ನಿಖಿಲ್ ಸೋಲನ್ನ ಶಿವಮೊಗ್ಗದಲ್ಲಿ ತೀರಿಸಿಕೊಳ್ಳಬೇಕಿದೆ-ಹಾಲಪ್ಪ

ಸುದ್ದಿಲೈವ್/ಶಿವಮೊಗ್ಗ

ಮಾಜಿ ಸಿಎಂ ಕುಮಾರ ಸ್ವಾಮಿ ಮತ್ತು ಸಂಸದ ರಾಘವೇಂದ್ರ ಇಬ್ಬರು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಸಚಿವರಾಗಲಿದ್ದಾರೆ ಎಂದು ಮಾಜಿ ಸಚಿವ ಹರತಾಳ ಹಾಲಪ್ಪ ತಿಳಿಸಿದರು.

ಅವರು ಪೆಸಿಟ್ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿ, ಕುಮಾರ ಸ್ವಾಮಿ ಅವರು ಕೃಷಿ ಸಚಿವರಾಗಿಯೇ ಬರಲಿ ಎಂದು ಆಶಿಸಿದರು.

ಕಾಂಗ್ರೆಸ್ ನ ಅಭ್ಯರ್ಥಿಗೆ ಅರಣ್ಯ ಇಲಾಖೆಯ ಸೂಕ್ಷತೆ ಗೊತ್ತೆ, ಸಮಸ್ಯೆ ಆಲಿಸುವ ವ್ಯವಧಾನ ವಿದೆಯೇ ಎಂದು ಪ್ರಶ್ನಿಸಿದ ಹರತಾಳು ಹಾಲಪ್ಪ, ಮುಳುಗಡೆ ಸಂತ್ರಸ್ತರು ಇಲ್ಲಿಗೆ ಹೇಗೆ ಬಂದ್ರು? ಯಾಕೆ ಬಂದ್ರು? ಎಂಬುದು ಇತಿಹಾಸ ಅವರಿಗೆ ಗೊತ್ತಾ? ರಾಜ್ ಕುಟುಂಬ ಮತ್ತು ಬಂಗಾರಪ್ಪನವರಿಗೆ ಗೊತ್ತಿದೆ. ಮಗಳಿಗೆ ಗೊತ್ತಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಒಳ್ಳೆಯ ಮಹಿಳೆಯೇ ಆದರೆ ಅವರು ಮತಪಡೆಯಲು ಯೋಗ್ಯರಲ್ಲ. ನಿಖಿಲ್ ಕುಮಾರ್ ಸ್ವಾಮಿಯನ್ನ ರಾಮನಗದಲ್ಲಿ ಎರಡನೇ ಬಾರಿ ಸೊಲಿಸಿದರು. ಜನ ಎಷ್ಟು ಕೀಳುಮಟ್ಟದಲ್ಲಿ ಇದ್ದಾರೆ ಎಂದರೆ ಅವರನ್ನ ಎರಡನೇ ಬಾರಿ ಸೋಲಿಸಿ ಖುಷಿಪಟ್ಟವರು ಇದ್ದಾರೆ. ಜೆಡಿಎಸ್ ನಿಖಿಲ್ ಸೋಲನ್ನ ಇಲ್ಲಿ ರಾಘವೇಂದ್ರರನ್ನ ತೀರಿಸಿಕೊಳ್ಳಬೇಕು. ನಿಖಿಲ್ ಸೋಲನ್ನ ನನ್ನ ಮಗನ ಸೋಲೆಂದು ಪರಿಗಣಿಸಿರುವೆ, ಜೀವನ ಪರ್ಯಾಂತ ಮರೆಯೊಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳು ಕೂತರೆ ಏಳಲು ಆಗಲ್ಲ, ಏದ್ದರೆ ಕೂರಲು‌ಆಗಲ್ಲ. ಆದರೆ ಶಿವಮೊಗ್ಗದ ಕ್ಷೇತ್ರಕ್ಕೆ ಸೂಕ್ತರಲ್ಲ. ಸಚಿವ ಮಧು ಬಂಗಾರಪ್ಪನವರ ಠೇಂಕಾರ ಮತ್ತು ಅಹಂಕಾರ ನೋಡುದ್ರೆ ಹತ್ತಿರ ಹೋಗಲು ಸಾಧ್ಯವಿಲ್ಲ. ಬಿಎಸ್ ವೈ ಮಕ್ಕಳನ್ನ ನೋಡಿ ಸಂಸ್ಕೃತಿಯನ್ನ‌ಕಲಿಯಲಿ ಎಂದರು.

ಗೀತಕ್ಕರಿಗೆ ಶಿವಮೊಗ್ಗದಲ್ಲಿ ಮತವೇ ಇಲ್ಲ. ಇಲ್ಲಿ ಬಂದು ಸ್ಪರ್ಧಿಸುತ್ತಿದ್ದಾರೆ. ಮೋದಿ, ದೇವೇಗೌಡರನ್ನ, ಕುಮಾರ ಸ್ವಾಮಿಯವರನ್ನ ಗೆಲ್ಲಿಸಲು ರಾಘವೇಂದ್ರರಿಗೆ ಆಶೀರ್ವದಿಸಬೇಕು ಎಂದರು.

ಸಂಸದ ರಾಘವೇಂದ್ರ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಜ್ವಲಂತವಾಗಿಟ್ಟುರುವುದು ಕಾಂಗ್ರೆಸ್ ನ ಪಾಪದ ಕೂಸಾಗಿದೆ. ಸರಿಪಡಿಸಲು ಆಗದಂತೆ ಮಾಡಿದೆ ಎಂದರು.

ಪಂಚಾಯತಿ ಚುನಾವಣೆ ತರ 23 ಜನ ಸ್ಪರ್ಧಿಸುತ್ತಿದ್ದಾರೆ ಎರಡು ವಿವಿ ಪ್ಯಾಡ್ ಇರುತ್ತದೆ. ನನ್ನ ಕ್ರಮ ಸಂಖ್ಯೆ 2 ಮತ ಹಾಕುವಂತೆ ಕೋರಿದರು. ದೇಶದಲ್ಲಿ ಪ್ರಧಾನಿ ಮೋದಿ ಪ್ರಧಾನಿಯಾಗಲಿದ್ದಾರೆ ಕುಮಾರಣ್ಣ‌ಸಹ ಸಚಿವರಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಇದನ್ನೂ ಓದಿ-https://suddilive.in/archives/13840

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket