ಹಣ ಕದ್ದ ಘಟನೆ ಸಿಸಿ ಟಿವಿಯಲ್ಲಿ ಸೆರೆ-ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಖಾಸಗಿ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರ ವಾಹನದಲ್ಲಿದ್ದ ಹಣವನ್ನ ಪರಿಚಯಸ್ಥನಿಂದಲೇ ಕಳುವಾಗಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬಂದ ವೇಳೆ ಪರಿಚಯಸ್ಥನಿಂದಲೇ 1,50,000 ರೂ. ಹಣ ಕಳುವಾಗಿದೆ. ತಿಮ್ಮಪ ಎಂಬುವರು ಕೊಣಂದೂರಿನಿಂದ ಶಿವಮೊಗ್ಗದ ಸಾವರ್ ಲೈನ್ ರಸ್ತೆಯಲಿರುವ ಟ್ರಾನ್ಸ್ ಪೋರ್ಟ್ ಕಛೇರಿಗೆ ಬಂದು ಅಲ್ಲಿ ಕೋಣಂದೂರು ಕಡೆಯಿರುವ ಪಾರ್ಸೆಲ್ ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಕೋಣಂದೂರಿಗೆ ಹೋಗುವಾಗ ಶಿವಮೊಗ್ಗದಿಂದ ದಿನಸಿ ಐಟಂಗಳನ್ನು ಸಹ ಖರೀದಿ ಮಾಡಿ ಕೋಣಂದೂರು ಸುತ್ತಮುತ್ತಲಿನ ಹಳ್ಳಿಗಳಿಗೆ ಕೆಎ-14 ಸಿ-4602 ಟಾಟಾ ಇಂಟ್ರಾ ವಾಹನದಲ್ಲಿ ಸಾಗಾಣೆ ಮಾಡುತ್ತಿದ್ದರು.

ಮೇ09 ರಂದು ಶಿವಮೊಗ್ಗಕ್ಕೆ ತಮ್ಮ ವಾಹನದಲ್ಲಿ ಕೋಣಂದೂರಿನಿಂದ ಹೊರಡುವಾಗ ಕೋಣಂದೂರಿನ ಫ್ಯಾನ್ಸಿ ಅಂಗಡಿಯವರಿಗೆ ಐಟಂಗಳು ಬೇಕಾದ ಕಾರಣ 1½ ಲಕ್ಷ ರೂ. ಹಣವನ್ನ ತಂದಿದ್ದರು.

ಗಾಂಧಿಬಜಾರ್ ನಿಂದ ಐಟಂ ತರಲು ನೀಡಿದ್ದ 01,50,000/-ರೂ ಹಣವನ್ನು ತಿಮ್ಮಪ್ಪ ತಮ್ಮ ವಾಹನದ ಡ್ಯಾಷ್ ಬೋರ್ಡ್ ನಲ್ಲಿಟ್ಟುಕೊಂಡು ಬಂದು ನಗರದ ಸಾವ‌ರ್ ಲೈನ್ ರಸ್ತೆಯಲ್ಲಿರುವ ಟ್ರಾನ್ಸ್ ಪೋರ್ಟ್ ಕಛೇರಿಯಲ್ಲಿ ಪಾರ್ಸೆಲ್ ತರಲು ತೆರಳಿದಾಗ ತಮಗೆ ಪರಿಚಯವಿದ್ದ ನರಸಿಂಹ ಎಂಬುವರು ಮಾತಿಗೆ ಸಿಕ್ಕಿದ್ದಾರೆ. ಮಾತನಾಡುತ್ತಾ ಟ್ರಾನ್ಸ್ ಪೋರ್ಟ್ ನ ಮ್ಯಾನೇಜರ್ ಕರೆದಾಗ ತಿಮ್ಮಪ್ಪನವರು ಒಳಗೆ ಹೋಗಿದ್ದಾರೆ.

ವಾಪಾಸ್ ಬಂದು ವಾಹನದಲ್ಲಿ ಕುಳಿತು ಗಾಂಧಿ‌ಬಜಾರ್ ಕಡೆ ಹೊರಟಾಗ‌ ಡ್ಯಾಶ್ ಬೋರ್ಡ್ ತೆಗೆದು ನೋಡಿದಾಗ ಹಣವಿರಲಿಲ್ಲ. ವಾಪಾಸ್ ಟ್ರಾನ್ಸ್ ಪೋರ್ಟ್ ನ ಮ್ಯಾನೇಜರ್ ಕಡೆ ಹೋಗಿ ವಿಷಯ ತಿಳಿಸಿದ್ದಾರೆ. ಆಗ ಸಿಸಿ ಟಿವಿ ಕ್ಯಾಮೆರವನ್ನ ಪರಿಶೀಲಿಸಿದಾಗ ಹಣ ಕಳುವಾಗಿರುವುದು ಸಿಸಿ ಟಿವಿಯಲ್ಲಿ ಪತ್ತೆಯಾಗಿದೆ.

ನರಸಿಂಹನಿಗೆ ಹಣ ಕದ್ದಿರುವ ಬಗ್ಗೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದರೂ ಹಣ ವಾಪಾಸ್ ನೀಡದೆ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

ಇದನ್ನೂ ಓದಿ-https://suddilive.in/archives/14773

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು