ಸುದ್ದಿಲೈವ್/ಶಿವಮೊಗ್ಗ
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ರಂಗೇರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿ ಪರವಾಗಿ ಅವರ ಪತ್ನಿ ನಮಿತಾ ಸರ್ಜಿ ಪ್ರಚಾರ ನಡೆಸಿದ್ದಾರೆ. ಪತಿಗೆ ಸಾಥ್ ನೀಡಿದ ಅವರು, ಶಿವಮೊಗ್ಗ ನಗರದ 8ನೇ ವಾರ್ಡಿನಲ್ಲಿ ಪದವೀಧರರನ್ನು ಭೇಟಿ ಮಾಡಿ ಮತಯಾಚನೆ ನಡೆಸಿದರು.
ತಮ್ಮ ಪತಿಯನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸಿಕೊಡುವಂತೆ ಮತಯಾಚಿಸಿದ ಅವರು, ಮತದಾರರ ಯೋಗಕ್ಷೇಮ ವಿಚಾರಿಸಿದ್ದು ವಿಶೇಷವಾಗಿತ್ತು. ಈ ವೇಳೆ ಬಿಜೆಪಿ ನಗರ ಕಾರ್ಯದರ್ಶಿ ಪರಮೇಶ್ವರ ನಾಯ್ಕ,ನಗರ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ಸ್ವಾಮಿ, ಮಹಿಳಾ ಪ್ರಮುಖರಾದ ತ್ರಿವೇಣಿ ಶ್ರೀಕಾಂತ್ ಹಾಗೂ ಬೂತ್ ಅಧ್ಯಕ್ಷೆ ಸರಳ, ಕಾರ್ಯದರ್ಶಿ ಮಂಜುಳಾ ಸೇರಿದಂತೆ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
ಇನ್ನೊಂದೆಡೆ ಪರಿಷತ್ ಚುಬಾವಣೆಯ ಬಿಜೆಪಿ ಅಭ್ಯರ್ಥಿ ಡಾ ಧನಂಜಯ್ ಸರ್ಜಿಯವರ ಪರವಾಗಿ ವೈದ್ಯರು ಸಹ ಪ್ರಚಾರ ನಡೆಸ್ತಿದ್ದಾರೆ. ಶಿಕ್ಷಕರನ್ನ, ಉಪನಾಸ್ಯಕರನ್ನು, ವಕೀಲರನ್ನು ಹೀಗೆ ಪದವೀಧರ ಮತದಾರ ಕ್ಷೇತ್ರದಲ್ಲಿ ಮತದಾನ ಹೊಂದಿರುವ ವ್ಯಕ್ತಿಗಳನ್ನು ಭೇಟಿಯಾಗುತ್ತಿರುವ ಸರ್ಜಿ ಬೆಂಬಲಿಗರು ಮತಯಾಚನೆ ನಡೆಸ್ತಿದ್ದಾರೆ.
ಈ ನಿಟ್ಟಿನಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತಾ ಸರ್ಜಿ, ಬಾಳೆಕಾಯಿ ಮೋಹನ್, ಡಾ.ರಜತ್, ಡಾ.ಪ್ರಾಣೇಶ್, ನಾಗವೇಣಿ ಸರ್ಜಿ, ಪ್ರಸನ್ನ ಹಾಗೂ ಬಿಜೆಪಿ ಕಾರ್ಯಕರ್ತರು ಶಿವಮೊಗ್ಗ ನಗರದ ವಿವಿಧ ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಆಡಳಿತ ವರ್ಗ, ಉಪನ್ಯಾಸವರ್ಗ ಮತ್ತು ಸಿಬ್ಬಂದಿ ವರ್ಗದವರಲ್ಲಿ ಮತಯಾಚನೆ ನಡೆಸಿದ್ದಾರೆ.
ಪೂರ್ವ ಪೂರ್ವ ಭಾವಿ ಸಭೆ
ನೈರುತ್ಯ ಪದವೀಧರ ಕ್ಷೇತ್ರದಲ್ಲಿ 5½ ಜಿಲ್ಲೆಗಳು ಸೇರುವ ಕಾರಣ ಈ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಸೇರುವುದರಿಂದ ಈ 5½ ಜಿಲ್ಲೆಗಳಲ್ಲಿ ಎಲ್ಲಿ ಸಭೆ, ಪ್ರಚಾರ ನಡಧರೂ ಮಹತ್ವ ಪಡೆದುಕೊಳ್ಳಲಿದೆ. ಬಿಜೆಪಿಯ ಮಂಡಲದ ಸಭೆ ನಡೆದಿದೆ. ತರೀಕೆರೆಯ ಮಂಡಲ ಸಭೆ ನಡೆದಿದೆ. ಅಭ್ಯರ್ಥಿ ಡಾ.ಧನಂಜಯ್ ಸರ್ಜಿ ಅವರನ್ನ ಗೆಲ್ಲಿಸುವ ಸಲುವಾಗಿ ನಡೆದ ಮಂಡಲ ಸಭೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ-https://suddilive.in/archives/15511