ಏನಿದು ಡ್ರೈ ಡೇ ಬೋರ್ಡ್?

ಸುದ್ದಿಲೈವ್/ಶಿವಮೊಗ್ಗ

ಪರಿಷತ್ ಚುನಾವಣೆ ಬೆನ್ನಲ್ಲೇ ಲೋಕಸಭಾ ಚುನಾವಣೆ ಫಲಿತಾಂಶ ಹೋರಬೀಳುವ ಸಂಬಂಧ ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ.

ಸೆಕ್ಷನ್ ಜಾರಿ, ಮದ್ಯ ಮಾರಾಟ ನಿಷೇಧ ಮಾಡಿದೆ. ಇಂದು ಸಂಜೆ 4 ಗಂಟೆಯಿಂದಲೇ ಮದ್ಯ ಮಾರಾಟಕ್ಕೆ ಬೀಗಮುದ್ರೆ ಬೀಳಲಿದೆ. ಇಂದು ಸಂಜೆ 4 ಗಂಟೆಗೆ  ಮದ್ಯ ಮಾರಾಟ ನಿಷೇಧಕ್ಕೊಳಪಡಲಿದೆ.

ಇಂದು4 ಗಂಟೆಗೆ ಮದ್ಯ ಮಾರಾಟ ಬಂದ್ ಆದರೆ ಜೂನ್3 ರಂದು 4 ಗಂಟೆಗೆ ಮದ್ಯ ಮಾರಾಟ ಮಳಿಗೆಗಳು ಪುನರ್ ಆರಂಭವಾಗಲಿದೆ.‌ನಂತರ ಮರುದಿನ ಬೆಳಗ್ಗಿನ ಜಾವ ಅಂದ್ರೆಜೂ.4 ರಂದು ಸಂಪೂರ್ಣ ಬಂದ್ ಆಗಲಿದೆ.

ಹೀಗೆ ಮದ್ಯದ ಅಂಗಡಿಗಳ ಮುಂದೆ ಡ್ರೈ ಡೇ ಎಂಬ  ಬೋರ್ಡ್ ಸಹ ತೂಗು ಹಾಕಿ  ಅಂಗಡಿ ಯಾವಾಗ ಬಂದ್ ಯಾವಾಗ ಆರಂಭ ಎಂದು ಮಾಹಿತಿ ನೀಡಲಾಗಿದೆ.  ನಿನ್ನೆ ರಾತ್ರಿಯಿಂದಲೇ ಕೆಲ ಪ್ರಮುಖ ಮದ್ಯ ಮಾರಾಟ ಮಳಿಗೆಯಲ್ಲಿ ಜನ ಹೆಚ್ಚಾಗಿ ಕಂಡು ಬಂದ ದೃಶ್ಯಗಳು ಲಭ್ಯವಾಗಿದೆ.

ಇದನ್ನೂ ಓದಿ-https://suddilive.in/archives/15942

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close