Girl in a jacket

ಮಾದರಿ ಮತಗಟ್ಟೆಯಲ್ಲಿ ಮತದಾರರೇ ಮಹಾಪ್ರಭುಗಳು, ದುರ್ಗಿಗುಡಿಯಲ್ಲಿ ಕೈಕೊಟ್ಟ ಮತಯಂತ್ರ, ಯುವ ಮತ್ತು ವೃದ್ಧರಿಂದ ಮತಚಲಾವಣೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಮತದಾನಕ್ಕೆ ಆಸಕ್ತಿ ಹೆಚ್ಚಾಗಿದೆ. ವೃದ್ಧರು ಯುವಕರು ಶಿವಮೊಗ್ಗದಲ್ಲಿ ಮತದಾನಕ್ಕಾಗಿ ಮತಗಟ್ಟೆಗಳ ಕಡೆ ತೆರಳುತ್ತಿರುವ ದೃಶ್ಯ ಲಭ್ಯವಾಗಿದೆ.

ಟ್ಯಾಂಕ್ ಮೊಹಲ್ಲಾ, ಬಸವನಗುಡಿ ಸಾಯಿ ಬಾಬಾ ಶಾಲೆ, ಮೈನ್ ಮಿಡ್ಲು ಶಾಲೆಯಲ್ಲಿ ಮತದಾನಕ್ಕಾಗಿ ಬೆಳಿಗ್ಗೆ 7 ಗಂಟೆಯಿಂದಲೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ದೃಶ್ಯಗಳು ಲಭ್ಯವಾಗಿದೆ. ಸೈನ್ಸ್ ಮೈದಾನದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂವರು ಯುವಕ ಯುವತಿಯರು ಮೊದಲನೇ ಬಾರಿಗೆ ಮತಚಲಾಯಿಸಿದ್ದಾರೆ.

ದೇಶದ ಭವಿಷ್ಯಕ್ಕೆ ಮತಹಾಕಬೇಕಿದೆ. ಮೊದಲಬಾರಿ ಮತ ಹಾಕಿದ್ದೇವೆ ಎನ್ನುತ್ತಿದ್ದಾರೆ ಶಿವಮೊಗ್ಗದ ಯುವ ಬಳಗ. ಬೆಂಗಳೂರು ಮತ್ತು ಮೈಸೂರಿನಿಂದ ಬಂದು ಮತಹಾಕಿದ್ದೇವೆ ಎಂದು ಮೊದಲ ಬಾರಿಗೆ ಮತಹಾಕಿದ ಈಶ್ವರ ಮತ್ತು ಸಹನಾ ತಿಳಿದಿದ್ದಾರೆ.

ಅದರಂತೆ ವೀಲ್ ಚೇರ್ ಮೂಲಕ ನರಸಿಂಹ ಮೂರ್ತಿ ಎಂಬ 93 ವರ್ಷದ ವೃದ್ಧ ದಂಪತಿಗಳು ಮಕ್ಕಳ ಜೊತೆ ಬಂದು ಮತ ಚಲಾಯಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಶಿಕಾರಿಪುರದಲ್ಲಿ ಮತಚಲಾಯಿಸಿದ್ದಾರೆ. ಈಶ್ವರಪ್ಪನವರು ಸೈನ್ಸ್ ಮೈದಾನದ ಸರ್ಕಾರಿ ಪೂರ್ವ ಕಾಲೇಜಿನಲ್ಲಿ ಮತಚಲಾಯಿಸಲಿದ್ದಾರೆ.

ಶಿವಮೊಗ್ಗದಲ್ಲಿ ಅರಮನೆ ಅಂತ ಮತದಾನ ಕೇಂದ್ರ ರಚನೆಯಾಗಿದೆ. ಶಿವಮೊಗ್ಗದ ಜಿಲ್ಲಾ ಪಂಚಾಯತ್ ನ ಮತದಾನ ಕೇಂದ್ರದಲ್ಲಿ ವಿಭಿನ್ನ ಪ್ರಯತ್ನ ನಡೆದಿದೆ. ಮತದಾನಕ್ಕೆ ಬರುವವರಿಗೆ ಇಲ್ಲಿ ವಿಶೇಷ ವೆಲ್ ಕಂ ಮಾಡಲಾಗುತ್ತಿದೆ.

ಮತದಾರರೇ ಪ್ರಭು ಎಂಬ ಘೋಷಣೆಯೊಂದಿಗೆ ಮತದಾರರನ್ನು ಸೆಳೆಯಲು ವಿಭಿನ್ನ ಪ್ರಯತ್ನ ನಡೆದಿದೆ. ಪ್ಯಾಲೇಸ್ ರೀತಿಯಲ್ಲಿ ಮತದಾನ ಕೇಂದ್ರ ಸಿದ್ದಗೊಂಡಿದೆ. ಮತದಾನ ನಂತರ ರಾಜ ಸಿಂಹಾಸದಲ್ಲಿ ಕುಳಿತು ಫೋಟೋ ವತೆಗೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ದುರ್ಗಿಗುಡಿ ಪ್ರೌಢಶಾಲೆಯಲ್ಲಿ  ಬೂತ್ ನಂಬರ್ 120 ನಲ್ಲಿ ಮತಯಂತ್ರ ಕೈಕೊಟ್ಟಪರಿಣಾಮ ಅರ್ಧ ಗಂಟೆ ತಡವಾಗಿ ಮತದಾನ ಆರಂಭವಾಗಿದೆ. ಎಲ್ಲೆಡೆ 7 ಗಂಟೆಗೆ ಆರಂಭವಾದರೆ ಬೂತ್ ನಂಬರ್ 120 ರಲ್ಲಿ 7-30 ಕ್ಕೆ ಮತದಾನ ಆರಂಭವಾಗಿದೆ.

ಪ್ರಾಚೀನ ಕಾಲದ ಉಡುಗೆ ತೊಟ್ಟ ಚುನಾವಣಾಧಿಕಾರಿಗಳು ಮತಕೇಂದ್ರಕ್ಕೆ ಹಾಜರಾಗಿದ್ದಾರೆ. ಮಾದರಿ ಮತಗಟ್ಟೆಯಾಗಿ ಈ ಜಿಲ್ಲಾ ಪಂಚಾಯತಿ ಮತಗಟ್ಟೆಯನ್ನ ರಚಿಸಲಾಗಿದೆ.

ಇದನ್ನೂ ಓದಿ-https://suddilive.in/archives/14331

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು