ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ಚಂದ್ರಶೇಖರ್ ಬಲಿ-ಎಫ್ಐಆರ್ ನಲ್ಲಿಏನಿದೆ?

ಸುದ್ದಿಲೈವ್/ಶಿವಮೊಗ್ಗ

ವಾಲ್ಮೀಕಿ ಎಸ್ ಟಿ ವೆಲ್ ಫೇರ್ ಇಲಾಖೆಯಲ್ಲಿ ಅಕೌಂಟೆಂಟ್ ಆಗಿದ್ದ ಚಂದ್ರಶೇಖರ್ ಆತ್ಮಹತ್ಯೆ 306 ಎಂದು ವಿನೋಬ‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೂಗಲ್ ಪ್ರಕಾರ 306 ಎಂದರೆ ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ, ಅಂತಹ ಆತ್ಮಹತ್ಯೆಯ ಕಮಿಷನ್‌ಗೆ ಉತ್ತೇಜನ ನೀಡುವವರು ಎಂದು ದೂರು ದಾಖಲಾಗಿದೆ. ಚಂದ್ರಶೇಖರ್ ಅವರ ಪತ್ನಿ ಕವಿತರವರು ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಜಿ.ಜಿ.ಪದ್ಮನಾಭ್, ಲೆಕ್ಕಾಧಿಕಾರಿ‌ ಪರಶುರಾಮ್ ದುಗ್ಗಣ್ಣನವರ್, ಯೂನಿಯನ್ ಬ್ಯಾಂಕ್ ಅಧಿಕಾರಿ ಶುಚಿಸ್ಮತಾ ರವುಲ್ ರಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿರಯವುದಾಗಿ ದೂರು ದಾಖಲಿಸಿದ್ದಾರೆ.

ಕೆಂಚಪ್ಪ ಬಡಾವಣೆಯ ನಿವಾಸಿಯಾಗಿರುವ‌ ಪತ್ನಿ ಕವಿತಾರವರು ತಮ್ಮ ಪತಿ ಚಂದ್ರಶೇಖರ್ ಅವರು ಯಾರೂ ಮನೆಯಲ್ಲಿ ಇಲ್ಲದಾಗ ಆತ್ಮ ಹತ್ಯೆ ಮಾಡಿಕಡಿರುವುದಾಗಿ ದೂರುದಾಖಲಿಸಿದ್ದಾರೆ. ಪತಿ ಚಂದ್ರಶೇಖರ್ ರವರು ಬೆಂಗಳೂರಿನಲ್ಲಿ ವಾಲ್ಮೀಕಿ ಎಸ್.ಟಿ ವೆಲ್‌ ಫೇರ್ ಇಲಾಖೆಯಲ್ಲಿ ಅಕೌಂಟೆಂಟ್ ಕೆಲಸ ಮಾಡಿಕೊಂಡಿರುತ್ತಾರೆ.

ಪತ್ನಿ ಕವಿತಾ ಶಿವಮೊಗ್ಗದಲ್ಲಿ. ವಿಕಲ ಚೇತನ ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಕೆಂಚಪ್ಪ ಬಡಾವಣೆಯಲ್ಲಿರುವ ಮನೆಗೆ ಮೇ.24 ರಂದು ರಾತ್ರಿ 09-30 ಕ್ಕೆ ಬೆಂಗಳೂರಿನಿಂದ ಶಿವಮೊಗ್ಯಕ್ಕೆ ಬಂದಿದ್ದ ಚಂದ್ರಶೇಖರ್ 25/05/2024 ಮತ್ತು 26/05/2024 ರಂದು ರಜೆ ಇದ್ದುದರಿಂದ ಮನೆಯಲ್ಲಿ ಇದ್ದರು.

ಮೇ.25 ರಂದು ಮಾಚೇನಹಳ್ಳಿಯಲ್ಲಿರುವ ಪತ್ನಿ ಕವಿತರ ದೊಡ್ಡಪ್ಪ ಮೂಕಣ್ಣ ರವರು ಮೃತ ಪಟ್ಟಿದ್ದರಿಂದ ಅವರ ಅಂತ್ಯ ಸಂಸ್ಕಾರ ಕಾರ್ಯ ಮೇ.26 ರಂದು ಇತ್ತು. ಈ ಕಾರ್ಯಕ್ಕೆ ಪತ್ನಿ ಕವಿತ ಹಾಗೂ ಕೊನೆಯ ಮಗ ಮದ್ಯಾಹ್ನ 12-00 ಗಂಟೆಗೆ ಹೋಗಿದ್ದರು.

ಮನೆಯಲ್ಲಿ ಚಂದ್ರಶೇಖರ್ ಒಬ್ಬರೆ ಮನೆಯಲೆ ಇದ್ದರು. ಮಾಚೇನಹಳ್ಳಿಯಲ್ಲಿರುವ ದೊಡ್ಡಪ್ಪ ರವರ ಅಂತ್ಯ ಸಂಸ್ಕಾರ ಕಾರ್ಯ ಮುಗಿಸಿಕೊಂಡು ವಾಪಾಸ್ ಮನೆಗೆ ಸಂಜೆ 05-00 ವೇಳೆಗೆ ತಾಯಿ ಮಗ ಬಂದಿದ್ದಾರೆ. ಮನೆಗೆ ಬಂದಾಗ ಚಂದ್ರಶೇಖರ್ ಕಾಣದೇ ಇದ್ದಾಗ ಮೂರು ನಾಲ್ಕು ಬಾರಿ ಅವರ ಹೆಸರು ಕರೆದಿದ್ದಾರೆ.

ಯಾವುದೇ ಮಾತು ಕೇಳಿ ಬಾರದ ಹಿನ್ನಲೆಯಲ್ಲಿ ಬೆಡ್ ರೂಂ ಬಾಗಿಲು ಹಾಕಿದ್ದರಿಂದ ಬಾಗಿಲು ತೆಗೆದು ನೋಡಿದಾಗ ನನ್ನ ಗಂಡ ಬೆಡ್ ರೂಂ ನ ಮೇಲಾವಣಿಯ ಕಬ್ಬಿಣದ ಹುಕ್ ಗೆ ಸೀರೆಯಿಂದ ನೇಣು ಹಾಕಿಕೊಂಡಿದ್ದರು.

ತಕ್ಷಣ ಕವಿತ ಹಾಗೂ ಮಗ ನೋಡಿದ್ದು ದೇಹವೆಲ್ಲಾ ತಣ್ಣಾಗಾಗಿತ್ತು. ಏನು ಮಾಡಬೇಕೆಂದು ತಿಳಿಯದೇ ತಾಯಿ ಮಗ ತಕ್ಷಣವೇ ಸಹೋದರ ಚೇತನ್ ಕುಮಾರ್ ರವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕವಿತರವರ ಸಹೋದರ ತಕ್ಷಣ ಬಂದು ನೋಡಿದ್ದು, ಭಾವ ಚಂದ್ರಶೇಖರ್ ಉಸಿರಾಡುತ್ತಿರಲಿಲ್ಲ.

ದೇಹವೆಲ್ಲ ತಣ್ಣಗಾಗಿದ್ದು ಮೃತ ಪಟ್ಟಿರುತ್ತಾರೆಂದು ದೃಢಪಟ್ಟಿದೆ. ಪತಿ ಚಂದ್ರಶೇಖರ್ ಕರ್ತವ್ಯದ ಒತ್ತಡಲಿಯೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ನೇಣು ಹಾಕಿಕೊಂಡು ಮೃತಪಟ್ಟಿರಬಹುದೇ ವಿನಾಃ ಬೇರೆ ಯಾವುದೇ ಅನುಮಾನವಿದ್ದಿಲ್ಲ. ಆದ್ದರಿಂದ ನನ್ನ ಗಂಡ ಚಂದ್ರಶೇಖರ್ ರವರ ಮೃತ ದೇಹದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಂಡು ಶವ ಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ ಅಂತ ದೂರು ನೀಡಿದ್ದರು.

ಮೇ 26 ರಂದು ರಾತ್ರಿ ಸುಮಾರು 09-00 ಗಂಟೆ ಸಮಯದಲಿ ಚಂದ್ರಶೇಖರ ರವರ ಮೃತದೇಹದ ವೈದ್ಯಕೀಯ ಮರಣೋತ್ತರ ಪರೀಕ್ಷೆಯಾದ ನಂತರ ಮೃತ ದೇಹವನ್ನು ನಮ್ಮ ವಶಕ್ಕೆ ಪಡೆದುಕೊಂಡು ಮೆಗ್ರಾನ್ ಆಸ್ಪತ್ರೆಯಿಂದ ಮನೆಗೆ ತಂದ ನಂತರ ರಾತ್ರಿ ಸುಮಾರು 10-45 ಗಂಟೆ ಸಮಯದಲಿ.. ಮನೆಯ ಹಾಲ್ ನಲ್ಲಿರುವ ಟಿ.ವಿ ಸ್ಟ್ಯಾಂಡ್ ಹಿಂಭಾಗದಲ್ಲಿ.. ಒಂದು ನೋಟ್ ಬುಕ್ ಕಂಡು ಬಂದಿತ್ತು.

