ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಗ್ರಾಮಾಂತರ ಭಾಗದಲ್ಲಿ ಜನ್ಮದಿನ ಆಚರಣೆಯಲ್ಲಿ ಯುವಕರ ನಡುವೆ ಗಲಾಟೆಯಾಗಿವೆ. ಪರಸ್ಪರ ಬಡಿದಾಡಿಕೊಂಡು ಮೆಗ್ಗಾನ್ ಗೆ ದಾಖಲಾಗಿದ್ದಾರೆ.
ಶಿವಮೊಗ್ಗದ ಬೀರನಕೆರೆಯಲ್ಲಿ ಪರಮೇಶ್ವರಪ್ಪನವರ ಮನೆಯ ಮುಂದೆ ನಿರಂಜನ್ ಎಂಬ ಯುವಕನ ಹುಟ್ಟುಹಬ್ಬ ಆಚರಣೆಗಾಗಿ ಕೇಕ್ ಕಟ್ ಮಾಡಿ ಇನ್ನೇನು ಪಟಾಕಿ ಹಚ್ಚಬೇಕು ಅಷ್ಟರಲ್ಲಿ ಯುವಕರನಡುವೆ ಗಲಾಟೆಯಾಗಿದೆ.
ದರ್ಶನ್, ನಿರಂಜನ್, ಉಮೇಶ್ ನಾಯ್ಕ್, ರಾಕೇಶ್, ಗೌತಮ್, ಸುಮಂತ್, ದಿನೇಶ್ ಹೇಮಂತ್ ವಿರುದ್ಧ ಪರಮೇಶ್ ನಾಯ್ಕ್ ಪ್ರತಿ ದೂರುದಾಖಲಿಸಿದ್ದಾರೆ. ಇದಕ್ಕೂ ಮೊದಲು ದರ್ಶನ್ ಅಭಿ ಯಾನೆ ಅಭಿಷೇಕ್, ಪರಮೇಶ್ ನಾಯ್ಕ್, ರತ್ನಬಾಯಿ, ಯಶೋದ ಬಾಯಿ ವಿರುದ್ಧ ಹಲ್ಲೆ, ಬೆರಿಕೆ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/15584
Tags:
ಕ್ರೈಂ ನ್ಯೂಸ್