Girl in a jacket

ಪೊಲೀಸರಿಂದ ಮುಂದುವರೆದ ವಿಶೇಷ ಗಸ್ತು-27 ಪಿಟಿಕೇಸ್ ದಾಖಲು

ಸುದ್ದಿಲೈವ್/ಶಿವಮೊಗ್ಗ

ಪೊಲೀಸರ ಕಾಲ್ನಡಿಗೆಯ ವಿಶೇಷ ಗಸ್ತು ಮುಂದುವರೆದಿದೆ. ಶಿವಮೊಗ್ಗ-ಎ, ಶಿವಮೊಗ್ಗ-ಬಿ, ಶಿಕಾರಿಪುರ, ಭದ್ರಾವತಿ, ಶಿರಾಳಕೊಪ್ಪ, ತೀರ್ಥಹಳ್ಳಿ, ಹೊಸನಗರದಲ್ಲಿ ವಿಶೇಷ ಗಸ್ತನ್ನ ಪೊಲೀಸರು ನಡೆಸಿದ್ದಾರೆ.‌

ಇಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಕೆ ಆರ್ ಪುರಂ ರಸ್ತೆ, ಎಂಕೆಕೆ ರಸ್ತೆ, ಮೆಹಬೂಬ್ ಗಲ್ಲಿ, ಓಟಿ ರಸ್ತೆ, ಕೋಟೆ ರಸ್ತೆ, ಸಿ ಎಲ್ ರಾಮಣ್ಣ ರಸ್ತೆ, ಗೋಪಾಳ ಗುಡ್ ಲಕ್ ವೃತ್ತ, ದೃಪದಮ್ಮ ವೃತ್ತ, ಸ್ವಾಮಿ ವಿವೇಕಾನಂದ ಬಡಾವಣೆ, ಆಲ್ಕೊಳ,

ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಸವಳಂಗ ರಸ್ತೆ, ಬಸವನ ಗುಡಿ, ರಾಜೇಂದ್ರ ನಗರ, ತಿಲಕ್ ನಗರ, ರೈಲ್ವೇ ನಿಲ್ದಾಣದ ಹತ್ತಿರ, 60 ಅಡಿ ಮತ್ತು 100 ಅಡಿ ರಸ್ತೆ ವಿನೋಬನಗರ, ಹರಿಗೆ, ಆಯನೂರು, ಸಾಗರ ಉಪ ವಿಭಾಗ ವ್ಯಾಪ್ತಿಯ ಶಿರವಂತೆ, ಕಾರ್ಗಲ್ ಟೌನ್,

ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ವಿಧ್ಯಾಮಂದಿರ, ತಮ್ಮಣ್ಣ ಕಾಲೋನಿ, ಹನುಂತನಗರ, ಪೇಪರ್ ಟೌನ್, ಹೊಳೆಹೊನ್ನೂರು ಟೌನ್, ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಶಿರಾಳಕೊಪ್ಪ ಟೌನ್, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಕೆಇಬಿ ವೃತ್ತ ಹೊಸನಗರ, ವಿನಾಯಕ ವೃತ್ತ ರಿಪ್ಪನ್ ಪೇಟೆಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು,

ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು (Foot Patrolling) ಮತ್ತು ಠಾಣಾ ವ್ಯಾಪ್ತಿಗಳ ಹೊರ ವಲಯಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 27 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/15531

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close