ಪೆಟ್ರೋಲ್ ಬಂಕ್ ನ ಮೇಲೆ ಚುನಾವಣೆ ಅಧಿಕಾರಿಗಳ ದಾಳಿ-ಕಾಂಗ್ರೆಸ್ ಕಾರ್ಯಕರ್ತರ ಆಕ್ಷೇಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಪಾರ್ಕ್ ಬಡಾವಣೆಯ ಹೆಚ್ಎಂ ಫ್ಯೂಲ್ಸ್ ಮೇಲೆ ಚುನಾವಣೆ ಅಧಿಕಾರಿಗಳು.ದಾಳಿ ನಡೆಸಿದ್ದು, ದಾಳಿಯ ವೇಳೆ ದೊರೆತ ಲಕ್ಷಾಂತರ ಹಣದ ಬಗ್ಗೆ ಗೊಂದಲ ಉಂಟಾಗಿದೆ.

ಎಫ್ ಎಸ್ ಟಿ ತಂಡದ ಕಾರ್ಯ ವೈಖರಿ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಕ್ಷೇಪ ವ್ಯಕ್ತವಾಗಿದೆ. ಅಧಿಕಾರಿಗಳು ಸೀಜ್ ಮಾಡಿರುವ ಹಣ 8 ಲಕ್ಷ ಎನ್ನುತ್ತಿದ್ದರೆ, ಫ್ಯೂಯಲ್ ಮ್ಯಾನೇಜರ್ 9.70 ಲಕ್ಷ ಹಣ ಸೀಜ್ ಆಗಿದೆ ಎನ್ನುತ್ತಿದ್ದಾರೆ. ಇದರಿಂದ ಗೊಂದಲ ಉಂಟಾಗಿದೆ.

ಸೀಜ್ ಮಾಡಿದ ಹಣಕ್ಕೂ ತೋರಿಸಿ ಹಣಕ್ಕೂ ವ್ಯತ್ಯಾಸ ಇದೆ ಎಂದು ಆಕ್ಷೇಪಿಸಲಾಗಿದೆ. ಜೊತೆಗೆ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಬಂದು ಸೀಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.. ಒಂದೂವರೆ ಲಕ್ಷ ರೂಪಾಯಿ ನಗದನ್ನು ಕಡಿಮೆ ತೋರಿಸುತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಆರೋಪಿಸಿದ್ದಾರೆ.

ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳನ್ನು  ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರ ಜಮಾಾವಣೆಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿದ್ದೇಗೌಡರಿಂದ‌ ಮಾರ್ಚ್ ನಲ್ಲಿ ಖರೀದಿಸಿರುವ ಕಾರಿಗೆ ಈ ತನಕ ನಂಬರ್ ಪ್ಲೇಟ್ ಅಳವಡಿಸಿಲ್ಲ ಏಕೆ ಎಂದು  ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಕಾರಿನಲ್ಲಿ ಮಧ್ಯದ ಪ್ಯಾಕೆಟ್ ಇರುವುದನ್ನು ಕಾರ್ಯಕರ್ತರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಕಾರ್ಯಕರ್ತರನ್ನು ಸಮಾಧಾನಪಡಿಸಿ ಕಾರನ್ನು ಜಯನಗರ ಠಾಣೆಗೆ ಪೊಲೀಸರು ತಂದಿರಿಸಿದ್ದಾರೆ. ಕಾರಿನ ಬಗ್ಗೆ ತಪಾಸಣೆ ನಡೆಸುವುದಾಗಿ ಭರವಸೆ ನೀಡಲಾಗಿದೆ.

ಹಣದ ವಿರುವ ಬಗ್ಗೆ ಲಿಖಿತ ರೂಪದಲ್ಲಿ ದೂರು ನೀಡಿ ಎಂದು ಪೊಲೀಸರು ಕೇಳಿರುವ ಘಟನೆ ಸಹ ನಡೆದಿದೆ. ನಾಳೆ ದಾಖಲಾತಿ ನೀಡಿ ಹಣ ಬಿಡಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ-https://suddilive.in/archives/14145

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket