ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ-ಇಬ್ಬರು ಅಧಿಕಾರಿಗಳು ಅಮಾನತು-6 ಜನರ ವಿರುದ್ಧ ಎಫ್ಐಆರ್

ಸುದ್ದಿಲೈವ್/ಬೆಂಗಳೂರು

ವಾಲ್ಮೀಕಿ ಅಭುವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರ್.ಪಿ ಅವರು ಶಿವಮೊಗ್ಗದ ಸ್ವಗೃಹದಲ್ಲಿ ಡೆತ್ ನೋಟ್ ಬರೆದು ನಿಗಮದ ಇಬ್ಬರು ಅಧಿಕಾರಿಗಳ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಅಮಾನತುಗೊಂಡಿದ್ದಾರೆ.

ಜೊತೆಗೆ ನಿಗಮದ‌ ಹಣವನ್ನ ದುರ್ಬಳಕೆ ಮಾಡಿಕೊಂಡ ಯೂನಿಯನ್ ಬ್ಯಾಂಕ್ ಅಧಿಕಾರಿಗಳ 6 ಜನ ಅಧಿಕಾರಿಗಳ ವಿರುದ್ಧ ನಿಗಮದ ಪ್ರಧಾನ ವ್ಯವಸ್ಥಾಪಕರು ದೂರು ದಾಖಲಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಠಾಚಾರದ ಬಗ್ಗೆ ಬೇಸತ್ತು ಡೆತ್ ನೋಟ್ ಬರೆದು ನಿಗಮದ ಅಧೀಕ್ಷಕ ಚಂದ್ರಶೇಖರ್. ಪಿ ಶನಿವಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ನಿಗಮದ ವ್ಯವಸ್ಥಾಪಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್ ದುಗ್ಗಣ್ಣನವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರು.

ಈ ಪ್ರಕರಣದಲ್ಲಿ ಪದ್ಮನಾಭ್ ಮತ್ತು ಪರಶುರಾಮ್ ಇಬ್ಬರನ್ನೂ ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ. ಅದರ ಬೆನ್ನಲ್ಲೇ  ನಿನ್ನೆ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಯೂನಿಯನ್‌ಬ್ಯಾಂಕ್ ನ ಆಡಳಿತ ಅಧಿಕಾರಿಗಳ 6 ಜನರ ವಿರುದ್ಧ ನಿರ್ಲಕ್ಷ, ಹಣದ ದುರುಪಯೋಗ ವಿರುದ್ಧ ದೂರು ದಾಖಲಿಸಿದ್ದಾರೆ.

ಯೂನಿಯನ್‌ ಬ್ಯಾಂಕ್ ನ ವಸಂತ ನಗರ ಶಾಖೆಯ ಬ್ಯಾಂಕ್ ಖಾತೆ ನಂಬರ್ ಇದ್ದರೂ ಎಂಜಿ‌ ರಸ್ತೆಯ ಬ್ಯಾಂಕ್ ಶಾಖೆಯಲ್ಲಿ ನಿಗಮದ ಖಾತೆ ಒಪನ್ ಮಾಡಿ 187.33 ಕೋಟಿ ಹಣ ವರ್ಗಾವಣೆಯಾಗಿದೆ. ನಿಗಮದ ವ್ಯವಸ್ಥಾಪಕರ ಮತ್ತು ಲೆಕ್ಕಾಧಿಕಾರಿಗಳ ಸಹಿಯನ್ನ ಬ್ಯಾಂಕ್ ಪಡೆದುಕೊಂಡು ಹೋಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಿಗಮದ ಪಾಸ್ ಬುಕ್, ಚೆಕ್ ಬುಕ್ ಮಕೇಳಿದಾಗ ನಿಗಮಕ್ಕೆ ಕಳುಹಿಸಿರುವುದಾಗಿ ತಿಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಖಾತೆಯಲ್ಲಿ ಆರ್ ಟಿ ಜಿಎಸ್, ಬೋರ್ಡ್ ರೆಸೂಲೇಷನ್ ಜೊತೆಗೆ ಕಾನೂನು ಬಾಹಿರವಾಗಿ 94,73,08,500 ರೂ. ಹಣ ವರ್ಗಾವಣೆಯಾಹಿರುವುದಾಗಿ ರಾಜಶೇಖರ್ ದೂರಿದ್ದಾರೆ.

ಸಿಸಿ ಟಿವಿ ಫೂಟೇಜ್ ಕೇಳಿದರೂ ನೀಡದ ಬ್ಯಾಂಕ್ ನವರ ಡೆಪೂಟಿ‌ಜನರಲ್ ಮ್ಯಾನೇಜರ್ ಗೆ ಪತ್ರ ಬರೆದು‌ ಎಲ್ಲಾ ಠೇವಣಿಯ ಹಣವನ್ನ ಮರುಕಳಿಸುವಂತೆ ಪತ್ರಬರೆದರೂ ಯಾವುದೇ ಉತ್ತರ ಬಂದಿಲ್ಲ. ಈ ಅಧೀಕ್ಷಕ ಚಂದ್ರಶೇಖರ್ ಹಣ ದುರುಪಯೋಗವನ್ನ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಣ ದುರುಪಯೋಗ ಮಾಡಿಕೊಂಡ ಬ್ಯಾಂಕ್ ನ ಸಿಇಒ ಶ್ರೀಮತಿ ಮನಿಮಾಖಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮಸುಬ್ರಹ್ಮಣ್ಯಂ, ಸಂಜಯ್ ರುದ್ರ, ಪಂಕಜ್ ದ್ವಿವೇದಿ, ಚೀಫ್ ಮ್ಯಾನೇಜರ್ ಶುಚಿಸ್ಮಿತ ರೌಲ್ ಜವಬ್ದಾರಿ ಸ್ಥಾನದಲ್ಲಿದ್ದು ಓವರ್ ಡ್ರಾಫ್ಟ್ ಸೃಷ್ಠಿಸಿ ಬೇರೆ ಬೇರೆ ಖಾತೆಗಳಿಗೆ‌ಹಣ ವರ್ಗಾವಣೆ ಮಾಡಿ‌ ನಿಗಮಕ್ಕೆ ಆರ್ಥಿಕ ನಷ್ಟ ಉಂಟು  ಮಾಡಿರುವುದಾಗಿ ಎಫ್ ಐಆರ್ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/15749

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close