ಮೃತ ಚಂದ್ರಶೇಖರ್ ಮನೆಗೆ ಸಚಿವ ಮಧು ಬಂಗಾರಪ್ಪ ಬೇಟಿ, ಧೈರ್ಯತುಂಬಿದ ಸಚಿವರು

ಸುದ್ದಿಲೈವ್/ಶಿವಮೊಗ್ಗ

ಸಚಿವ ಮಧುಬಂಗಾರಪ್ಪ ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಟೆಂಟ್  ಚಂದ್ರಶೇಖರ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಎದುರು ಮೃತನ ಪತ್ನಿ ಕವಿತ ಸಚಿವರ ಎದುರು ನೋವು ತೋಡಿಕೊಂಡಿದ್ದಾರೆ.

ಬರೋ 12 ಸಾವಿರದಲ್ಲಿ ಹೇಗೆ ಜೀವನ‌ ಸಾಗಿಸಲಿ ಎಂದು  ಪತ್ನಿ ಅಳಲು ತೋಡಿಕೊಂಡಿದ್ದಾರೆ. ಮೂಲ ಆಧಾರವಾಗಿದ್ದ ಮನೆಯವರು ಇವತ್ತು ಇಲ್ಲ. ಗಂಡನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ನೋವು ತೋಡಿಕೊಂಡದ್ದಾರೆ.

ಮಕ್ಕಳ ಬಗ್ಗೆ ಚಿಂತೆ ಬೇಡ ನಾವು ನಿಮ್ಮ ಜೊತೆಗಿದ್ದೇವೆ. ನ್ಯಾಯ ಕೊಡಿಸಲು ನಾವು ನಿಮ್ಮ ಜೊತೆ ಇದ್ದೇವೆ. ವಿಶ್ವಾಸ ಇಟ್ಟುಕೊಳ್ಳಿ ಸರ್ಕಾರ ನಿಮ್ಮ ಜೊತೆ ಇದೆ. ಮುಖ್ಯಮಂತ್ರಿಗಳು ಕಳಿಸಿದ್ದಾರೆ ಹಾಗಾಗಿ ಬಂದಿದ್ದೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಗ್ಯಾರಂಟಿ ಕೊಡುತ್ತೇವೆ ಸರ್ಕಾರ ನಿಮಗೆ ನ್ಯಾಯ ಕೊಡಿಸುತ್ತೇ ಎಂದು ಕುಟುಂಬಸ್ಥರಿಗೆ ಸಚಿವ ಮಧು ಬಂಗಾರಪ್ಪ ಧೈರ್ಯ ತುಂಬಿದ್ದಾರೆ. ನಂತರ ಮಾಧ್ಯಮಗಳಿಗೆ ಮಾತನಾಡಿದ ಸಚಿವರು, ಚಂದ್ರಶೇಖರ್ ಅವರ ನಿವಾಸಕ್ಕೆ ಭೇಟಿ‌ ನೀಡಿದ್ದೆಮುಖ್ಯಮಂತ್ರಿ ಅವರು ಭೇಟಿ ನೀಡಲು ಸೂಚನೆ ನೀಡಿದ್ದರು. ಹಾಗಾಗಿ ಭೇಟಿ ನೀಡಿದ್ದೇನೆ ಎಂದಿದ್ದಾರೆ.

ಸರಕಾರ ಯಾವ ರೀತಿಯ ಸಹಾಯ ಮಾಡಬೇಕೋ ಅದನ್ನು ಮಾಡ್ತೇವೆ. ನ್ಯಾಯ ಕೊಡುವ ಕೆಲಸ ಮಾಡ್ತೇವೆ. ಸರಕಾರದ ವತಿಯಿಂದ ಏನು ಸಹಕಾರ ಮಾಡಬೇಕೋ ಮಾಡ್ತೇವೆ. ನನ್ನ ಕಡೆಯಿಂದ ಏನು ಕೆಲಸ ಮಾಡಬೇಕೋ ಅದನ್ನು ಮಾಡ್ತೇನೆ. ಇಂತಹ ಘಟನೆ ಆಗಬಾರದು. ತನಿಖೆ ನಡೆಯುತ್ತಿದೆ ತನಿಖೆ ನಡೆಯಲಿ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಎಂದರು.

ಸಂಬಂಧಪಟ್ಟ ಸಚಿವರ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ. ವೈಯಕ್ತಿಕ ಸಹಾಯ ಮಾಡುವ ಬಗ್ಗೆ ಯೋಚನೆ ಮಾಡ್ತೇನೆ. ಸಾವನ್ನು ರಾಜಕೀಯವಾಗಿ ಬಳಸೋದು ಸರಿಯಲ್ಲ. ಭ್ರಷ್ಟಾಚಾರ ಕಡಿಮೆಯಾಗಿದೆ. ಮಾತು ಎತ್ತಿದರೇ ಭ್ರಷ್ಟಾಚಾರ ನಡೆಯುತ್ತಿದೆ, ರಾಜೀನಾಮೆ ಕೊಡಿ ಎನ್ನುವುದು ಸರಿಯಲ್ಲ. ವಿಪಕ್ಷದವರು ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ ಎಂದು ಸಚಿವರು ಗುಡುಗಿದರು.

ಇದನ್ನೂ ಓದಿ-https://suddilive.in/archives/15730

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket