ಸುದ್ದಿಲೈವ್/ಶಿವಮೊಗ್ಗ
ಲೋಕಸಭಾ ಚುನಾವಣೆಯ ವೇಳೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿರುವ ಪ್ರಜ್ವಲ್ ರೇವಣ್ಣನ ಪ್ರಕರಣ ಕೊನೆಯ ಹಂತಕ್ಕೆ ಬಂದು ನಿಂತಿದೆ. ಮೇ31 ಕ್ಕೆ ಪ್ರಜ್ವಲ್ ದೇಶಕ್ಕೆ ವಾಪಾಸಾಗಿ ಎಸ್ಐಟಿ ಮುಂದೆ ನಿಲ್ಲುವುದಾಗಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಮೇ.30 ರಂದು ಹಾಸನ ಚಲೋ ಕಾರ್ಯಕ್ರಮವನ್ನ ಪ್ರಗತಿಪರ ಸಂಘಟನೆ ಹಮ್ಮಿಕೊಂಡಿದೆ.ಆತನನ್ನ ಸರ್ಕಾರ ಬಂಧಿಸದೆ ವಿಳಂಭಿಸುತ್ತಿರುವುದನ್ನ ಖಂಡಿಸಿ ಹಾಸನ ಚಲೋ ನಡೆಸಲಾಗುತ್ತಿದೆ ಎಙದು ವಕೀಲ ಶ್ರೀಪಾಲ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ರೈತ ಸಂಘ, ಮಹಿಳಾ ದೌರ್ಜನ್ಯ ವಿರೋಧಿ ಸಂಘಟನೆಗಳು, ಸೇರಿ ನೂರಾರು ಸಂಘಟನೆಯ ನೆತೃತ್ವದಲ್ಲಿ ಪ್ರತಿಭಟನೆ ನಡೆಸುವುದಾಗಿ ವಕೀಲ ಶ್ರೀಪಾಲ್ ತಿಳಿಸಿದರು.
ಕೆ.ಎಲ್ ಅಶೋಕ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಭಾರತದ ಮೊದಲ ವಿಷಯವಾಗಿ ಪ್ರಜ್ವಲ್ ರೇವಣ್ಣ ಸುದ್ದಿಮಾಡಿದೆ. ಮಾಸ್ ರೇಪ್ ಎಂದು ಕರೆಯೋಣವೆಂದರೆ ಮಾಸ್ ರೇಪ್ ಆಗಿಲ್ಲ, ದೌರ್ಜನ್ಯ ಎಂದು ಕರೆಯೋಣವೆಂದರೆ ದೌರ್ಜನ್ಯವೆನಿಸಿಕೊಳ್ಳುವಂತೆ ಈ ಪ್ರಕರಣ ಹೊರಹೊಮ್ಮಿದೆ.
ನಿನ್ನೆ ಪ್ರಜ್ವಲ್ ರೇವಣ್ಣ ವಿಡೊಯೋದಲ್ಲಿ ಮಾತನಾಡಿ, ದಾಷ್ಟ್ಯತನ ಮೆರೆದಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣವೊಂದೆ ಅಲ್ಲ, ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಮಹಿಳೆಯರ ಬಗ್ಗೆ ಪುರುಷರು ಸಮಾಜ ತಮ್ಮ ನಿಲುವನ್ನ ಬದಲಾಯಿಸಿ ಕೊಳ್ಳದಿದ್ಧರೆ ಮಹಿಳೆಯನ್ನ ರಾಜಕೀಯವಾಗಿ ನೋಡುವುದು ತಪ್ಪಬೇಕು ಎಂದರು.
ನಮ್ಮ ಕಾನೂನುಗಳು ಬಡವರ ಮಾತ್ರ ಪ್ರಯೋಗವಾಗುತ್ತಿದೆ. ಕಠಿಣವಾದ ಕಾನೂನು ಇದ್ದರೂ ಇನ್ನುಳಿದ ಅತ್ಯಾಚಾರದ ಪ್ರಕರಣದಲ್ಲಿ ಬೇರೆ ರೀತಿಯೇ ನಡೆದಿದೆ.
ಆದರೆ ಪ್ರಜ್ವಲ್ ರೇವಣ್ಣನಿಗೆ ಸರ್ಕಾರಗಳೇ ರಕ್ಷಣೆ ನೀಡುವಂತಾಗಿದೆ. ಹೈದ್ರಾಬಾದ್ ನಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯ ನಡೆದಾಗ ಎನ್ ಕೌಂಟರ್ ನಡೆದಿದೆ. ಆದರೆ ಇಲ್ಲಿ ಎಲ್ಲರೂ ಮೌನರಾಗಿದ್ದಾರೆ ಎಂದು ವಕೀಲ ಶ್ರೀಪಾಲ್ ಆರೋಪಿಸಿದರು.
ಇದನ್ನೂ ಓದಿ-https://suddilive.in/archives/15627