾಕಿ ಮತದಾನ ಮುಕ್ತಾವೆಂದು ಹೇಳಿದ್ದಾರೆ.
ಮತದಾನಕ್ಕೆ ಬರುತ್ತಿದ್ದ ಮತದಾರರು ಮತ್ತು ಚುನಾವಣೆ ಅಧಿಕಾರಿಗಳ ನಡುವೆ ಮಾತಿನ ಜಟಾಪಟಿ ನಡೆದಿದೆ. ಬಿಜೆಪಿಯ ಐಡಿಯಲ್ ಗೋಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ನಂತರ ಅಧಿಕಾರಿಗಳು ಅರ್ಧಗಂಟೆ ಹೆಚ್ಚುವರಿ ನೀಡುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಾಸಾಗಿದೆ.
ಇದನ್ನೂ ಓದಿ-https://suddilive.in/archives/14415
Tags:
ನಗರ ಸುದ್ದಿಗಳು