Girl in a jacket

ಅಪಪ್ರಚಾರದ ವಿರುದ್ಧ ಸಿಡಿದೆದ್ದ ಈಶ್ವರಪ್ಪ-ಸಂಸದ ರಾಘವೇಂದ್ರರನ್ನ ಬಂಧಿಸುವಂತೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರಭಕ್ತರ ಬಳಗದವತಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿರುವ ಈಶ್ವರಪ್ಪನವರು ಮತ್ತೊಮ್ನೆ ಸಂಸದ ರಾಘವೇಂದ್ರರ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಘವೇಂದ್ರರನ್ನ ಬಂಧಿಸುವಂತೆ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ಬಂಡಾಯ ಎದ್ದಿರುವ ಈಶ್ವರಪ್ಪನವರ ವಿಡಿಯೋವೊಂದು ವೈರಲ್ ಅಗಿದ್ದರ ಕಾರಣ ಕೆಂಡಮಂಡಲವಾಗಿರುವ ಈಶ್ವರಪ್ಪ ಸಂಸದ ರಾಘವೇಂದ್ರರ ನೀಚ ಕೃತ್ಯದಿಂದ ಹಳೆ ವಿಡಿಯೋವನ್ನ ಮತ್ತು ಪತ್ರಿಕೆಯಲ್ಲಿ ತಮ್ಮ ವಿರುದ್ಧ ಪ್ರಕಟವಾದ ವಿಷಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ಮತದಾನದ ವೇಳೆ ಮಾಧ್ಯಮಗಳಿಗೆ ಮಾತನಾಡಿರುವ ಈಶ್ವರಪ್ಪ ಯಾವ ದೂರು ನೀಡಲ್ಲ ಎಂದಿದ್ದರು. ಮಧ್ಯಾಹ್ನದ ವೇಳೆಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದು ಸಂಜೆ ಎಸ್ಪಿ ಅವರಿಗೂ ಮನವಿ ನೀಡುವುದಾಗಿ ತಿಳಿಸಿರುವುದು ಕುತೂಹಲ ಮೂಡಿಸಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದ ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿಯನ್ನು ಹಬ್ಬಿಸಿ ನಾನು ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಹಾಗು ನಾನು ಬಿ.ಜೆ.ಪಿಯ ಅಭ್ಯರ್ಥಿಯಾದ ಬಿ.ವೈ ರಾಘವೇಂದ್ರ ಅವರನ್ನು ಬೆಂಬಲಿಸುತ್ತಿರುವುದಾಗಿ ಅಪಪ್ರಚಾರದ ಸುದ್ದಿಗಳನ್ನು, ವಿಡಿಯೋಗಳನ್ನು ಹರಿಬಿಡಲಾಗಿದೆ.

ಸಾಮಾಜಿಕ ಜಾಲತಾಣಗಳಾದ ಫೇಸ್ಟುಕ್, ವಾಟ್ಸಾಪ್ ಮೂಲಕ ಹರಿಬಿಟ್ಟು ಮತದಾರರಲ್ಲಿ ಗೊಂದಲವನ್ನು ಸೃಷ್ಠಿ ಮಾಡಲಾಗುತ್ತಿದೆ. ಈ ರೀತಿಯ ಕೆಲಸವು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದ್ದು ಈ ವಿಷಯವಾಗಿ ನಾನು ಅಧಿಕೃತವಾಗಿ ತಮ್ಮಲ್ಲಿ ದೂರು ದಾಖಲಿಸುತ್ತಿದ್ದೇನೆ. ತಾವು ಈ ದೂರನ್ನು ಗಂಭೀರವಾಗಿ ಪರಗಣಿಸಬೇಕೆಂದು ಈಶ್ವರಪ್ಪನವರು ಡಿಸಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸುಳ್ಳು ವದಂತಿಯನ್ನು ಹುಟ್ಟು ಹಾಕಿದವರ ಮೂಲವನ್ನು ತಾವು ಪರಶೀಲಿಸಿ ತಪ್ಪಿಸ್ಥರಿಗೆ ಕಾನೂನು ರೀತಿಯ ಸೂಕ್ತ ಶಿಕ್ಷೆಯನ್ನು ನೀಡಬೇಕಾಗಿ ಆಗ್ರಹಿಸಿರುವ ಈಶ್ವರಪ್ಪನವರು ಸಂಸದ ರಾಘವೇಂದ್ರರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಇದೇ ಮನವಿಯನ್ನ ಜಿಲ್ಲಾ ರಕ್ಷಣಾಧಿಕಾರಿಗಳಿಗೂ ಸಂಜೆ 6 ಗಂಟೆಗೆ ನೀಡುವುದಾಗಿ ತಿಳಿಸಿದರು. ಮನವಿ ನೀಡುವ ಸಂದರ್ಭದಲ್ಲಿ ಪುತ್ರ ಕಾಂತೇಶ್ ಮತ್ತು ಇತರರು ಜೊತೆಯಲ್ಲಿದ್ದರು.

ಇದನ್ನೂ ಓದಿ-https://suddilive.in/archives/14397

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು