ಡಾ.ಸರ್ಜಿಗೆ ಟಿಕೇಟು, ಮತ್ತೋರ್ವರಿಂದ ಆಕ್ಷೇಪ-ಮೇ.20ರ ನಂತರ ನಿರ್ಧಾರ

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರದ ಧನಂಜಯ ಸರ್ಜಿಗೆ ಟಿಕೇಟ್ ಕೊಟ್ಟಿರುವುದನ್ನ ಬಿಜೆಪಿಯಲ್ಲಿ ಮತ್ತೊಂದು ಆಕ್ಷೇಪಣೆ ಹೊರಬಿದ್ದಿದೆ. ಬಿಜೆಪಿಯ ಬಂಡಾಯವಾಗಿ ರಘುಪತಿ ಭಟ್ಟರು ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ನಿನ್ನ ನಾಮಪತ್ರ ಸಲ್ಲಿಸಿದ್ದಾರೆ. ಅದರಂತೆ ಬಿಜೆಪಿ ಪಕ್ಷದಲ್ಲಿಯೇ ಮತ್ತೋರ್ವ ಆಕಾಂಕ್ಷಿ ವಿರೋಧಿಸಿದ್ದಾರೆ.

ಆದರೆ ಡಾ.ಧನಂಜಯ್ ಸರ್ಜಿ ಅವರ ವಿರುದ್ಧ ಅವರ ಕ್ಷೇತ್ರದ ಮತ್ತೋರ್ವ ಆಕಾಂಕ್ಷಿ ಹಾಗೂ ಬಿಜೆಪಿಯ ಕಾನೂನು ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಪ್ರವೀಣ್ ಇಂದು ಸುದ್ದಿಗೋಷ್ಠಿ ನಡೆಸಿ ಇತ್ತೀಚೆಗೆ ಪಕ್ಷಕ್ಜೆ ಬಙದವರಿಗೆ ಮಣೆಹಾಕಲಾಗಿರುವುದಾಗಿ ಆಕ್ಷೇಪಿಸಿದ್ದಾರೆ.

ಟಿಕೇಟ್ ಹಂಚಿಕೆಯಾದಮೇಲೆ ಡಾ.ಸರ್ಜಿ ಅವರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.‌ವಕೀಲರು ಎಂದರೆ ಬಿಜೆಪಿಗೆ ಬೇಡವಾಗಿದೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ದತ್ತಾತ್ರಿ, ಧರ್ಮಪ್ರಸಾದ್, ಗಿರೀಶ್ ಪಟೇಲ್ ಹಾಗೂ ನಾನು ಶಿವಮೊಗ್ಗದಿಂದ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದೆವು. ಯಾವ ಕಾರ್ಯಕರ್ತರನ್ನೂ ಪರಿಗಣಿಸದೆ ಡಾ.ಸರ್ಜಿಗೆ ಟಿಕೇಟ್  ನೀಡಲಾಗಿದೆ. ನಾವೆಲ್ಲಾ ಕನಿಷ್ಠ 15 ವರ್ಷ ಕೆಲಸ ಮಾಡಿದ್ದೇವೆ ಎಂದರು.‌

ಆಕಾಂಕ್ಷಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವೂ ಮಾಡದೆ ನಾಮಪತ್ರ ಸಲ್ಲಿಸಲಾಗಿದೆ. ಲಿಂಗಾಯಿತರೇ ಬೇಕಿದೆ ಎಂದಿದ್ದರೆ ನಾವು ಇದ್ದೇವೆ. 20 ವರ್ಷ ಕೆಲಸ ಮಾಡಿದ ಕಾರ್ಯಕರ್ತರನ್ನ ಈ ಪರಿಷತ್ ಚುನಾವಣೆಗೆ ಕಣಕ್ಕಿಳಿಸಬೇಕಿತ್ತು. ಆದರೆ ಆ ರೀತಿ ನಡೆಯಲಿಲ್ಲ ಎಂದರು.

ಸಂಘಟನೆ ಚೌಕಟ್ಟಿನಲ್ಲಿ ಇದ್ದರು. ಜಿಲ್ಲಾ ನಾಯಕರಿಗೆ ಹತ್ತಿರವಿದ್ದವರಿಗೆ ಟಿಕೇಟ್ ನೀಡಲಾಗಿದೆ. ಸಂಘಟಬೆ ವಿರುದ್ಧ ಹೋಗಲ್ಲ. ಆದರೆ ಮತ್ತೊಮ್ಮೆ ಹೀಗೆ ಆಗಬಾರದು ಎಙದು ಆಕ್ಷೇಪಿಸಲಾಗಿದೆ. ರಘುಪತಿ ಭಟ್ಟರಿಗೆ ಬೆಂಬಲಿಸಬೇಕೋ, ಅಥವಾ ಬೇಡವೋ ಎಂಬುದು ಮೇ.20 ರ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಅಂತಿಮ ಕಣದಲ್ಲಿ ಯಾರು ಉಳಿತಾರೆ ನೋಡಿ ಮಾತನಾಡುವುದಾಗಿ ತಿಳಿಸಿದರು.

ಹೆಂಡ, ಹಣ ಹಂಚಿ ಗೆದ್ದಿದ್ದ ಶಿಕ್ಷಕರ ಕ್ಷೇತ್ರದಾಭ್ಯರ್ಥಿಯನ್ನ ಎನ್ ಡಿಎ ಪರವಾಗಿ ಕಣಕ್ಕಿಳಿಸಲಾಗಿದೆ. ಈ ಅಭ್ಯರ್ಥಿಯ ವಿರುದ್ಧ ನಾವು ಇರುವುದಾಗಿ ಭೋಜೇಗೌಡರ ಸ್ಪರ್ಧೆಯನ್ನ ವಿರುಧಿಸಿದರು. ಕೆಲ ಕಾರ್ಯಕರ್ತರ ಧ್ವನಿಯಾಗಿ ಇಂದು ಸುದ್ದಿಗೋಷ್ಣಿ ನಡೆಸಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ದೇವೇಂದ್ರಪ್ಪ, ಮಹೀಂದ್ರ ಕುಮಾರ್,  ವಾಗೀಶ್ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/14900

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close