ಕಾಂಗ್ರೆಸ್ ಗೂ ಕ್ರೈಂಗೂ ನಂಟಿದೆ-ಆರಗ ಜ್ಞಾನೇಂದ್ರ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ನ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ದಿಕ್ಕಾಪಾಲಾಗಿ ಹೋಗಿದೆ. ಜನರ ಪ್ರಾಣಕ್ಕೆ ಬೆಲೆಯೆ ಇಲ್ಲ ಎಂಬುದನ್ನು ನೋಡುತ್ತಿದ್ದವೆ. ಪೊಲೀಸರಿಗೆ ರಕ್ಷಣೆ ಇಲ್ಲದಂತೆ ಆಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೊಲೀಸರನ್ನು ಬಳಸಿಕೊಳ್ಳುವ ಕೆಲಸ ನಡೆಯುತ್ತಿದೆ. ಚನ್ನಗಿರಿಯಲ್ಲಿ ನಡೆದ ಪ್ರಕರಣ ದಿಗ್ಬ್ರಮೆಗೆ ಒಳಗಾಗುಸಿತ್ತದೆ. ಇವರು ಈರೀತಿ ಮಾಡುವುದನ್ನು ನೋಡಿದರೆ ಸರ್ಕಾರ ಹಾಗೂ ಪೊಲೀಸರ ಮೇಲೆ ಭಯ ಇಲ್ಲದಂತಾಗಿದೆ.

ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣ, ಹುಬ್ಬಳ್ಳಿ ಪ್ರಕರಣ ಗಳಲ್ಲಿ ಡಿಸಿಎಂ ಆದವರು ಅವರು ಅಮಾಯಕರು ಎಂದು ಲೆಟರ್ ಕೊಟ್ರೆ ಇನ್ನೇನು ಅಗುತ್ತದೆ. ವಿಧಾನಸೌಧದಲ್ಲಿ ಪಾಕಿಸ್ತಾನದ ಬಗ್ಗೆ ಘೋಷಣೆ, ನಿನ್ನೆ ಕೊಪ್ಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪಾಕಿಸ್ತಾನದ ಪರ ಪೋಸ್ಟ್ ಹಾಕಿದರು ಏನು ಆಗದಂತೆ ಇರುತ್ತಾರೆ ಎಂದು ದೂರಿದರು.

ಇವರು ಯಾರನ್ನು ರಕ್ಷಣೆ ಮಾಡಲು ಹೊರಟ್ಟಿದ್ದಾರೆ? ಎಂದು ಪ್ರಶ್ನಿಸಿರುವ ಮಾಜಿ ಸಚಿವರು, ಹುಬ್ಬಳ್ಳಿ ನೇಹಗೆ ಚೂರಿಹಾಕಿದ ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಇದು ಲವ್ ಪ್ರಕರಣ ಎಂದು ಗೃಹ ಸಚಿವರು ಹೇಳುತ್ತಾರೆ.

ಯಾದಗಿರಿ ದಲಿತನ ಹತ್ಯೆ ಆಯಿತು. ಇಂದು ಕ್ರೈಂ ರೇಟ್ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಆಂದ್ರದಿಂದ ರೇವ್ ಪಾರ್ಟಿ ಗೆ ಕರ್ನಾಟಕಕ್ಕೆ ಬರ್ತಾರೆ. ಕರ್ನಾಟಕ ಇದಕ್ಕೆ ಸೇಫೆಸ್ಟ್ ಅಂತ ಇಲ್ಲಿಗೆ ಬರ್ತಾರೆ. ಲೋಕಲ್ ಪೊಲೀಸ್ ಮೊದಲು ಹೋಗುವುದಿಲ್ಲ. ಅವರಿಗೆ ಮಾಮೂಲಿ ಕೊಟ್ಟೆ ಈ ಪಾರ್ಟಿ ಮಾಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ತುಷ್ಠಿಕರಣರದ ರಾಜಕಾರಣದಿಂದ ಸರ್ವಜನಾಂಗದ ಶಾಂತಿಯ ತೋಟವಾಗಿ ಕರ್ನಾಟಕ ಇಂದು ಉಳಿದಿಲ್ಲ. ಇದರ ಜೊತೆ ನಕ್ಸಲ್ ಚಟುವಟಿಕೆಗಳು ಕಂಡುಬರುತ್ತಿದೆ. ಕ್ರೈಂಗೂ ಕಾಂಗ್ರೆಸ್ ಗೂ ಬಾಂಧವ್ಯ ಇದೆ ಅನಿಸುತ್ತದೆ. ಇದರಿಂದ ಜನರ ನೆಮ್ಮದಿ ಹಾಳುಆಗುತ್ತಿದೆ ಎಂದು ಆರೋಪಿಸಿದರು.

ಈ ರೀತಿ ಕ್ರೈಮ್ ರೇಟ್ ಹೆಚ್ಚಾಗುತ್ತಿರುವುದನ್ನು ನೋಡಿದರೆ, ಬ್ರಾಂಡ್ ಬೆಂಗಳೂರಿಗೆ ಘನತೆಗೆ ಧಕ್ಕೆ ಬರುತ್ತದೆ. ಪೊಲೀಸರ ಮಾನಸಿಕತೆಯು ಬದಲಾವಣೆ ಆಗಿದೆ. ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್ ಆದ  ಮೊದಲನೇ ದಿನ ತಲ್ವಾರ್ ಹಿಡಿದು ಓಡಾಡುತ್ತಾರೆ‌. ಇದರ ಬಗ್ಗೆ ಅವರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದರು.

ಮಾರನೇ ದಿನ ಮೂರು ಕೊಲೆಗಳು ಆಗುತ್ತದೆ. ಇಂದು ಬಿಜೆಪಿ ಕಾರ್ಯಕರ್ತರ ಮೇಲೆ ರೌಡಿ ಶೀಟ್ ಓಪನ್ ಮಾಡುವಂತೆ ಪೊಲೀಸರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದನ್ನು ಸರಿಪಡಿದೇ ಇದ್ದರೆ ಬಿಜೆಪಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಬೇಗ ಸರಿಪಡಿದಸದೇ ಇದ್ದರೆ ನಾವು ಜನರ ಹತ್ತಿರ ಹೋಗುತ್ತೇವೆ ಎಂದು ಎಚ್ಚರಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಪ್ರಕರಣ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಾವು ಖಂಡಿದಿಸಿದ್ದೇವೆ. ಏಪ್ರಿಲ್ 21 ತಾರೀಖು ಗೊತ್ತಾಗಿದೆ. 27 ಕ್ಕೆ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗುತ್ತಾನೆ. ಸಿಎಂ ಪತ್ರ ಬರೆಯುದಲ್ಲ, ಅದಕ್ಕೆ ಒಂದು ಪದ್ಧತಿ ಇದೆ. ರೇವಣ್ಣ ಪ್ರಕರಣವನ್ನು ನಾವು ಸಮರ್ಥನೆ ಮಾಡಿಲ್ಲ ಎಂದರು.

ಕಾಂಗ್ರೆಸ್ ಯಾವುದೇ ಕಾಳಜಿ ತೋರಲಿಲ್ಲ, ಬರಿ ರಾಜಕೀಯಕ್ಕೆ ಬಳಸಿಕೊಂಡಿದೆ. ಶಿವಮೊಗ್ಗ ಒಂದು ಕಾಲದಲ್ಲಿ ರೌಡಿಗಳ ಬ್ರೀಡಿಂಗ್ ಸೆಂಟರ್ ಆಗಿತ್ತು. ನಾವು ತಕ್ಷಣ ಕಂಟ್ರೋಲ್ ಮಾಡಿದ್ವಿ. ಮಂಗಳೂರು ನಲ್ಲಿ ನಡೆದ ಪ್ರಕರಣದಲ್ಲಿ ಸಿಕ್ಕವರನ್ನು ಲಕ್ಷಾಂತರ ಬದುಕಿಸಿ ಉಳಿದವೆನಲ್ಲ ಹೊರ ತೆಗೆದಿದ್ದೇವೆ.

ನೇಹಾ ಮನೆಗೆ ನಮ್ಮ ನಾಯಕರು ಎಲ್ಲರೂ ಹೋಗಿ ಬಂದಿದ್ದಾರೆ.

ಇದನ್ನೂ ಓದಿ-https://suddilive.in/archives/15483

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close