ಮತದಾನ ಮಾಡಿ ಬಂದವರಿಗೆ ಉಚಿತ ತಿಂಡಿ, 11 ಗಂಟೆಯ ವರೆಗೆ ನಡೆದ ಮತದಾನವೆಷ್ಟು?

ಸುದ್ದಿಲೈವ್/ಶಿವಮೊಗ್ಗ

ಬೆಳಗ್ಗೆ 7 ರಿಂದ 9 ಗಂಟೆಯ ವರೆಗೆ ಚುರುಕುಗೊಂಡಿದ್ದ ಮತದಾನ 11:00 ಗಂಟೆಗೆ ಬೈಂದೂರು ಹೊರತು ಪಡಿಸಿ ಉಳಿದ ಎಲ್ಲಾ 7 ಕ್ಷೇತ್ರಗಳಲ್ಲಿ ಶೇ. 30 ಕ್ಕಿಂತ ಕಡಿಮೆ ಮತದಾನವಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ: 27.21% ಮತ ಚಲಾವಣೆಯಾಗಿದ್ದು, ಒಟ್ಟು ಮತಗಳು: 1752885 ಮತಗಳಲ್ಲಿ 473585 ಮತಗಳು ಚಲಾವಣೆಗೊಂಡಿದೆ.

ಬೈಂದೂರಿನಲ್ಲಿ 31.22%, ತೀರ್ಥಹಳ್ಳಿ 24.84%,ಶಿವಮೊಗ್ಗ 26.95% ಶಿಕಾರಿಪುರದಲ್ಲಿ 24.64%, ಸಾಗರ 29.54%, ಶಿವಮೊಗ್ಗ ಗ್ರಾಮಾಂತರ 27.02%, ಸೊರಬ 25.1% ಭದ್ರಾವತಿ 24.33% ಮತದಾನ ಆಗಿದೆ.

ಶಿವಮೊಗ್ಗದ ಮಿಳಘಟ್ಟದಲ್ಲಿ 12 ದಿನದ ಮಗುವಿನೊಂದಿಗೆ ಬಂದು ಸರ್ಕಾರಿ ನೌಕರರಾದ ಕವಿತ ಎಸ್ ಮತದಾನ ಮಾಡಿದ್ದಾರೆ. ಸಚಿವ ಮಧು ಬಂಗಾರಪ್ಪ ಕುಬಟೂರಿನ ಮತಗಟ್ಟೆ 31 ರಲ್ಲಿ ಮತಚಲಾಯಿಸಿದರು. ಮಾಜಿ ಎಂಎಲ್ ಸಿ ಆಯನೂರು ಮಂಜುನಾಥ್ ಶಿವಮೊಗ್ಗದ ಕಾಮಾಕ್ಷಿ ಬೀದಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

ಅಬ್ಬಲಗೆರೆಯ ಮತಗಟ್ಟೆಯಲ್ಲಿ 98 ವಯಸ್ಸಿನ ಶಿವಗಂಗಮ್ಮ ಮತದಾನ ಮಾಡಿದ್ದಾರೆ.  88 ವಯಸ್ಸಿನ ಮಲ್ಲಮ್ಮ ಕ ರನ್ನ ವೀಲ್ ಚೇರಿನಿಂದ ಕರೆದುಕೊಂಡು ಬಂದು ಮತಚಲಾಯಿಸಿದ್ದಾರೆ.

ಶುಭಂ ಹೋಟೆಲ್ ನಲ್ಲಿ ಮತದಾರರಿಗೆ ಉಚಿತ ತಿಂಡಿ

ದುರ್ಗಿಗುಡಿಯ ಶುಭಂ ಹೋಟೆಲ್ ನಲ್ಲಿ ಮತದಾರರಿಗೆ ಬೆಳಿಗ್ಗೆಯಿಂದ ಉಚಿತ ತಿಂಡಿ ವಿತರಿಸಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಗೆ ಮತಚಲಾಯಿಸಿ ಬಂದವರಿಗೆ ಉಚಿತ ತಿಂಡಿ ವಿತರಿಸಲಾಗಿದೆ.

ಇದನ್ನೂ ಓದಿ-https://suddilive.in/archives/14376

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close