ಚುನಾವಣೆಯಲ್ಲಿ ರಾಘವೇಂದ್ರ 3 ಲಕ್ಷ ಅಂತರದ ಗೆಲುವು ನಿಶ್ಚಿತ-ಕೆಬಿಪಿ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯ ಚುನಾವಣೆ ಅತ್ಯಂತ ಯಶಸ್ವಿಯಾಗಿದೆ. ಅತಿದೊಡ್ಡ ಪ್ರಮಾಣದಲ್ಲಿ ಜನ‌ಬಂದು ಮತದಾನ ಹಾಕಿದ್ದಾರೆ. ಇದಕ್ಕೆ ಎಲ್ಲಾ ಪಕ್ಷದ‌ಕಾರ್ಯಕರ್ತರು ಕಾರಣ. ಮತದಾರರಿಗೆ ದೊಡ್ಡಪ್ರಮಾಣದಲ್ಲಿ ಮತದಾನ ಮಾಡಿದ್ದಕ್ಕೆ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನ ಕುಮಾರ್ ಧನ್ಯವಾದ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿದ ಅವರು ಈ ಮತದಾನ ಜೆಡಿಎಸ್ ಬೆಂಬಲಿತ ಅಭ್ಯರ್ಥಿ, ಬಿಜೆಪಿಯ ಸಂಸದ ರಾಘವೇಂದ್ರ 3 ಲಕ್ಷಕ್ಕೂ ಮೀರಿ ಗೆದ್ದು ಬರಲಿದ್ದಾರೆ. ಚುಬಾವಣೆ ಪೂರ್ವದಲ್ಲಿ ಅಂದಾಜಿನಲ್ಲಿ ಹೇಳ್ತಾ ಇದ್ವಿ, 3‌ಲಕ್ಷಕ್ಕೂ ಮೀರಿ ಮತ ದೊರೆಯಲಿದೆ ಎಂದರು.

ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿಗಳೆಲ್ಲ ಈ ಬಾರಿ ಗೆದ್ದುಬರಲಿದ್ದಾರೆ. ಗೊತ್ತಿರುವವರು ಮತ್ತು ಗೊತ್ತಿರದೆ ಇರುವವರು ಮತಚಲಾಯಿಸಿದ ಪ್ರಮಾಣದ ಮೇರೆಗೆ ಮತದಾನ ನ ಡೆಯಲಿದೆ ಎಂದರು.

ಕಾಂಗ್ರೆಸ್ ಸೋಲಿಗೆ ಕಾರಣ ಅವರ ನಡೆತೆ ಕಾರಣ, ಗ್ಯಾರೆಂಟಿ ಈ ಬಾರಿ ಮಹಿಳೆಯರು ಅಂದುಕೊಂಡಷ್ಟು ಮತವಾಗಿ ಪರಿಣಮಿಸುವುದಿಲ್ಲ. ಈಶ್ವರಪ್ಪನವರ ಸ್ಪರ್ಧೆ ಸ್ಪರ್ಧೆಗೆ ಸೀಮಿತವಾದಂತೆ ಭಾಸವಾಗುತ್ತಿತ್ತು. ಈಶ್ವರಪ್ಪನವರ ಶ್ರಮ ಇತ್ತು ಅದು ಎಷ್ಡರ ಮಟ್ಟಿಗೆ ಮತವಾಗಿ ಪರಿಣಮಿಸಿದೆ ಎಂಬುದು ಗೊತ್ತಾಗಲಿಲ್ಲ ಎಂದರು.

ನಾಳೆ ಜೆಡಿಎಸ್ ನ ಕೋರ್ ಕಮಿಟಿ ಸಭೆ ಇದೆ. ಮೈತ್ರಿ ಮುಂದುವರೆಕೆ ಆಗುವ ಬಗ್ಗೆ ನಾಳೆ ಸಭೆಯಲ್ಲಿ ಚರ್ಚೆ ನಡೆಯುವ ಬಗ್ಗೆ ನಾಹಿತಿ ಇಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನ ನಗರ ಅಧ್ಯಕ್ಷ ದೀಪಕ್ ಸಿಙಗ್ ಮತ್ತು ನರಸಿಂಹ ಗಂಧದ ಮನೆ, ತ್ಯಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ- https://suddilive.in/archives/14436

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close