ಅದನ್ನು ನಾನು ತೆಗೆದು ನೋಡಿದಾಗ ಅದರಲ್ಲಿ. ಚಂದ್ರಶೇಖರ್ ಅವರ ಮರಣ ಹೇಳಿಕೆ ಪತ್ತೆಯಾಗಿದೆ. ಮರಣ ಹೇಳಿಕೆಯಲ್ಲಿ ಚಂದ್ರಶೇಖರ್ ಪಿ. ಆದ ನಾನು ಈ ದಿನ ಸ್ವ ಇಚ್ಛೆಯಿಂದ ನೇಣು ಬಿಗಿದುಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಕಾರಣರಾದವರ ಪಟ್ಟಿ ಈ ಕೆಳಗಿನಂತಿದೆ ಎಂದು ನಮೂದಿಸಲಾಗಿದೆ.

1. ಶ್ರೀ ಜೆಜಿ ಪದ್ಮನಾಭ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನಿಯಮಿತ, ಖಾದಿ ಭವನ, ವಸಂತನಗರ, ಬೆಂಗಳೂರು, 2. ಪರಶುರಾಮ ಗ ದುರಗಣ್ಯ ವರ, ಲೆಕ್ಕಾಧಿಕಾರಿಗಳು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ಖಾದಿ ಭವನ, ವಸಂತನಗರ, ಬೆಂಗಳೂರು. 3. ಶ್ರೀಮತಿ ಶುಚಿಸ್ಮೃತಾ ರವುಲ್. ಮುಖ್ಯ ವ್ಯವಸ್ಥಾಪಕರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ. ಎಂ.ಜಿ ರಸ್ತೆ ಶಾಖೆ ಬೆಂಗಳೂರುರವರುಗಳು ಕಾರಣರಾಗಿರುತ್ತಾರೆ ಎಂದು ಉಲ್ಲೇಖವಾಗಿದೆ.

ಹಾಗೂ ನಿಗಮದ ಪರಿಶಿಷ್ಟ ಪಂಗಡಗಳ ಅನುದಾನ ರೂ. 80 ರಿಂದ 85 ಕೋಟಿಗಳು ಅನ್ಯಾಯವಾಗಿ ನಿಯಮ ಬಾಹಿರವಾಗಿ ಲೂಟಿ ಮಾಡಿರುವುದು ಕಂಡುಬರುತ್ತದೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖವಾಗಿರುವುದಾಗಿ ಪತ್ನಿ ಕವಿತ ದೂರಿನಲ್ಲಿ ದಾಖಲಿಸಿದ್ದಾರೆ. ಪತಿ ಚಂದ್ರಶೇಖರ್‌ರವರಿಗೆ ಕರ್ತವ್ಯದಲ್ಲಿ ಒತ್ತಡ ಹೇರಿ ಅವರ ಸಾವಿಗೆ ಕಾರಣರಾದ 1] ಜೆ.ಜಿ ಪದ್ಮನಾಭ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ಖಾದಿ ಭವನ, ವಸಂತನಗರ, ಬೆಂಗಳೂರು-21,

ಪರಶುರಾಮ ದುಗ್ಗಣ್ಣನವರ ಲೆಕ್ಕಾಧಿಕಾರಿಗಳು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ಖಾದಿ
ಭವನ, ವಸಂತನಗರ, ಬೆಂಗಳೂರು, 3] ಶ್ರೀಮತಿ ಶುಚಿಸ್ಮಿತಾರವುಲ್ ಮುಖ್ಯ ವ್ಯವಸ್ಥಾಪಕರು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಂ.ಜಿ
ರಸ್ತೆ ಶಾಖೆ ಬೆಂಗಳೂರುರವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕವಿತ ದೂರಿನಲ್ಲಿ ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/15640

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close