Girl in a jacket

ಮಳೆಯ ಅಬ್ಬರಕ್ಕೆ ಐದು ದಿನಗಳಲ್ಲಿ 6 ಮನೆ ಹಾನಿ

ಸುದ್ದಿಲೈವ್/ಶಿವಮೊಗ್ಗ

ಕಳೆದ 10 ದಿನಗಳಿಂದ ಶಿವಮೊಗ್ಗದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು.‌ ಇದರಲ್ಲಿ ಕಳೆದ ಒಂದು ವಾರದಿಂದ ಅಕಾಲಿಕ ಮಳೆಯಿಂದಾಗಿ ಶಿವಮೊಗ್ಗದಲ್ಲಿ 259 ಮನೆಗಳಿಗೆ ಜಲಾವೃತಗೊಂಡಿತ್ತು.

ಈಗ ಕೆಲ ಮನೆಗಳು ನಗರದಲ್ಲಿ ಹಾನಿಗೊಳಗಾಗಿದೆ. ಮೇ.20 ರಿಂದ ಮೇ 25 ರ ವರೆಗೆ ತಾಲೂಕಿನಲ್ಲಿ ಮಳೆಗೆ ಹಾನಿಗೊಳಗಾಗಿವೆ.

ಕಸಬ 2 ನೇ ಹೋಬಳಿಗೆ ಸಂಬಂಧಿಸಿದಂತೆ
ಕಾಶಿಪುರ ಗೊಂದಿಚಟ್ನಹಳ್ಳಿ ಗ್ರಾಮದಲ್ಲಿ ಒಟ್ಟು 09 ಮನೆಗಳಿಗೆ ನೀರು ನುಗ್ಗಿರುತ್ತದೆ
ಮನೆ ಹಾಗು ಬೆಳೆ ಹಾನಿಯಾಗಿರುವುದಿಲ್ಲ

ಕಸಬಾ ಒಂದನೇ ಹೋಬಳಿಯ ಶಿವಮೊಗ್ಗ ನಗರದ ಆರ್ ಎಂ ಎಲ್ ನಗರ ಮತ್ತು ಬಾಪೂಜಿನಗರದ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುತ್ತದೆ. ಯಾವುದೇ ಬೆಳೆ ಮತ್ತು ಪ್ರಾಣ ಹಾನಿ ಆಗಿರುವುದಿಲ್ಲ

ನಿದಿಗೆ 1 ನೇ ಹೋಬಳಿ ವ್ಯಾಪ್ತಿಯ ಸಿದ್ದೇಶ್ವರ ನಗರ ಕ್ರಾಸ್ 01, 02 ಮತ್ತು 03ರಲ್ಲಿ ಮಳೆಯಿಂದಾಗಿ ನೀರು ನಿಂತಿರುವುದು ಹಾಗೂ ಮನೆ ಒಳಗೆ ನೀರು ನುಗ್ಗಿರುತ್ತದೆ. ಇದರಿಂದ ಸುಮಾರು 15 ಮನೆಗಳಲ್ಲಿ ನೀರು ನುಗ್ಗಿರುತ್ತದೆ. ಹಾಗೂ ಮೂರನೇ ಮುಖ್ಯರಸ್ತೆ ಮೂರನೇ ಅಡ್ಡರಸ್ತೆ ಇಲ್ಲಿ ಸಹ ಸುಮಾರು 35 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುತ್ತದೆ.

ಸಿದ್ದೇಶ್ವರ ನಗರ ಕ್ರಾಸ್ 01, 02 ಮತ್ತು 03ರಲ್ಲಿ ಅತಿಯಾಗಿ ಮಳೆಯಿಂದಾಗಿ ನೀರು ನಿಂತಿರುವುದು ಹಾಗೂ ಮನೆ ಒಳಗೆ ನೀರು ನುಗ್ಗಿರುತ್ತದೆ. ಇದರಿಂದ ಸುಮಾರು 15 ಮನೆಗಳಲ್ಲಿ ನೀರು ನುಗ್ಗಿರುತ್ತದೆ. ಹಾಗೂ ಮೂರನೇ ಮುಖ್ಯರಸ್ತೆ ಮೂರನೇ ಅಡ್ಡರಸ್ತೆ ಇದು ಮೇಯರ್ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸಹ ಸುಮಾರು 35 ಮನೆಗಳಿಗೆ ನೀರು ನುಗ್ಗಿದೆ ಹಾನಿಯಾಗಿರುತ್ತದೆ.

ವಿದ್ಯಾನಗರದಲ್ಲಿ ನಾಗಮ್ಮ, ಕುಂಸಿಯ ಚಿಕ್ಕದಾವನಂದಿಯ ಭೀಮಾಜಿ ರಾವ್ ಮನೆ,  ಬಿಕ್ಕೋನಹಳ್ಳಿಯ ಕನ್ನಮ್ಮ ರಂಬುವ‌ಮನೆ, ಶಿವಮೊಗ್ಗದ ಜೆಪಿ ನಗರದ ಬಲಭಾಗದ ಚಂದ್ರ ಕಲಾ ಎಂಬುವರ ಮನೆ ಸೇರಿ 6 ಮನೆಗಳು ಭಾಗಶಃ ಹಾನಿಯಾಗಿವೆ.

ಇದನ್ನೂ ಓದಿ-https://suddilive.in/archives/15516

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close