'ಅಂದು ಓಬವ್ವ ಇಂದು ಚೆನ್ನಮ್ಮ'-ತೊಂದರೆಗೊಳಗಾದವರು 112/9480803349/08182261413/9480800 ಸಂಪರ್ಕಿಸಬಹುದು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲೀಗ ಚೆನ್ನಮ್ಮ ಪಡೆ ಸದ್ದು ಮಾಡುತ್ತಿದೆ. ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವವರ ವಿರುದ್ಧ ಸಮರ ಸಾರಲಿರುವ ಈ ಚೆನ್ನಮ್ಮ ಪಡೆ ಈ ಹಿಂದೆ ಓಬವ್ವ ಪಡೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಚೆನ್ನವ್ವ ಪಡೆ ಆಗಿ ಗಮನ ಸೆಳೆಯಲಿದೆ.

ಶಿವಮೊಗ್ಗದಲ್ಲಿ ಕಿಡಿಗೇಡಿ ಕೃತ್ಯಗಳಿಗೆ ಕಡಿವಾಣ ಹಾಕಲೆಂದೇ ಈ ಚೆನ್ನಮ್ಮ ಪಡೆ ರೂಪಿಸಲಾಗಿದೆ. ಈ ಪಡೆಯಲ್ಲಿ ನುರಿತ ಮಹಿಳಾ ಪೊಲೀಸ್‌ ಸಿಬ್ಬಂದಿ ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡಲಿದೆ.

ಕರಾಟೆ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ತರಬೇತಿ ಪಡೆದಿರುವ ಒಟ್ಟು 12 ಸಿಬ್ಬಂದಿಗಳು ಈ ಚೆನ್ನಮ್ಮ ಪಡೆಯಲ್ಲಿದ್ದಾರೆ. ಪಿಎಸ್ ಐ, ಎಎಸ್ ಐ ಸೇರಿದಂತೆ ಮಹಿಳಾ ಪೊಲೀಸ್‌ ಸಿಬ್ಬಂದಿ ಚೆನ್ನಮ್ಮನ ಹೆಸರಲ್ಲಿ ಕೆಲಸ ಆರಂಭಿಸಿದ್ದಾರೆ.

ವಿಶೇಷವಾಗಿ ಶಾಲಾ ಕಾಲೇಜುಗಳು, ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ಚೆನ್ನಮ್ಮ ಪಡೆ ಕಾವಲಿಗೆ ನಿಲ್ಲಲಿದೆ. ಚುಡಾಯಿಸುವ, ಹಿಂಸಿಸುವ, ಹಿಂಬಾಲಿಸುವ, ವೀಲಿಂಗ್ ಮಾಡುವ ಹುಡುಗರ ಪಾಲಿಗೆ ಈ ಚೆನ್ನಮ್ಮ ಪಡೆ ನರಕದ ಬಾಗಿಲು ತೆರೆಯಲಿದೆ.

ತೊಂದರೆಗೊಳಗಾದವರು 112/9480803349/08182261413/9480800 ಸಂಪರ್ಕಿಸಬಹುದು.

ಪೊಲೀಸ್ ಪ್ರಕಟಣೆಯಲ್ಲೇನಿದೆ?

ಶಿವಮೊಗ್ಗ ಜಿಲ್ಲೆಯಲ್ಲಿ ವಿಧ್ಯಾರ್ಥಿನಿಯರ ರಕ್ಷಣೆಗಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಮಹಿಳೆ ಮತ್ತು ಮಕ್ಕಳ ವಿರುದ್ಧ ದೌರ್ಜನ್ಯ ಮಾಡುವ, ಅಸಭ್ಯವಾಗಿ ವರ್ತಿಸುವವರ ವಿರುದ್ಧ, ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸಮುದಾಯದತ್ತ ಪೊಲೀಸ್ ನ ಭಾಗವಾಗಿ ಚೆನ್ನಮ್ಮ ಪಡೆಯನ್ನು ರಚಿಸಲಾಗಿರುತ್ತದೆ.

ಈ ದಿನ ದಿನಾಂಕಃ 27-05-2024 ರಂದು ಬೆಳಗ್ಗೆ ಶ್ರೀ ಮಿಥುನ್‌ ಕುಮಾ‌ರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು, ಶಿವಮೊಗ್ಗ ನಗರದ ಕಮಲಾ ನೆಹರು ಸ್ಮಾಕರ, ರಾಷ್ಟ್ರೀಯ ಮಹಿಳಾ ಕಾಲೇಜು, ಶಿವಮೊಗ್ಗದಲ್ಲಿ ಚೆನ್ನಮ್ಮ ಪಡೆಗೆ ಚಾಲನೆ ನೀಡಿ, ವಿಧ್ಯಾರ್ಥಿಗಳನ್ನು ಉದ್ದೇಶಿಸಿ, ಈ ಕೆಳಕಂಡಂತೆ ಮಾತನಾಡಿದರು.

1) ವಿಧ್ಯಾರ್ಥಿನಿಯರ ಜೀವನವನ್ನು ರೂಪಿಸುವಲ್ಲಿ ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಣವೇ ಪ್ರಮುಖ ಸಾಧನವಾಗಿರುತ್ತದೆ. ಶಿಕ್ಷಣದಿಂದ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು